ಎಂಎಸ್ ಧೋನಿ ನನಗೆ ಮಾರ್ಗದರ್ಶಕನಿದ್ದಂತೆ ಎಂದ ರಿಷಭ್ ಪಂತ್

ನವದೆಹಲಿ, ಮೇ 2: ಟೀಮ್ ಇಂಡಿಯಾ ಮಾಜಿ ನಾಯಕ ಎ೦ಎಸ್ ಧೋನಿ ನನಗೆ ಮಾರ್ಗದರ್ಶಕನಿದ್ದಂತೆ ಎಂದು ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್ ಹೇಳಿದ್ದಾರೆ. ಧೋನಿ ಮೈದಾನದಲ್ಲಿ ಮತ್ತು ಮೈದಾನದ ಹೊರತಾಗಿಯೂ ನನಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ, ಸಹಾಯ ಮಾಡುತ್ತಿರುತ್ತಾರೆ ಎಂದು ಪಂತ್ ಹೇಳಿಕೊಂಡಿದ್ದಾರೆ.

ಐಪಿಎಲ್ ನಡೆಯುತ್ತೋ, ನಡೆಯಲ್ವಾ ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಇನ್‌ಸ್ಟಾಗ್ರಾಮ್‌ನಲ್ಲಿ ನಡೆಸಿದ ವೀಡಿಯೋ ಚಾಟ್‌ನಲ್ಲಿ ಮಾತನಾಡಿದ ರಿಷಭ್ ಪಂತ್ ಧೋನಿ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು. ಪಂತ್‌, ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿರುವ ಆಕರ್ಷಣೀಯ ಆಟಗಾರ.

ತೆಲುಗು ಸಾಂಗ್ 'ಬುಟ್ಟ ಬೊಮ್ಮ'ಗೆ ಹೆಜ್ಜೆ ಹಾಕಿದ ಡೇವಿಡ್ ವಾರ್ನರ್: ವೀಡಿಯೋ

'ಧೋನಿ ನನಗೆ ಮೆಂಟರ್ ಇದ್ದಂತೆ. ಆತ ನನಗೆ ಮೈದಾನದಲ್ಲಿ ಅಥವಾ ಮೈದಾನದ ಹೊರತಾಗಿಯೂ ಸಹಾಯ ಮಾಡುತ್ತಾರೆ. ಧೋನಿ ನನಗೆ ಕೆಲವೊಂದು ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡುತ್ತಾನೆ. ಹಾಗಂತ ಆತನಿಗೇ ಅವಲಂಬಿತನಾಗದಿರಲು ನಾನು ಪ್ರಯತ್ನಿಸುತ್ತಿರುತ್ತೇನೆ,' ಎಂದು ಪಂತ್ ವಿವರಿಸಿದ್ದಾರೆ.

ಆತನಂತಾ ನಾಯಕನಿಂದ ಮಾತ್ರ ತಂಡ ಚಾಂಪಿಯನ್ ಆಗಲು ಸಾಧ್ಯ: ಯೂಸುಫ್ ಪಠಾಣ್

ಅಷ್ಟೇ ಅಲ್ಲ, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸುರೇಶ್ ರೈನಾ ಕೂಡ ತನಗೆ ಮಾರ್ಗದರ್ಶನ ಮಾಡುತ್ತಿರುವುದಾಗಿ ಪಂತ್ ಹೇಳಿಕೊಂಡಿದ್ದಾರೆ. ನಿನ್ನ ಫೇವರಿಟ್ ಬ್ಯಾಟಿಂಗ್ ಪಾರ್ಟ್ನರ್ ಯಾರು ಎಂಬ ಪ್ರಶ್ನಗೆ ಪಂತ್, ಧೋನಿ ಎಂದು ಉತ್ತರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, May 2, 2020, 9:20 [IST]
Other articles published on May 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X