ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲ್ಯಾಂಡ್ ಟಿ20: ಎಂಎಸ್‌ ಧೋನಿ ಅಪರೂಪದ ದಾಖಲೆ

ಎಂ ಎಸ್‌ ಧೋನಿ ಅಪರೂಪದ ದಾಖಲೆ..! | Oneindia Kannada
MS Dhoni joins elite list, becomes first India cricketer to achieve this feat

ಹ್ಯಾಮಿಲ್ಟನ್, ಫೆಬ್ರವರಿ 10: ಭಾರತದ ಅನುಭವಿ ಆಟಗಾರ ಎಂಎಸ್ ಧೋನಿ ಅಪರೂಪದ ಸಾದನೆಗಾಗಿ ಗುರುತಿಸಿಕೊಂಡಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ಮೂರನೇ ಪಂದ್ಯದಲ್ಲಿ ಧೋನಿ 300 ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಆಟಗಾರನಾಗಿ ಗಮನ ಸೆಳೆದರು.

ಹ್ಯಾಮಿಲ್ಟನ್, ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 4 ರನ್ ರೋಚಕ ಜಯಹ್ಯಾಮಿಲ್ಟನ್, ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 4 ರನ್ ರೋಚಕ ಜಯ

ಭಾನುವಾರ (ಫೆಬ್ರವರಿ 10) ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಭಾರತ vs ನ್ಯೂಜಿಲ್ಯಾಂಡ್ ನಡುವಣ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಧೋನಿ 300 ಟಿ20 ಪಂದ್ಯಗಳ ಮೈಲಿಗಲ್ಲು ಸ್ಥಾಪಿಸಿದರು. ಇದರಲ್ಲಿ 96 ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಉಳಿದವು ಇಂಡಿಯನ್ ಸೂಪರ್‌ ಲೀಗ್ (ಐಪಿಎಲ್) ಪಂದ್ಯಗಳಾಗಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಿದರೆ ಈ ಸಾಧನೆಗಾಗಿ ಮಾಹಿ, ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್, ಪಾಕಿಸ್ತಾನದ ಶೋಯೆಬ್ ಮಲ್ಲಿಕ್ ಮತ್ತು ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಈ ಮೂವರೂ 300ಕ್ಕೂ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಈ ಯಾದಿಯಲ್ಲಿ ಅಗ್ರ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕೀರನ್ ಪೊಲಾರ್ಡ್ ಒಟ್ಟು 446 ಪಂದ್ಯಗಳನ್ನಾಡಿದ್ದಾರೆ.

ಮಹಿಳಾ ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 2 ರನ್ ರೋಚಕ ಜಯಮಹಿಳಾ ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 2 ರನ್ ರೋಚಕ ಜಯ

ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿದ್ದ ಎಂಎಸ್ ಧೋನಿ ಒಂದು ಸ್ಟಂಪ್ಡ್ ಮತ್ತು ಕ್ಯಾಚ್ ಪಡೆದು ನ್ಯೂಜಿಲ್ಯಾಂಡ್ ವಿಕೆಟ್ ಮುರಿಯುವಲ್ಲಿ ನೆರವಾಗಿದ್ದರು. ಆದರೆ ಕೇವಲ 2 ರನ್‌ಗೆ ಡ್ಯಾರಿಲ್ ಮಿಚೆಲ್‌ಗೆ ವಿಕೆಟ್ ಒಪ್ಪಿಸಿದರು. ಭಾರತ ಈ ಪಂದ್ಯವನ್ನು ಕೇವಲ 4 ರನ್‌ನಿಂದ ಸೋತಿತ್ತಲ್ಲದೆ ಟಿ20 ಸರಣಿಯನ್ನು 2-1ರಿಂದ ಕಳೆದುಕೊಂಡಿತ್ತು.

Story first published: Sunday, February 10, 2019, 18:53 [IST]
Other articles published on Feb 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X