ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ 2019ರ ವಿಶ್ವಕಪ್‌ ಘಟನೆ ನೆನಪಿಸಿದ ಎಂಎಸ್ ಧೋನಿ

MS Dhonis dive in IPL brings back memories of 2019 World Cup semi-final

ಮುಂಬೈ: ಸೋಮವಾರ (ಏಪ್ರಿಲ್ 19) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 12ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಭರ್ಜರಿ 45 ರನ್‌ಗಳ ಜಯ ದಾಖಲಿಸಿದೆ. ಆಲ್ ರೌಂಡರ್ ಮೊಯೀನ್ ಅಲಿ, ಸ್ಯಾಮ್ ಕರನ್, ರವೀಂದ್ರ ಜಡೇಜಾ ಅವರ ಬೌಲಿಂಗ್‌ ನೆರವಿನಿಂದ ಸಿಎಸ್‌ಕೆ ತಂಡ ಟೂರ್ನಿಯ ಎರಡನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

ಈ ಐಪಿಎಲ್‌ನ 'ಮ್ಯಾನ್ ಆಫ್‌ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್ಈ ಐಪಿಎಲ್‌ನ 'ಮ್ಯಾನ್ ಆಫ್‌ ದ ಟೂರ್ನಿ' ಹೆಸರಿಸಿದ ಮೈಕಲ್ ವಾನ್

ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದೊಂದಿಗೆ ಎಂಎಸ್ ಧೋನಿ ಸಿಎಸ್‌ಕೆ ನಾಯಕರಾಗಿ 200ನೇ ಪಂದ್ಯದಲ್ಲಿ ಆಡಿದ್ದು ವಿಶೇಷವೆನಿಸಿತ್ತು. ಅಷ್ಟೇ ಅಲ್ಲ, ಇತ್ತಂಡಗಳ ಈ ಕದನದ ವೇಳೆ 2019ರ ವಿಶ್ವಕಪ್‌ ಕ್ಷಣ ನೆನಪಿಸುವಂತ ಘಟನೆ ನಡೆದಿತ್ತು.

ವಯಸ್ಸು ಬರೀ ಸಂಖ್ಯೆ ಮಾತ್ರ

ವಯಸ್ಸು ಬರೀ ಸಂಖ್ಯೆ ಮಾತ್ರ

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಗೀಗ 39 ಹರೆಯ. ಆದರೆ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಧೋನಿ ತನ್ನ ವಿಕೆಟ್ ಉಳಿಸಿಕೊಳ್ಳಲು ಡೈವ್ ಹಾರಿದ್ದು ನೋಡಿದರೆ ಧೋನಿಗೆ ಅಷ್ಟು ವಯಸ್ಸಾಗಿದೆ ಅನ್ನಿಸುವುದೇ ಇಲ್ಲ. ಧೋನಿಯ ಈ ಫಿಟ್‌ನೆಸ್‌ಗೆ ಇಂಟರ್‌ನೆಟ್‌ನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಅನೇಕರು 2019ರ ವಿಶ್ವಕಪ್‌ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಅಸಲಿಗೆ ಆಗಿದ್ದೇನು?

