ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಮ್ಯಾನೇಜರ್

Ms Dhoni Not Contemplating Retirement: Manager Mihir Diwakar

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀ ಕ್ರಿಕೆಟ್‌ನಿಂದ ದೂರವಾಗಿ ಸರಿಯಾಗಿ ಒಂದು ವರ್ಷವಾಯಿತು. ಈ ಸಂದರ್ಭದಲ್ಲಿ ಧೋನಿ ಗೆಳೆಯ ಮ್ಯಾನೇಜರ್ ಆಗಿರುವ ಮಿಹಿರ್ ದಿವಾಕರ್ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.

ಧೋನಿ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿಲ್ಲ, ಐಪಿಎಲ್​ನಲ್ಲಿ ಆಡಲು ಉತ್ಸುಕರಾಗಿದ್ದಾರೆ ಎಂದು ಧೋನಿ ಬಾಲ್ಯದ ಗೆಳೆಯ ಹಾಗೂ ಮ್ಯಾನೇಜರ್​ ಮಿಹಿರ್​ ದಿವಾಕರ್​ ಸ್ಪಷ್ಟವಾಗಿ ಹೇಳಿದ್ದಾರೆ. ಇದರೊಂದಿಗೆ ಧೋನಿ ನಿವೃತ್ತಿ ಕುರಿತು ಎದ್ದಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಮತ್ತೆ ಆರಂಭವಾದ ಕ್ರಿಕೆಟ್: ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮಾ, ರಿಕಿ ಪಾಂಟಿಂಗ್ಮತ್ತೆ ಆರಂಭವಾದ ಕ್ರಿಕೆಟ್: ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮಾ, ರಿಕಿ ಪಾಂಟಿಂಗ್

ಸೌಥಾಂಪ್ಟನ್​ನಲ್ಲಿ ಕಳೆದ ವರ್ಷ ಇದೇ ದಿನ (ಜುಲೈ9) ನಡೆದ ಭಾರತ-ನ್ಯೂಜಿಲೆಂಡ್​ ನಡುವಿನ 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ ಪಂದ್ಯವೇ ಧೋನಿ ಪಾಲಿಗೆ ಕಡೇ ಪಂದ್ಯವಾಗಿದೆ. ಅಂದಿನ ಪಂದ್ಯದಲ್ಲಿ ಆಘಾತಕಾರಿಯಾಗಿ ಟೀಮ್ ಇಂಡಿಯಾ ಟೂರ್ನಿಯಿಂದ ಹೊರಬದ್ದ ಬಳಿಕ ಧೋನಿ ಕ್ರಿಕೆಟ್ ಅಂಗಳದಲ್ಲಿ ಮತ್ತೆ ಕಾಣಿಸಿಕೊಂಡಿಲ್ಲ. ಹೀಗಾಗಿ ಧೋನಿ ನಿವೃತ್ತಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದೆ.

ಈ ಚರ್ಚೆಗೆ ಉತ್ತರ ನೀಡಿರುವ ಧೋನಿ ಸ್ನೇಹಿತ, ಐಪಿಎಲ್​ಗಾಗಿ ಧೋನಿ ಸಿದ್ಧಗೊಳ್ಳುತ್ತಿದ್ದು, ನಿವೃತ್ತಿ ಬಗ್ಗೆ ಅವರು ಯೋಚಿಸಿಲ್ಲ ಎಂದಿದ್ದಾರೆ. ಭಾರತ ತಂಡದ ಮಾಜಿ ಎಂಎಸ್​ ಧೋನಿ ಮಂಗಳವಾರವಷ್ಟೇ 39ನೇ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡರು.

ಏಷ್ಯಾ ಕಪ್ 2020 ರದ್ದುಗೊಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಏಷ್ಯಾ ಕಪ್ 2020 ರದ್ದುಗೊಳಿಸಲಾಗಿದೆ ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಸಿಎಸ್​ಕೆ ತಂಡದ ನಾಯಕನಾಗಿರುವ ಧೋನಿ, ಐಪಿಎಲ್​ ಸಿದ್ಧತೆಗಾಗಿ ತಂಡದ ಸಹ ಸದಸ್ಯರಾದ ಸುರೇಶ್​ ರೈನಾ, ಪೀಯುಷ್​ ಚಾವ್ಲ, ಅಂಬಟಿ ರಾಯುಡು ಜತೆಗೂಡಿ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿದ್ದರು. ಕರೊನಾ ವೈರಸ್​ ಭೀತಿಯಿಂದಾಗಿ ಐಪಿಎಲ್ ಮುಂದೂಡಿರುವುದನ್ನು ಘೋಷಿಸಿದ ಬಳಿಕ ಧೋನಿ ರಾಂಚಿಗೆ ವಾಪಾಸ್ಸಾಗಿದ್ದರು.

Story first published: Thursday, July 9, 2020, 10:06 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X