ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ಭಾರತ ತಂಡದ ಮೇಲೆ ಧೋನಿ ಈಗಲೂ ಪ್ರಭಾವ ಬೀರುತ್ತಿದ್ದಾರಾ?!

MS Dhoni influence on Team India-Players reveal impact of the man

ಲಂಡನ್, ಜುಲೈ 4: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಒಂದಿಷ್ಟು ಟೀಕೆಗಳು ಕೇಳಿಬರುತ್ತಿದ್ದರೂ ಕೂಲ್ ಕ್ಯಾಪ್ಟನ್‌ಗೆ ಭಾರತದ ಎಲ್ಲಾ ಆಟಗಾರರ ಬೆಂಬಲ ದೊರೆತಿದೆ. ಭಾರತ ತಂಡದ ಪ್ರಮುಖ ಆಟಗಾರರೆಲ್ಲರೂ ಧೋನಿ ಪರ ಬ್ಯಾಟ್ ಬೀಸುತ್ತಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ದುರದೃಷ್ಟವಶಾತ್ ಈ ಬಾರಿಯ ವಿಶ್ವಕಪ್‌ನಲ್ಲಿ ಧೋನಿ ಗಮನಾರ್ಹ ಪ್ರದರ್ಶನ ತೋರಿಸಿಲ್ಲ. ಅನುಭವಿ ಆಟಗಾರ, ಬೆಸ್ಟ್ ಫಿನಿಷರ್, ಮಿಂಚಿನ ವೇಗದಲ್ಲಿ ಔಟ್ ಮಾಡಬಲ್ಲ ಅದ್ಭುತ ವಿಕೆಟ್ ಕೀಪರ್, ಔಟ್-ನಾಟೌಟನ್ನು ಡಿಆರ್‌ಎಸ್‌ಗೂ ಮುಂಚಿತವಾಗಿಯೇ ನಿರ್ಧರಿಸಬಲ್ಲ ಸಾಮರ್ಥ್ಯವುಳ್ಳವರು ಎಂದು ಧೋನಿ ಕರೆಸಿಕೊಂಡಿದ್ದವರು.

ಇಂಗ್ಲೆಂಡ್ ಎದುರು ಕಿವೀಸ್‌ಗೆ ಸೋಲು: ಸೆಮಿಫೈನಲ್ ಲೆಕ್ಕಾಚಾರವೇನು!?ಇಂಗ್ಲೆಂಡ್ ಎದುರು ಕಿವೀಸ್‌ಗೆ ಸೋಲು: ಸೆಮಿಫೈನಲ್ ಲೆಕ್ಕಾಚಾರವೇನು!?

ಈ ವಿಶ್ವಕಪ್‌ನಲ್ಲಿ ಈ ವಿಶೇಷ ಸಾಮರ್ಥ್ಯಗಳಿಗೆ ನ್ಯಾಯ ಒದಗಿಸುವ ರೀತಿಯಲ್ಲಿ ಧೋನಿ ಆಡಿಲ್ಲ. ಅಂತಿಮ ಓವರ್‌ಗಳಲ್ಲಿ ಹೆಚ್ಚಿನ ರನ್‌ನ ಅಗತ್ಯವಿದ್ದಾಗಲೂ ಧೋನಿ ನೀರಸ ಬ್ಯಾಟಿಂಗ್ ಮೊರೆ ಹೋಗುತ್ತಿದ್ದಾರೆ. ಒಂದೊಮ್ಮೆ ದೊಡ್ಡ ಹೊಡೆತಗಳಿಗೆ ಯತ್ನಿಸಿದರೂ ಸಫಲರಾಗುತ್ತಿಲ್ಲ. ಹೀಗಾಗಿ ಧೋನಿಯ ಬಗ್ಗೆ ಕ್ರಿಕೆಟ್‌ ವಲಯದಲ್ಲಿ ಬೇಸರವೂ ವ್ಯಕ್ತವಾಗಿತ್ತು.

ರೋಹಿತ್‌ ಬ್ಯಾಟಿಂಗ್‌ ಕುರಿತಾಗಿ ಮಾತನಾಡಿದ ವಿರಾಟ್‌ ಕೊಹ್ಲಿರೋಹಿತ್‌ ಬ್ಯಾಟಿಂಗ್‌ ಕುರಿತಾಗಿ ಮಾತನಾಡಿದ ವಿರಾಟ್‌ ಕೊಹ್ಲಿ

ಆದರೆ ಧೋನಿ ಈಗಲೂ ಪಂದ್ಯದ ವೇಳೆಯ ಸಂದರ್ಭಗಳಿಗಳನ್ನು ಅರ್ಧ ಮಾಡಿಕೊಳ್ಳಬಲ್ಲರು, ಆ ಕ್ಷಣಕ್ಕೆ ಏನು ಬೇಕು ಎಂಬುದನ್ನು ಅರ್ಥೈಸಿಕೊಂಡು ನಿರ್ಧಾರಗಳನ್ನು ಕೈಗೊಳ್ಳಬಲ್ಲರು ಎಂದು ಭಾರತ ತಂಡದಲ್ಲಿರುವ ಎಲ್ಲಾ ಆಟಗಾರರೂ ನಂಬಿದ್ದಾರೆ. ಇದಕ್ಕೆ ಪುರಾವೆಯೆಂಬಂತೆ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಧೋನಿ ಪರ ಹೇಳಿಕೆ ನೀಡಿದ್ದರು.

ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!ರಾಯುಡು ಬೇಡ ಮಯಾಂಕ್‌ ಬೇಕೆಂದಿದ್ದು, ಕೊಹ್ಲಿ ಮತ್ತು ಶಾಸ್ತ್ರಿ!

'ಪ್ರಾಮಾಣಿಕವಾಗಿ ಹೇಳೋದಾದರೆ, ಬ್ಯಾಟಿಂಗ್ ವಿಚಾರದಲ್ಲಿ ನಾವೇನು ಇಂಗ್ಲೆಂಡ್‌ನಂತಲ್ಲ. ಬೆನ್ ಸ್ಟೋಕ್ಸ್ ಆದರೆ ತನಗನ್ನಿಸಿದ ಏನನ್ನಾದರೂ ಹೇಳಬಲ್ಲ. ಯಾಕೆಂದರೆ ಇಂಗ್ಲೆಂಡ್‌ನಲ್ಲಿ ಕೊನೆಯ 10ನೇ ಕ್ರಮಾಂಕದವರೆಗೂ ಬ್ಯಾಟ್ಸ್ಮನ್‌ಗಳಿದ್ದಾರೆ. ಆದರೆ ನಮ್ಮಲ್ಲಿ ಹಾಗಿಲ್ಲ. ಹೀಗಾಗಿ ಧೋನಿಯ ಅವಶ್ಯಕತೆ ನಮಗಿನ್ನೂ ಇದೆ' ಎಂದು ಭಾರತ ತಂಡದ ಸದಸ್ಯರೊಬ್ಬರು ಐಎಎನ್‌ಎಸ್ ಜೊತೆ ಹೇಳಿಕೊಂಡಿದ್ದಾರೆ. ಮತ್ತೊಬ್ಬ ಆಟಗಾರ, ಧೋನಿ ಉಪಸ್ಥಿತಿ ನಾಯಕ ಕೊಹ್ಲಿಯ ಒತ್ತಡ ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

Story first published: Thursday, July 4, 2019, 15:39 [IST]
Other articles published on Jul 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X