ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೆನ್ನೈಗೆ ಬಂದಿಳಿದ ಎಂಎಸ್ ಧೋನಿ, ಆಗಸ್ಟ್ 13ರಂದು ಸಿಎಸ್‌ಕೆ ಯುಎಇಗೆ ತೆರಳುವ ಸಾಧ್ಯತೆ

MS Dhoni lands in Chennai, CSKs Indian players likely leave for UAE on August 13

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಆಗಸ್ಟ್ 10ರ ಮಂಗಳವಾರ ಚೆನ್ನೈಗೆ ಬಂದಿಳಿದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯ ಇನ್ನುಳಿದ ಪಂದ್ಯಗಳಿಗಾಗಿ ಸಿಎಸ್‌ಕೆ ತಂಡ ಆಗಸ್ಟ್ 13ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳುವ ನಿರೀಕ್ಷೆಯಿದೆ. ಸಿಎಸ್‌ಕೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಐಪಿಎಲ್ ದ್ವಿತೀಯ ಹಂತದ ಪಂದ್ಯಗಳಲ್ಲಿ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!ಚಿನ್ನ ವಿಜೇತ ನೀರಜ್‌ಗೆ ಕೋಚಿಂಗ್ ನೀಡಿದ್ದ ಕರ್ನಾಟಕದ ಕಾಶೀನಾಥ್ ಕುರಿತು ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು!

ಭಾರತದಲ್ಲಿ ಆರಂಭಗೊಂಡಿದ್ದ 2021ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ 29 ಪಂದ್ಯಗಳ ಬಳಿಕ ಕೋವಿಡ್-19 ಕಾರಣದಿಂದಾಗಿ ಅರ್ಧಕ್ಕೆ ನಿಲುಗಡೆಯಾಗಿತ್ತು. ಹೀಗಾಗಿ ಐಪಿಎಲ್ 2021ರ ಇನ್ನುಳಿದ ಪಂದ್ಯಗಳು ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿದೆ.

ಲಭ್ಯರಿರುವ ಎಲ್ಲಾ ಆಟಗಾರರು ಯುಎಇಗೆ ಪ್ರಯಾಣ
"ಐಪಿಎಲ್ ದ್ವಿತೀಯ ಹಂತದ ಪಂದ್ಯಗಳಿಗಾಗಿ ಲಭ್ಯರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎಲ್ಲಾ ಆಟಗಾರರು ಆಗಸ್ಟ್ 13ರಂದು ಯುಎಇಗೆ ತೆರಳುವ ಎಲ್ಲಾ ಸಾಧ್ಯತೆಗಳಿವೆ," ಎಂದು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಪಿಟಿಐಗೆ ತಿಳಿಸಿದ್ದಾರೆ. ಐಪಿಎಲ್‌ಗಾಗಿ ಎಂಎಸ್ ಧೋನಿ ಚೆನ್ನೈಗೆ ಬಂದಿಳಿದಿರುವುದನ್ನು ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಸಂಭ್ರಮಿಸಿದ್ದಾರೆ. 'ಲಯನ್ ಡೇ ಎಂಟ್ರಿ' ಎಂದು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದು ಧೋನಿ ಚೆನ್ನೈಗೆ ಆಗಮಿಸುತ್ತಿರುವ ಫೋಟೋ ಹಾಕಿಕೊಂಡಿದೆ. ಸಿಎಸ್‌ಕೆ ತಂಡದ ಆಟಗಾರರು ಯುಎಇಗೆ ತೆರಳುವ ಮುನ್ನ ಆಟಗಾರರಿಗೆ ಅಭ್ಯಾಸ ನಡೆಯುತ್ತಿಲ್ಲ ಎಂದು ವಿಶ್ವನಾಥನ್ ಮಾಹಿತಿ ನೀಡಿದ್ದಾರೆ.

ಕೆಎಲ್ ರಾಹುಲ್ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ನೀಡಬೇಕು: ಸಂಜಯ್ ಮಂಜ್ರೇಕರ್ಕೆಎಲ್ ರಾಹುಲ್ ಬದಲಿಗೆ ಬೇರೆ ಆಟಗಾರನಿಗೆ ಅವಕಾಶ ನೀಡಬೇಕು: ಸಂಜಯ್ ಮಂಜ್ರೇಕರ್

ಬಯೋಬಬಲ್ ನಿರ್ಬಂಧ ಸಡಿಲಿಕೆ
ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಆರಂಭವಾಗುವಾಗ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು, ಸಿಬ್ಬಂದಿಗಳು ಪ್ರವಾಸ ಸರಣಿಯಲ್ಲಿರುತ್ತಾರೆ. ಅವರೆಲ್ಲಾ ಬಯೋಬಬಲ್ ಒಳಗೇ ಇರುವುದರಿಂದ ಅಲ್ಲಿನ ಬಯೋಬಬಲ್‌ನಿಂದ ನೇರವಾಗಿ ಯುಎಇಯಲ್ಲಿರುವ ಐಪಿಎಲ್ ಬಯೋಬಬಲ್‌ಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು ಐಪಿಎಲ್ ಆರಂಭಕ್ಕೂ ಮುನ್ನ ಬೇರೆ ಬಯೋಬಬಲ್ ಒಳಗಿದ್ದರೆ ಅವರು ನೇರವಾಗಿ ಐಪಿಎಲ್ ಬಯೋಬಬಲ್ ಒಳಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಅಂದ್ಹಾಗೆ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್‌ಗಾಗಿ ಯುಎಇಗೆ ತೆರಳಲಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ತಿಳಿಸಿದೆ.

ದ್ವಿತೀಯ ಹಂತದ ಐಪಿಎಲ್ ಯಾವಾಗ ಆರಂಭ?
ಮೊದಲ ಹಂತದ ಐಪಿಎಲ್‌ನಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು ಉಳಿದ 31 ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನಲ್ಲಿ ನಡೆಯಲಿವೆ. ದ್ವಿತೀಯ ಹಂತದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್‌ 19ರಿಂದ ಆರಂಭಗೊಳ್ಳಲಿವೆ. ಅಕ್ಟೋವರ್‌ 13ರಂದು ಫೈನಲ್‌ ನಡೆಯಲಿದೆ. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ.

Story first published: Wednesday, August 11, 2021, 0:33 [IST]
Other articles published on Aug 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X