ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಾಮಾಜಿಕ ಜಾಲಜಾಣದಲ್ಲಿ ತಮಾಷೆಯ ಪೋಸ್ಟ್ ಹಾಕಿದ ಎಂಎಸ್ ಧೋನಿ

MS Dhoni Makes A Comeback On Social Media

ನವದೆಹಲಿ: ಟೀಮ್ ಇಂಡಿಯಾದ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳೋದೇ ಬಲು ಅಪರೂಪ. ತೀರಾ ಅಪರೂಪಕ್ಕೆ ಧೋನಿ ಸೋಶಿಯಲ್ ಮೀಡಿಯಾಕ್ಕೆ ಬರುತ್ತಾರೆ. ದೀರ್ಘ ಕಾಲದ ಬಳಿಕ ಧೋನಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಠಿಣ ಲಾಕ್‌ಡೌನ್ ಘೋಷಣೆ: ಬ್ರಿಸ್ಬೇನ್ ಟೆಸ್ಟ್‌ ಮತ್ತಷ್ಟು ಅನುಮಾನಕ್ವೀನ್ಸ್‌ಲ್ಯಾಂಡ್‌ನಲ್ಲಿ ಕಠಿಣ ಲಾಕ್‌ಡೌನ್ ಘೋಷಣೆ: ಬ್ರಿಸ್ಬೇನ್ ಟೆಸ್ಟ್‌ ಮತ್ತಷ್ಟು ಅನುಮಾನ

ಎಂಎಸ್ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರತೀ ಸಾರಿ ಬಂದಾಗಲೂ ಮಾರ್ಮಿಕ ರೀತಿಯಲ್ಲಿ ಪೋಸ್ಟ್ ಹಾಕುತ್ತಾರೆ. ಈ ಬಾರಿಯೂ ಅಂಥದ್ದೇ ಪೋಸ್ಟ್ ಹಾಕಿಕೊಂಡಿದ್ದಾರೆ. ಧೋನಿ ಕಡೇಯಸಾರಿ ಕಳೆದ ಸೆಪ್ಟೆಂಬರ್ 10ಕ್ಕೆ ಹಾಕಿದ್ದ ಪೋಸ್ಟ್ ರಾಫೇಲ್ ವಿಮಾನಕ್ಕೆ ಸಂಬಂಧಿಸಿದ್ದು. ಈ ಬಾರಿ ಕೃಷಿಗೆ ಸಂಬಂಧಿಸಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಜ.10 ರಿಂದ ದೇಶಿ ಕ್ರಿಕೆಟ್ ಹಬ್ಬ ಶುರು SMAT -2021 ಪೂರ್ತಿ ವಿವರಜ.10 ರಿಂದ ದೇಶಿ ಕ್ರಿಕೆಟ್ ಹಬ್ಬ ಶುರು SMAT -2021 ಪೂರ್ತಿ ವಿವರ

ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಿರುವುದರಿಂದ ಧೋನಿ ಬಿಡುವಿನ ವೇಳೆ ತನ್ನ ಫಾರ್ಮ್‌ಗೆ ಹೋಗಿ ಕೃಷಿ ಸಂಬಂಧಿಸಿ ಕೆಲಸದಲ್ಲಿ ತೊಡಗುತ್ತಿದ್ದಾರೆ. ಕೃಷಿ, ಮಾರುಕಟ್ಟೆ, ಸ್ಪೋರ್ಟ್ಸ್ ಕ್ಲಬ್ ಇಂಥ ಉದ್ಯಮಗಳತ್ತ ಧೋನಿ ಮುಖ ಮಾಡುತ್ತಿದ್ದಾರೆ.

ಜನವರಿ 8ರ ಶುಕ್ರವಾರ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಧೋನಿ ತನ್ನ ಫಾರ್ಮ್‌ನಲ್ಲಿ ಬೆಳೆದ ಸ್ಟ್ರಾಬೆರಿಯ ಫೋಟೋ ಹಾಕಿದ್ದಾರೆ. ಜೊತೆಗೆ, 'ನಾನು ದಿನಾ ಫಾರ್ಮ್‌ಗೆ ಹೋಗುವುದನ್ನು ಮುಂದುವರೆಸಿದರೆ ಮಾರುಕಟ್ಟೆಗೆ ಹೋಗಲು ಅಲ್ಲಿ ಒಂದು ಸ್ಟ್ರಾಬೆರಿಯೂ ಉಳಿಯೋಲ್ಲ' ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಅಂದರೆ ಸ್ಟ್ರಾಬೆರಿಗಳನ್ನು ನಾನೇ ಪೂರ್ತಿ ತಿಂದುಹಾಕುತ್ತೇನೆ ಎಂದು ಧೋನಿ ತಮಾಷೆಯಾಗಿ ಹೇಳಿದ್ದಾರೆ.

Story first published: Friday, January 8, 2021, 16:55 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X