ಜಾನ್ ಸೀನಾ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಎಂಎಸ್ ಧೋನಿ ಫೋಟೋ: ಅಭಿಮಾನಿಗಳಲ್ಲಿ ಗರಿಗೆದರಿದ ಕುತೂಹಲ

WWE ಸೂಪರ್ ಸ್ಟಾರ್ ಜಾನ್ ಸೀನಾ ಇನ್ಸ್ಟಾಗ್ರಾಮ್ನಲ್ಲಿ ಅರ್ಥವಾಗದ ರೀತಿಯ ಪೋಸ್ಟ್ ಹಾಕಿ ಅಭಿಮಾನಿಗಳನ್ನು ಗೊಂದಲದಲ್ಲಿ ಸಿಲುಕಿಸುವುದರಲ್ಲಿ ನಿಸ್ಸೀಮರು. ಈಗ ಜಾನ್ ಸೀನಾ ಕ್ರಿಕೆಟ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಅದರಲ್ಲೂ ಜಾನ್ ಸೀನಾ ಪೋಸ್ಟ್ ನೋಡಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರೀ ತಲೆ ಕೆಡಿಸಿಕೊಂಡಿದ್ದಾರೆ. ಜಾನ್ ಸೀನಾ ಪೋಸ್ಟ್‌ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಅಷ್ಟಕ್ಕೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೀಗೆ ತಲೆ ಕೆಡಿಸಿಕೊಳ್ಳಲು ಕಾರಣ ಜಾನ್ ಸೀನಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಎಂಎಸ್ ಧೋನಿ ಫೋಟೋವೊಂದನ್ನು ಹಂಚಿಕೊಂಡಿರುವುದು. ಧೋನಿ ಶೇಕ್ ಹ್ಯಾಂಡ್‌ಗೆ ಮುಂದಾಗಿರುವ ಫೋಟೋವನ್ನು ಹಂಚಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಟಿ20 ವಿಶ್ವಕಪ್, ಆಸ್ಟ್ರೇಲಿಯಾ vs ನ್ಯೂಜಿಲೆಂಡ್: ಫೈನಲ್ ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿಟಿ20 ವಿಶ್ವಕಪ್, ಆಸ್ಟ್ರೇಲಿಯಾ vs ನ್ಯೂಜಿಲೆಂಡ್: ಫೈನಲ್ ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಬೇಕಾದ ಮಾಹಿತಿ

ಜಾನ್ ಸೀನಾ ಹಂಚಿಕೊಂಡಿರುವ ಈ ಫೋಟೋದಲ್ಲಿ ಧೋನಿ ಯಾರಿಗೂ ಶೇಕ್ ಹ್ಯಾಂಡ್ ಮಾಡುತ್ತಿಲ್ಲ. ಆದರೆ ಶೇಕ್ ಹ್ಯಾಂಡ್ ಮಾಡಲು ಮುಂದಾಗುತ್ತಿದ್ದಾರೆ. ಹೀಗಾಗಿ ಜಾನ್ ಸೀ‍ನಾ ಅವರ ಜನಪ್ರಿಯ "ಯು ಕಾಂಟ್ ಸೀ ಮಿ" ಡೈಲಾಗ್‌ಗೆ ಸಂಬಂಧ ಕಲ್ಪಿಸಿ ಪ್ರತಿಕ್ರಿಯೆ ನಿಡುತ್ತಿದ್ದಾರೆ. ಇಬ್ಬರು ದಿಗ್ಗಜರು ಕೈಕುಲುಕಿತ್ತಿದ್ದಾರೆ ಎಂಬರ್ಥದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಹಾಗಂತ ಭಾರತೀಯ ಸೆಲೆಬ್ರಿಟಿಗಳ ಫೋಟೋಗಳನ್ನು ಜಾನ್ ಸೀನಾ ಹಂಚಿಕೊಳ್ಳುತ್ತಿರುವುದ ಇದೇನು ಮೊದಲಲ್ಲ. ಈ ಹಿಂದೆಯೂ ಶಾರೂಖ್ ಖಾನ್, ವಿರಾಟ್ ಕೊಹ್ಲಿ, ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಫೋಟೋಗಳನ್ನು ಹಂಚುಕೊಂಡಿದ್ದರು. ಇದೀಗ ಈ ಪಟ್ಟಿಗೆ ಎಂಎಸ್ ಧೋನಿ ಕೂಡ ಸೇರಿಕೊಂಡಿದ್ದಾರೆ. WWE ಸ್ಟಾರ್ ಆಗಿರುವ ಜಾನ್ ಸೀನಾ ಹಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಿ ಖ್ಯಾತರಾಗಿದ್ದಾರೆ. ಆದರೆ 2021ರ WWE ಕಣಕ್ಕೆ ಮತ್ತೆ ಇಳಿದಿದ್ದರು. 'ಮನಿ ಇನ್ ದಿ ಬ್ಯಾಂಕ್'ನ 2021ರ ಆವೃತ್ತಿಯಲ್ಲಿ ಜಾನ್ ಸೀನಾ ಕಾಣಿಸಿಕೊಂಡಿದ್ದಾರೆ.

ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್ಬುಮ್ರಾರ ಅರ್ಧದಷ್ಟು ಬೌಲರ್ ಆಗಿದ್ರೆ ಸಾಕಿತ್ತು, ತುಂಬಾ ಖುಷಿಯಾಗಿರುವೆ: ನವೀನ್ ಉಲ್ ಹಕ್

ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿಯನ್ನು ಘೋಷಿಸಿದ್ದಾರೆ. 2019ರ ಏಕದಿನ ವಿಶ್ವಕಪ್‌ನ ಬಳಿಕ ಕ್ರಿಕೆಟ್‌ನಿಂದ ದೂರವುಳಿದಿದ್ದ ಎಂಎಸ್ ಧೋನಿ ನಂತರ 2020ರ ಆಗಸ್ಟ್‌ 15ರಂದು ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಐಪಿಎಲ್‌ನಲ್ಲಿ ಮಾಹಿ ಇನ್ನು ಸಕ್ರಿಯವಾಗಿದ್ದು ಆಡುತ್ತಿದ್ದಾರೆ. ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಇನ್ನು ಎಂಎಸ್ ಧೋನಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿ ತಂಡದ ಭಾಗವಾಗಿದ್ದರು. ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಜಾನ್ ಸೀನಾ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಕೂಡ ಇದೇ ಸಂದರ್ಭದ್ದಾಗಿದೆ.

T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, November 14, 2021, 15:56 [IST]
Other articles published on Nov 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X