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಚೆನ್ನೈನಿಂದ 7ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಧೋನಿ 14ನೇ ಓವರ್‌ ವೇಳೆ ರಾಹುಲ್ ತೆವಾಟಿಯಾ ಎಸೆತವನ್ನು ಕವರ್ಸ್‌ನತ್ತ ಬೀಸಿದರು. ಕೂಡಲೇ ಧೋನಿ ಸಿಂಗಲ್‌ಗೆ ಮುಂದಾಗಿದ್ದರು. ಆದರೆ ಚೆಂಡು ಹತ್ತಿರದಲ್ಲಿದ್ದರಿಂದ ನಾನ್ ಸ್ಟ್ರೈಕ್‌ನಲ್ಲಿದ್ದ ರವೀಂದ್ರ ಜಡೇಜಾ ಧೋನಿಯನ್ನು ವಾಪಸ್ ಕಳುಹಿಸಿದರು. ಆಗ ವಿಕೆಟ್‌ ಉಳಿಸಿಕೊಳ್ಳಲು ಡೈವ್ ಅಲ್ಲದೆ ಬೇರೆ ದಾರಿಯಿಲ್ಲ ಎಂದು ಮನಗಂಡ ಧೋನಿ ಕೂಡಲೇ ಡೈವ್ ಹಾರಿದ್ದರು. ಅದೃಷ್ಟವಶಾತ್ ಅದು ಡೈರೆಕ್ಟ್ ಹಿಟ್ ಆಗಿರಲಿಲ್ಲ. ಕೀಪರ್ ಸಂಜು ಸ್ಯಾಮ್ಸನ್ ಕೂಡಲೇ ಬೇಲ್ಸ್ ಉರುಳಿಸಿದರಾದರೂ ಧೋನಿ ಅದಾಗಾಗಲೇ ಸೇಫ್ ಆಗಿದ್ದರು.

ವಿಶ್ವಕಪ್‌ ಕ್ಷಣ ನೆನಪಿಸಿದ ಧೋನಿ

ಧೋನಿ ಸೋಮವಾರದ ಪಂದ್ಯದಲ್ಲಿ ಡೈವ್ ಹಾರಿ ವಿಕೆಟ್ ಉಳಿಸಿಕೊಂಡಿದ್ದು ನೋಡಿದ ಕ್ರಿಕೆಟ್‌ ಅಭಿಮಾನಿಗಳು 2019ರ ವಿಶ್ವಕಪ್‌ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. '21 ತಿಂಗಳು ತುಂಬಾ ತಡವಾಯ್ತು. ನೀವು 21 ತಿಂಗಳಿಗೆ ಮುನ್ನ ಹೀಗೇ ಡೈವ್ ಹಾರುತ್ತಿದ್ದರೆ ನಾವು ಮತ್ತೊಂದು ವಿಶ್ವಕಪ್‌ ಗೆಲ್ಲುವ ಸಾಧ್ಯತೆಯಿತ್ತು' ಎಂದು ಅನೇಕರು ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 2019ರ ವಿಶ್ವಕಪ್‌ ಮುಗಿದು ಇಂದಿಗೆ 21 ತಿಂಗಳುಗಳಾಗುತ್ತಿವೆ. ಹೀಗಾಗಿಯೇ ಅನೇಕ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ವಿಶ್ವಕಪ್‌ ವೇಳೆ ಆಗಿದ್ದೇನು?

ವಿಶ್ವಕಪ್‌ ವೇಳೆ ಆಗಿದ್ದೇನು?

2019ರ ಜುಲೈ 9ರಂದು ಏಕದಿನ ವಿಶ್ವಕಪ್‌ 1ನೇ ಸೆಮಿಫೈನಲ್ ಪಂದ್ಯಕ್ಕಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆದಿತ್ತು. ಆವತ್ತು ಕೂಡ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಧೋನಿ 50 ರನ್ ಗಳಿಸಿ ಗೆಲುವಿನಾಸೆ ಮೂಡಿಸಿದ್ದರಾದರೂ, 48.3ನೇ ಓವರ್‌ನಲ್ಲಿ ಮಾರ್ಟಿನ್ ಗಪ್ಟಿಲ್ ಎಸೆತಕ್ಕೆ ರನ್ ಔಟ್ ಆಗಿ ನಿರ್ಗಮಿಸಿದ್ದರು. ಆವತ್ತು ಧೋನಿ ಡೈವ್ ಹಾರಿದ್ದರೆ ಔಟಾಗದೆ ಉಳಿಯುವ ಸಾಧ್ಯತೆಯಿತ್ತು. ಆದರೆ ಅಂದು ಧೋನಿ ಡೈವ್ ಹಾರಿರಲಿಲ್ಲ. ಪಂದ್ಯದಲ್ಲಿ 18 ರನ್‌ನಿಂದ ಸೋತ ಭಾರತ ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿತ್ತು.

Story first published: Tuesday, April 20, 2021, 15:43 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X