ತನ್ನ ಅಭಿಮಾನಿಯ ಅಭಿಮಾನ ಕಂಡು ಭಾವುಕನಾದ ಧೋನಿ: ಧನ್ಯವಾದ ತಿಳಿಸಿದ ಮಾಹಿ

ಐಪಿಎಲ್ 13ನೇ ಆವೃತ್ತಿಯಲ್ಲಿ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ಈಗಾಗಲೇ ಪ್ಲೇ ಆಫ್ ಹಂತಕ್ಕೇರಲು ಸಾಧ್ಯವಾಗದೇ ಲೀಗ್‌ ಹಂತದಲ್ಲೇ ಹೋರಾಟ ಮುಗಿಸಿದೆ. ತನ್ನ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಎಸ್‌ಕೆ ಲೀಗ್‌ ಹಂತದಲ್ಲಿ ಮುಗ್ಗರಿಸಿದ್ದು ಇದೇ ಮೊದಲು. ಹೀಗಾಗಿ ಅವರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿರುವುದು ಸುಳ್ಳಲ್ಲ.

ಸಿಎಸ್‌ಕೆ ಈ ಬಾರಿ ಟೂರ್ನಿಯಲ್ಲಿ ಕಳೆಗುಂದಿದರು ಅಭಿಮಾನಿಗಳ ಬೆಂಬಲವು ಸ್ವಲ್ಪವೂ ಕಮ್ಮಿ ಆಗಿಲ್ಲ. ನಾಯಕ ಧೋನಿ ಮತ್ತು ತಂಡಕ್ಕೆ ವಿಶೇಷ ರೀತಿಯಲ್ಲಿ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ.

ಮನೆಗೆ ಹಳದಿ ರಂಗು ತುಂಬಿ ಅಭಿಮಾನ ಮೆರೆದ ಧೋನಿ ಸೂಪರ್ ಫ್ಯಾನ್

ಮನೆಗೆ ಹಳದಿ ಬಣ್ಣ ಬಳಿದು ಅಭಿಮಾನ ಮೆರೆದಿದ್ದ ಅಭಿಮಾನಿ

ಮನೆಗೆ ಹಳದಿ ಬಣ್ಣ ಬಳಿದು ಅಭಿಮಾನ ಮೆರೆದಿದ್ದ ಅಭಿಮಾನಿ

ತಮಿಳುನಾಡಿನ ಅರಂಗೂರು ಎಂಬಲ್ಲಿನ ಗೋಪಿ ಕೃಷ್ಣನ್ ಎಂಬವರೇ ಧೋನಿ ಮೇಲಿನ ಅಭಿಮಾನದಿಂದ ಸುದ್ದಿಯಾಗಿದ್ದವರು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಇವರು ಸಂಪೂರ್ಣ ಮನೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬಣ್ಣವಾದ ಹಳದಿ ಹಾಗೂ ಧೋನಿಯ ಕಲಾಚಿತ್ರದಿಂದ ತುಂಬಿದ್ದರು.

ಈ ಮನೆಗೆ ಗೋಪಿ ಕೃಷ್ಣನ್ ಅವರು "ಧೋನಿಯ ಅಭಿಮಾನಿಯ ಮನೆ" ಎಂದೇ ಬರೆಸಿಕೊಂಡಿದ್ದಾರೆ. ಸಂಪೂರ್ಣ ಹಳದಿ ಬಣ್ಣ ಹಾಗೂ ಧೋನಿಯ ಚಿತ್ರ ಹಾಗೂ ಸಿಎಸ್‌ಕೆ ಲೋಗೋವನ್ನು ಹೊಂದಿರುವ ಈ ಮನೆ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು.

ಧೋನಿ ಕುರಿತು ಯುಜವೇಂದ್ರ ಚಹಾಲ್ ಭಾವನಾತ್ಮಕ ಸಂದೇಶ

ಅಭಿಮಾನ ಕಂಡು ಭಾವುಕನಾದ ಎಂ.ಎಸ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್ ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅವರ ನಾಯಕ ಎಂ.ಎಸ್. ಧೋನಿ ತಮ್ಮ ಅಭಿಮಾನಿ ಇಡೀ ಮನೆಯನ್ನು ಸಿಎಸ್‌ಕೆ ಬಣ್ಣಗಳಲ್ಲಿ ಚಿತ್ರಿಸಿದ ಬಗ್ಗೆ ಮಾತನಾಡುವಾಗ ಭಾವುಕರಾಗಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ನೋಡಿದ್ದೇ ಎಂದ ಮಾಹಿ

ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ನೋಡಿದ್ದೇ ಎಂದ ಮಾಹಿ

ಸೋಮವಾರ, ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಎಂಎಸ್ ಧೋನಿ ತಮ್ಮ ಸೂಪರ್ ಫ್ಯಾನ್ ಗೋಪಿ ಕೃಷ್ಣನ್ ಅವರನ್ನು ಉದ್ದೇಶಿಸಿ ಮಾತನಾಡುತ್ತಾರೆ, ಅವರು ಇತ್ತೀಚೆಗೆ ತಮ್ಮ ಇಡೀ ಮನೆಯನ್ನು ಸಿಎಸ್‌ಕೆ ಬಣ್ಣಗಳಲ್ಲಿ ಚಿತ್ರಿಸುವ ಮೂಲಕ ಉತ್ತಮ ಬೆಂಬಲವನ್ನು ತೋರಿಸಿದ್ದಾರೆ. ಅವರು ತಮ್ಮ ಮನೆಗೆ ‘ಧೋನಿ ಅಭಿಮಾನಿಯ ಮನೆ' ಎಂದು ಹೆಸರಿಸಿದ್ದರು.

