ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ಹಿನ್ನೆಲೆ ಐಪಿಎಲ್ ಮುಂದೂಡಿಕೆ: ಚೆನ್ನೈ ತೊರೆದ ಎಂ.ಎಸ್‌ ಧೋನಿ

 Ms Dhoni Leaves Chennai After Ipl 2020 Postponed Till April 15

ಟೀಮ್ ಇಂಡಿಯಾ ಮಾಜಿ ನಾಯಕ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಚೆನ್ನೈಯಿಂದ ವಾಪಾಸಾಗಿದ್ದಾರೆ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಐಪಿಎಲ್‌ಅನ್ನು ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಧೋನಿ ಚೆನ್ನೈನಿಂದ ರಾಂಚಿಗೆ ಮರಳಿದ್ದಾರೆ.

ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?ಐಪಿಎಲ್ ರದ್ದಾದರೆ ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ!?

ಈ ತಿಂಗಳ ಆರಂಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಧೋನಿ ಚೆನ್ನೈಗೆ ಆಗಮಿಸಿ ಅಭ್ಯಾಸವನ್ನು ಆರಂಭಿಸಿದ್ದರು. ಚೆನ್ನೈ ತಂಡದ ಇತರ ಸದಸ್ಯರು ಧೋನಿಗೆ ಸಾಥ್ ನೀಡಿದ್ದರು. ಧೋನಿ ಅಭ್ಯಾಸವನ್ನು ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಚೆನ್ನೈ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಬಲಿಸುತ್ತಿದ್ದರು.

ತನ್ನನ್ನು ನೋಡಲು ಬರುತ್ತಿದ್ದ ಅಭಿಮಾನಿಗಳು ಧೋನಿ ನಿತ್ಯವೂ ನೆಟ್ಸ್‌ನಲ್ಲಿ ಭರ್ಜರಿ ಹೊಡೆತಗಳನ್ನು ಬಾರಿಸುವ ಮೂಲಕ ಮನರಂಜಿಸುತ್ತಿದ್ದರು.

ಶನಿವಾರ ಅಭ್ಯಾಸ ಶಿಬಿರ ಮೊಟಕು

ಶನಿವಾರ ಅಭ್ಯಾಸ ಶಿಬಿರ ಮೊಟಕು

ಸದ್ಯ ಬಿಸಿಸಿಐ ಐಪಿಎಲ್ ಅನ್ನು ಏಪ್ರಿಲ್ 15ರವರೆಗೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶನಿವಾರ ಅಭ್ಯಾಸ ಶಿಬಿರವನ್ನು ಮೊಟಕುಗೊಳಿಸುವ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ಬೆಳವಣಿಗೆಯ ಬಳಿಕ ಧೋನಿ ಭಾನುವಾರ ಚೆನ್ನೈಯಿಂದ ವಾಪಾಸ್ಸಾಗಿದ್ದಾರೆ.

ಕ್ರಿಕೆಟ್‌ನಿಂದ ದೂರವಾಗಿದ್ದ ಧೋನಿ

ಕ್ರಿಕೆಟ್‌ನಿಂದ ದೂರವಾಗಿದ್ದ ಧೋನಿ

ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ ಕಳೆದ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಸೋತು ಹೊರಬಿದ್ದ ಬಳಿಕ ಕ್ರಿಕೆಟ್‌ನಿಂದ ದೂರವಾಗಿದ್ದರು. ಕ್ರಿಕೆಟ್ ಅಭ್ಯಾಸದಿಂದಲೂ ಧೋನಿ ದೂರವಾಗಿದ್ದರು.

ಸಹಪಾಠಿಗಳ ಜೊತೆ ಭರ್ಜರಿ ತಾಲೀಮು

ಸಹಪಾಠಿಗಳ ಜೊತೆ ಭರ್ಜರಿ ತಾಲೀಮು

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಚಟುವಟಿಕೆಗಳಿಂದ ದೂರವಾಗಿದ್ದರು. ಐಪಿಎಲ್ ಹಿನ್ನೆಲೆಯಲ್ಲಿ ಮತ್ತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚೆನ್ನೈ ತಂಡದ ಇತರ ಸದಸ್ಯರಾದ ಸುರೇಶ್ ರೈನಾ ಅಂಬಾಟಿ ರಾಯುಡು ಸೇರಿದಂತೆ ಇತರ ಸದಸ್ಯರೊಂದಿಗೆ ನಿತ್ಯವೂ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದರು.

ವಿಶ್ವಕಪ್‌ಗೆ ನಿರ್ಣಾಯಕ

ವಿಶ್ವಕಪ್‌ಗೆ ನಿರ್ಣಾಯಕ

ಧೋನಿ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎನ್ನುವುದು ಇನ್ನೂ ಖಚಿತವಾಗಿಲ್ಲ. ಐಪಿಎಲ್ ಪ್ರದರ್ಶನದ ಆಧಾರದಲ್ಲಿ ಆವರ ಅಂತಾರಾಷ್ಟ್ರೀಯ ಕಮ್‌ಬ್ಯಾಕ್‌ಗೆ ವೇದಿಕೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಧೋನಿ ಪ್ರದರ್ಶನದ ಮೇಲೆ ಎಲ್ಲರ ದೃಷ್ಟಿನೆಟ್ಟಿದೆ.

ಮುಂದಿನ ಬೆಳವಣಿಗೆಗಳ ಆಧಾರದಲ್ಲಿ ತಿರ್ಮಾನ

ಮುಂದಿನ ಬೆಳವಣಿಗೆಗಳ ಆಧಾರದಲ್ಲಿ ತಿರ್ಮಾನ

ಸದ್ಯ ಐಪಿಎಲ್‌ಅನ್ನು ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. ಕೊರೊನಾ ಭೀತಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳ ಆಧಾರದಲ್ಲಿ ಬಿಸಿಸಿಐ ಐಪಿಎಲ್ ಕುರಿತಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ

Story first published: Monday, March 16, 2020, 9:39 [IST]
Other articles published on Mar 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X