ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಏಕದಿನ ತಂಡಕ್ಕೆ ಎಂಎಸ್ ಧೋನಿ ನಾಯಕ

ದುಬೈ, ನ. 5 : ಸತತವಾಗಿ ಏಳನೆ ವರ್ಷ ಐಸಿಸಿ ವರ್ಷದ ಏಕದಿನ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ಎಂಎಸ್ ಧೋನಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದು ಒಟ್ಟು 12 ಜನರ ತಂಡವನ್ನು ಪ್ರಕಟಮಾಡಿದೆ.

ಐಸಿಸಿ ತಂಡದಲ್ಲಿ ಧೋನಿಯೊಂದಿಗೆ ವಿರಾಟ್ ಕೋಹ್ಲಿ, ಮಹಮದ್ ಶಮಿ ಮತ್ತು ರೋಹಿತ್ ಶರ್ಮಾ(12 ನೇ ಆಟಗಾರ) ಸಹ ಸ್ಥಾನ ಪಡೆದುಕೊಂಡಿದ್ದಾರೆ. ಐಸಿಸಿ ಬುಧವಾರ 2014ರ ಏಕದಿನ ಮತ್ತು ಟೆಸ್ಟ್ ತಂಡವನ್ನು ಘೋಷಣೆ ಮಾಡಿದೆ.[ಸಚಿನ್ ಚಾಪೆಲ್ ರನ್ನು 'ರಿಂಗ್ ಮಾಸ್ಟರ್' ಅಂದಿದ್ದು ಯಾಕೆ?]

msd

ಐಸಿಸಿ ಕ್ರಿಕೆಟ್ ಸಮಿತಿ ಅಧ್ಯಕ್ಷ ಅನಿಲ್ ಕುಂಬ್ಳೆ ನೇತೃತ್ವದ ವಿಶೇಷ ಸಮಿತಿ ತಂಡವನ್ನು ಆಯ್ಕೆ ಮಾಡಿದೆ. ಅಂಕಿ ಅಂಶಗಳು, ಆಟಗಾರರ ಸಾಧನೆ ಮತ್ತು ತಂಡದ ಪ್ರದರ್ಶನದ ಆಧಾರದ ಮೇಲೆ ತಂಡವನ್ನು ರೂಪಿಸಲಾಗಿದೆ.

ಆದರೆ ಐಸಿದಸಿ ಟೆಸ್ಟ್ ತಂಡದಲ್ಲಿ ಯಾವೊಬ್ಬ ಭಾರತೀಯನೂ ಸ್ಥಾನ ಪಡೆದಿಲ್ಲ. ಶ್ರೀಲಂಕಾದ ಆಂಜಲೋ ಮ್ಯಾಥ್ಯೂಸ್ ಟೆಸ್ಟ್ ತಂಡದ ನಾಯಕರಾಗಿದ್ದಾರೆ.[ಐಪಿಎಲ್ 8: ಮುಂಬೈ ಬುಟ್ಟಿಗೆ ವಿನಯ್ ಕುಮಾರ್]

ಐಸಿಸಿ ತಂಡದ ಸದಸ್ಯರಾಗಿ ಘೋಷಣೆಯಾದ ಎಲ್ಲ ಆಟಗಾರರಿಗೂ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ಇದು ಆಟಗಾರರ ಜೀವನದಲ್ಲಿ ಒಂದು ವಿಶೇಷ ಸಾಧನೆಯಾಗುತ್ತದೆ. ಅಲ್ಲದೇ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ ಎಂದು ಕುಂಬ್ಳೆ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಆಟಗಾರರನ್ನು ತುಲನೆ ಮಾಡಿ ತಂಡ ಹೆಸರಿಸುವುದು ಬಹಳ ಕಷ್ಟಕರವಾದ ಕೆಲಸ. ಅಗಸ್ಟ್ 26 2013 ರಿಂದ ಸಪಟ್ಎಂಬರ್ 17 2014ರ ನಡುವಿನ 12 ತಿಂಗಳ ಪ್ರದರ್ಶನ ಆಧಾರವಾಗಿಟ್ಟುಕೊಂಡು ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಐಸಿಸಿ ಏಕದಿನ ತಂಡ
* ಮಹಮದ್ ಹಫೀಜ್(ಪಾಕಿಸ್ತಾನ)
* ಡೀ ಕಾಕ್(ದಕ್ಷಿಣ ಆಫ್ರಿಕಾ)
* ವಿರಾಟ್ ಕೋಹ್ಲಿ(ಭಾರತ)
* ಜಾರ್ಜ್ ಬೈಲಿ(ಆಸ್ಟ್ರೇಲಿಯಾ)
* ಎಬಿ ಡೆವಿಲಿಯರ್ಸ್ (ದಕ್ಷಿಣ ಆಫ್ರಿಕಾ)
* ಎಂಎಸ್ ಧೋನಿ(ಭಾರತ)(ನಾಯಕ)
* ಡಿವೈನ್ ಬ್ರಾವೋ(ವೆಸ್ಟ್ ಇಂಡೀಸ್)
* ಜೆಮ್ಸ್ ಫ್ಲಂಕ್ ನರ್(ಆಸ್ಟ್ರೇಲಿಯಾ)
* ಡೇಲ್ ಸ್ಟೇನ್(ದಕ್ಷಿಣ ಆಫ್ರಿಕಾ)
* ಮಹಮದ್ ಶಮಿ(ಭಾರತ)
*ಅಜಂತಾ ಮೆಂಡಿಸ್ (ಶ್ರೀಲಂಕಾ)
* ರೊಹಿತ್ ಶರ್ಮಾ (ಭಾರತ)(12 ನೇ ಆಟಗಾರ)

ಐಸಿಸಿ ಟೆಸ್ಟ್ ತಂಡ
* ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
* ಕೇನ್ ವಿಲಿಯಂಸನ್(ನ್ಯೂಜಿಲೆಂಡ್)
* ಕುಮಾರ ಸಂಗಕ್ಕಾರ (ಶ್ರೀಲಂಕಾ)
* ಎಬಿ ಡೆವಿಲಿಯರ್ಸ್ (ದಕ್ಷಿಣ ಆಫ್ರಿಕಾ)
* ಜೋ ರೂಟ್(ಇಂಗ್ಲೆಂಡ್)
* ಆಂಜಲೋ ಮ್ಯಾಥ್ಯೂಸ್ (ಶ್ರೀಲಂಕಾ)(ನಾಯಕ)
* ಮಿಚಲ್ ಜಾನ್ಸ್ ನ್ (ಆಸ್ಟ್ರೇಲಿಯಾ)
* ಸ್ಟುವರ್ಟ್ ಬ್ರಾಡ್(ಇಂಗ್ಲೆಂಡ್)
* ಡೇಲ್ ಸ್ಟೇನ್(ದಕ್ಷಿಣ ಆಫ್ರಿಕಾ)
* ಟಿಮ್ ಸೌಥಿ (ನ್ಯೂಜಿಲೆಂಡ್)
* ರಾಸ್ ಟೇಲರ್ (ನ್ಯೂಜಿಲೆಂಡ್) (12 ನೇ ಆಟಗಾರ)

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X