"ನಾನು ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿದ್ದೇನೆ ಮತ್ತು ಇದು ಒಂದು ಉತ್ತಮ ಗೆಸ್ಚರ್ ಎಂದು ನಾನು ಭಾವಿಸುತ್ತೇನೆ. ಅದೇ ಸಮಯದಲ್ಲಿ ನೀವು ನೋಡಿದರೆ, ಅದು ನನ್ನ ಬಗ್ಗೆ ಮಾತ್ರವಲ್ಲ, ಅವರು ಸಿಎಸ್‌ಕೆ ತಂಡದ ದೊಡ್ಡ ಅಭಿಮಾನಿಗಳಾಗಿದ್ದಾರೆ "ಎಂದು ಎಂಎಸ್ ಧೋನಿ ಹೇಳಿದರು.

ಈ ರೀತಿಯ ಅಭಿಮಾನ ಸುಲಭವಾದ ವಿಷಯವಲ್ಲ ಎಂದ ಸಿಎಸ್‌ಕೆ ನಾಯಕ

ಈ ರೀತಿಯ ಅಭಿಮಾನ ಸುಲಭವಾದ ವಿಷಯವಲ್ಲ ಎಂದ ಸಿಎಸ್‌ಕೆ ನಾಯಕ

"ಅವರು ಅದನ್ನು ಮಾಡಿದ ರೀತಿ, ಅವರು ನಿಜವಾಗಿಯೂ ಏನು ಮಾತನಾಡುತ್ತಿದ್ದಾರೆಂದು ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಅವರು ಸಿಎಸ್‌ಕೆ ಮತ್ತು ನನ್ನ ಕಡೆಗೆ ಯಾವ ರೀತಿಯ ಭಾವನೆಯನ್ನು ತೋರಿಸುತ್ತಾರೆ. ಇದು ತುಂಬಾ ಸುಲಭವಾಗಿ ಮಾಡಬಹುದಾದ ವಿಷಯವಲ್ಲ, ನೀವು ಕುಳಿತು ನಿರ್ಧರಿಸಿ ಮತ್ತು ಇಡೀ ಕುಟುಂಬವು ಅದನ್ನು ಒಪ್ಪಿಕೊಳ್ಳಬೇಕು ಮತ್ತು ನಂತರ ನೀವು ಅಂತಹದರೊಂದಿಗೆ ಮುಂದುವರೆಯಬೇಕಾಗುತ್ತದೆ "ಎಂದು ಧೋನಿ ಹೇಳಿದ್ದಾರೆ.

ಮಾತನ್ನು ಮುಂದುವರಿದಿ ಧೋನಿ "ಇದು ತುಂಬಾ ಕಾಲ ಉಳಿಯುವ ವಿಷಯ. ಇದು ಸಾಮಾಜಿಕ ಮಾಧ್ಯಮ ಪೋಸ್ಟ್ ಅಲ್ಲ, ಅದು ರಾತ್ರೋರಾತ್ರಿ ಕಣ್ಮರೆಯಾಗುತ್ತದೆ. ನಾನು ಕೃತಜ್ಞನಾಗಿದ್ದೇನೆ ಮತ್ತು ಇಡೀ ಕುಟುಂಬಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಒಂದು ಉತ್ತಮ ಗೆಸ್ಚರ್ ಎಂದು ನಾನು ಭಾವಿಸುತ್ತೇನೆ. " ಎಂದು ಧೋನಿ ಧನ್ಯವಾದ ತಿಳಿಸಿದ್ದಾರೆ.

ನನ್ನ ಬಹುದೊಡ್ಡ ಕನಸು ನನಸಾಯಿತು ಎಂದು ಸಿಎಸ್‌ಕೆ ಬ್ಯಾಟ್ಸ್‌ಮನ್

ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳ ಮುಟ್ಟಿರುವ ಸಿಎಸ್‌ಕೆ

ಪಾಯಿಂಟ್ಸ್‌ ಟೇಬಲ್‌ನಲ್ಲಿ ತಳ ಮುಟ್ಟಿರುವ ಸಿಎಸ್‌ಕೆ

ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ ಕೇವಲ 4 ಗೆಲುವು ಹಾಗೂ 8 ಪಂದ್ಯ ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ 8 ಪಾಯಿಂಟ್ಸ್ ಗಳಿಸಿದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ ಈಗಾಗಲೇ ಪ್ಲೇ ಆಫ್‌ ಸ್ಥಾನವನ್ನು ತಲುಪದ ಮೊದಲ ತಂಡವಾಗಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, October 27, 2020, 10:22 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X