ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ವಿತೀಯ ಏಕದಿನ ಪಂದ್ಯ: ಆಸ್ಟ್ರೇಲಿಯಾಕ್ಕೆ ತಲೆ ನೋವಾದ ಎಂಎಸ್ ಧೋನಿ!

MS Dhoni’s numbers in Nagpur a big headache for Aaron Finch and boys

ನಾಗ್ಪುರ, ಮಾರ್ಚ್ 4: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಈಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಯಕ್ಕಿಂತ ಮಾಜಿ ನಾಯಕ ಎಂಎಸ್ ಧೋನಿ ತಲೆ ನೋವಾಗಿ ಕಾಣಿಸಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಧೋನಿಯ ಉತ್ತಮ ಆಟ ಇದಕ್ಕೆ ಕಾರಣ.

ಪಾಕಿಸ್ತಾನ ಜತೆ ನಂಟು ಬೇಡ ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿಪಾಕಿಸ್ತಾನ ಜತೆ ನಂಟು ಬೇಡ ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿ

ಹಿಂದಿನಂತೆ ಈಗ ಧೋನಿ ಉತ್ತಮ ಆಟವಾಡುತ್ತಿಲ್ಲ. ಬೆಸ್ಟ್ ಫಿನಿಷರ್ ಅಲ್ಲ ಎಂಬಂತೆ ಭಾರತದ ಕೆಲ ಕ್ರಿಕೆಟ್ ಅಭಿಮಾನಿಗಳು ಧೋನಿ ಅವರನ್ನು ಟೀಕಿಸಿದ್ದರು. ಆದರೆ 2019ರ ಧೋನಿ ಸಾಧನೆಯ ಅಂಕಿ ಅಂಶಗಳು ಅಭಿಮಾನಿಗಳ ಟೀಕೆಯನ್ನು ಬದಿಗೆ ಸರಿಸಿಡುತ್ತವೆ.

ಹಿಂದಿನ ಆರು ಇನ್ನಿಂಗ್ಸ್‌ಗಳಲ್ಲಿ ಧೋನಿ 150.50ರ ಸರಾಸರಿಯಂತೆ 301 ರನ್ ಗಳಿಸಿದ್ದಾರೆ. ನಾಗ್ಪುರ ವಿದರ್ಭ ಕ್ರಿಕೆಟ್ ಸ್ಟೇಡಿಯಂನಲ್ಲೂ ಧೋನಿ ಉತ್ತಮ ರನ್ ಗಳಿಸಿದರೆ ಧೋನಿ ಅಭಿಮಾನಿಗಳ ಖುಷಿ ಇಮ್ಮಡಿಗೊಳ್ಳಲಿದೆ. ಯಾಕೆಂದರೆ ಅಂಕಿ-ಅಂಶಗಳ ಆಧಾರದಲ್ಲಿ ಧೋನಿ ಈಗಾಗಲೇ ಕೊಹ್ಲಿ ಮತ್ತು ರೋಹಿತ್ ಅವರನ್ನು ಹಿಂದಿಕ್ಕಿದ್ದಾರೆ.

ವಿಸಿಎ ಸ್ಟೇಡಿಯಂನ ಏಕದಿನ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಅಲ್ಲಿ ಎಂಎಸ್ ಧೋನಿಯೇ ಮುಂಚೂಣಿಯಲ್ಲಿದ್ದಾರೆ. ಒಟ್ಟು 5 ಪಂದ್ಯಗಳಲ್ಲಿ 268 ರನ್ ಗಳಿಸಿರುವ ಧೋನಿ ಈ ಯಾದಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ನಾಯಕ ಕೊಹ್ಲಿ 4 ಪಂದ್ಯಗಳಲ್ಲಿ 209 ರನ್ ಮತ್ತು ರೋಹಿತ್ 2 ಪಂದ್ಯಗಳಲ್ಲಿ 204 ರನ್ ಸಾಧನೆ ಹೊಂದಿದ್ದಾರೆ.

ಲೋಕಸಭೆ ಚುನಾವಣೆ ಸಮರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಕ್ರಿಕೆಟರ್ ಪತ್ನಿಲೋಕಸಭೆ ಚುನಾವಣೆ ಸಮರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಕ್ರಿಕೆಟರ್ ಪತ್ನಿ

ಭಾರತ ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ಅಜೇಯ 59 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವನ್ನಾಚರಿಸಿತ್ತು. ಇದೇ ಪಂದ್ಯದಲ್ಲಿ ಕೊಹ್ಲಿ 44, ರೋಹಿತ್ 37 ರನ್ ತಂಡದ ಖಾತೆಗೆ ಸೇರಿಸಿದ್ದರು. ದ್ವಿತೀಯ ಪಂದ್ಯದಲ್ಲೂ ಭಾರತ ಗೆಲ್ಲುವ ನಿರೀಕ್ಷೆಯಿದೆ. ನಾಗ್ಪುರ ಪಂದ್ಯ ಮಾರ್ಚ್ 5ರಂದು 1.30 pmಗೆ ಆರಂಭಗೊಳ್ಳಲಿದೆ.

Story first published: Monday, March 4, 2019, 13:50 [IST]
Other articles published on Mar 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X