ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಗಿಯಿತಾ ಧೋನಿ ಯುಗ: ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್‌ನಿಂದ ಧೋನಿ ಹೊರಕ್ಕೆ

ಅಂತ್ಯವಾಯ್ತಾ ಧೋನಿಯ ಕ್ರಿಕೆಟ್ ಬದುಕು | MS DHONI | BCCI | CRICKET | ONEINDIA KANNADA
MS Dhoni Left Out Of BCCI Annual Central Contracts List

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಯಿತಾ? ಈ ಪ್ರಶ್ನೆಗೆ ಅಧೀಕೃತ ಉತ್ತರ ಲಭ್ಯವಿಲ್ಲ. ಆದರೆ ಇದಕ್ಕೆ ಪೂರಕವಾಗಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಬಹುತೇಕ ಅಂತ್ಯವಾದಂತೇ ಕಂಡು ಬರುತ್ತಿದೆ.

ಬಿಸಿಸಿಐ ಇವತ್ತು 2019-20ರ ವಾರ್ಷಿಕ ಆಟಗಾರರ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಮಹೇಂದ್ರ ಸಿಂಗ್ ಧೋನಿ ಗ್ರೇಡ್ ಎ ವಿಭಾಗದಲ್ಲಿದ್ದರು. ಈ ಪಟ್ಟಿಯಲ್ಲಿ ಧೋನಿ ಹೊರಬಿದ್ದಿದ್ದಾರೆ. ಇದು ಧೋನಿ ನಿವೃತ್ತಿಯನ್ನು ಅನಧೀಕೃತವಾಗಿ ಖಚಿತಪಡಿಸಿದಂತೆ ಕಂಡುಬರುತ್ತಿದೆ. ಈ ಮಧ್ಯೆ ಧೋನಿ ಇದೇ ತಿಂಗಳಲ್ಲಿ ನಿವೃತ್ತಿ ಘೋಷಿಸುತ್ತಾರೆ ಎಂಬು ಮಾತುಗಳು ಕೇಳಿ ಬರುತ್ತಿದೆ.

27 ಆಟಗಾರರ ಕಾಂಟ್ರ್ಯಾಕ್ಟ್ ಪಟ್ಟಿಯನ್ನು ಬಿಸಿಸಿಐ ಇಂದು ಬಿಡುಗಡೆ ಮಾಡಿದೆ. ಈ ಗುತ್ತಿಗೆ ಪಟ್ಟಿ 2019ರ ಸೆಪ್ಟೆಂಬರ್‌ನಿಂದ 2020ರ ಅಕ್ಟೋಬರ್‌ವರೆಗೆ ಅನ್ವಯವಾಗಲಿದೆ. ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್‌ ಬಳಿಕ ಯಾವುದೇ ಟೂರ್ನಿಯದಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿದಿಲ್ಲ.

ಟೆಸ್ಟ್‌ನಿಂದ ನಿವೃತ್ತಿ ಪಡೆದಿರುವ ಮಾಹಿ:

ಟೆಸ್ಟ್‌ನಿಂದ ನಿವೃತ್ತಿ ಪಡೆದಿರುವ ಮಾಹಿ:

ಮಹೇಂದ್ರ ಸಿಂಗ್ ಧೋನಿ ಟೆಸ್ಟ್‌ ಕ್ರಿಕೆಟ್‌ನಿಂದ 2014ರಲ್ಲಿ ನಿವೃತ್ತಿಯನ್ನು ಪಡೆದುಕೊಂಡಿದ್ದರು. ಬಳಿಕ ಸೀಮಿತ ಓವರ್‌ಗಳತ್ತ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದ್ದರು. ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಕೊನೆಯ ಬಾರಿಗೆ ಪ್ರತಿನಿಧಿಸಿದ್ದಾರೆ. ಬಳಿಕ ಕ್ರಿಕೆಟೇತರ ಚಟುವಟಿಕೆಯತ್ತ ಧೋನಿ ಗಮನಹರಿಸಿದ್ದರು.

ಸ್ಪಷ್ಟ ಪಡಿಸದ ಧೋನಿ

ಸ್ಪಷ್ಟ ಪಡಿಸದ ಧೋನಿ

ಕಳೆದ ವರ್ಷಾಂತ್ಯದಲ್ಲಿ ಜನವರಿ ತಿಂಗಳಲ್ಲಿ ಎಲ್ಲದಕ್ಕೂ ಸ್ಪಷ್ಟತೆ ಸಿಗಲಿದೆ ಎಂದು ಧೋನಿ ಹೇಳಿದ್ದರು. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಈವರೆಗೂ ಧೋನಿ ತಮ್ಮ ಕ್ರಿಕೆಟ್ ಬದುಕಿನ ಬಗ್ಗೆ ಧೋನಿ ಬಗ್ಗೆ ಸ್ಪಷ್ಟಪಡಿಸಿಲ್ಲ.

ಹದಿನೈದು ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಬದುಕು:

ಹದಿನೈದು ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಬದುಕು:

ಧೋನಿ ಮೊದಲ ಪಂದ್ಯವನ್ನು ಹದಿನೈದು ವರ್ಷಗಳ ಹಿಂದೆ ಬಾಂಗ್ಲಾದೇಶದ ವಿರುದ್ಧ ಆಡಿದ್ದರು. ಆದರೆ ಈ ಪಂದ್ಯದಲ್ಲಿ ಧೋನಿ ಒಂದೇ ಒಂದು ರನ್ ಗಳಿಸದೆ ಔಟಾದರು. ರನ್‌ಗಾಗಿ ಓಡುವುದರಲ್ಲೇ ಖ್ಯಾತರಾದ ಧೋನಿ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿದ್ದು ವಿಪರ್ಯಾಸ. ಈ ಪಂದ್ಯವನ್ನು ಭಾರತ 11 ರನ್‌ಗಳಿಂದ ಗೆದ್ದುಕೊಂಡಿತ್ತು.

ಬಿಸಿಸಿಐ 2019-20 ಗುತ್ತಿಗೆ ಪಟ್ಟಿ:

ಬಿಸಿಸಿಐ 2019-20 ಗುತ್ತಿಗೆ ಪಟ್ಟಿ:

ಗ್ರೇಡ್ ಎ + (ವಾರ್ಷಿಕ 7 ಕೋಟಿ ರೂಪಾಯಿ): ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ

ಗ್ರೇಡ್ ಎ ( 5 ಕೋಟಿ ರೂಪಾಯಿ): ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಶಿಖರ್ ಧವನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ರಿಷಭ್ ಪಂತ್

ಗ್ರೇಡ್ ಬಿ (3 ಕೋಟಿ ರೂಪಾಯಿ ): ವೃದ್ಧಿಮಾನ್ ಸಹಾ, ಉಮೇಶ್ ಯಾದವ್, ಯುಜ್ವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯ, ಮಾಯಾಂಕ್ ಅಗರ್ವಾಲ್

ಗ್ರೇಡ್ ಸಿ ( 1 ಕೋಟಿ ರೂಪಾಯಿ): ಕೇದಾರ ಜಾಧವ್, ನವದೀಪ್ ಸೈನಿ, ದೀಪಕ್ ಚಹರ್, ಮನೀಶ್ ಪಾಂಡೆ, ಹನುಮಾ ವಿಹಾರಿ, ಶಾರ್ದುಲ್ ಠಾಕೂರ್, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್.

Story first published: Thursday, January 16, 2020, 16:08 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X