ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಟಗಾರರು ಯಾಕೆ ಧೋನಿಯ ಜರ್ಸಿ ಪಡೆಯುತ್ತಿದ್ದರು: ಮಾಹಿ ಕೊಟ್ಟ ಅಚ್ಚರಿಯ ಪ್ರತಿಕ್ರಿಯೆ

MS Dhoni’s stunning explanation on why players collected his CSK jerseys

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಸೋಲುಗಳ ಮೇಲೆ ಸೋಲು ಕಂಡ ಚೆನ್ನೈ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದೆ. ಆದರೆ ಟೂರ್ನಿಯುದ್ದಕ್ಕೂ ಸಿಎಸ್‌ಕೆ ಪಂದ್ಯದ ಮುಕ್ತಾಯದ ಬಳಿಕ ಎದುರಾಳಿ ತಂಡದ ಯುವ ಆಟಗಾರರು ಧೋನಿ ಸುತ್ತಲೂ ಸೇರಿಕೊಂಡು ಸಲಹೆಗಳನ್ನು ಪಡೆಯುತ್ತಿದ್ದ ಸಾಮಾನ್ಯವಾಗಿದ್ದು ಇನ್ನೂ ಕೆಲ ಆಟಗಾರರು ಪಂದ್ಯದ ಬಳಿಕ ಧೋನಿಯಿಂದ ಜರ್ಸಿಯನ್ನು ಪಡೆಯುತ್ತಿದ್ದರು. ಈ ಬಗ್ಗೆ ಧೋನಿ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಧೋನಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಧೋನಿ ಮುಂದೆ ಕಾಮೆಂಟೇಟರ್ ಹರ್ಷ ಭೊಗ್ಲೆ ಯುವ ಆಟಗಾರರು ಜರ್ಸಿಗಳನ್ನು ಪಡೆಯುತ್ತಿದ್ದ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.

ಐಪಿಎಲ್ ಅಂಕಪಟ್ಟಿ: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?ಐಪಿಎಲ್ ಅಂಕಪಟ್ಟಿ: ಅತಿ ಹೆಚ್ಚು ಬಾರಿ ಕೊನೆ ಸ್ಥಾನಕ್ಕೆ ಕುಸಿದ ತಂಡ ಯಾವ್ದು?

ಖಂಡಿತಾ ಕೊನೆಯದಲ್ಲ

ಖಂಡಿತಾ ಕೊನೆಯದಲ್ಲ

"ಬಹುಶಃ ಯುವ ಆಟಗಾರರು ಇದು ನನ್ನ ಅಂತಿಮ ಐಪಿಎಲ್ ಪಂದ್ಯ ಎಂದುಕೊಂಡಿದ್ದಾರೆ" ಎಂದು ಧೋನಿ ಹೇಳಿದ್ದಾರೆ. ಆದರೆ ಇದು ಇದೇ ಸಂದರ್ಭದಲ್ಲಿ ಧೋನಿ ಖಂಡಿತಾ ಇದು ನನ್ನ ಕೊನೆಯ ಐಪಿಎಲ್ ಪಂದ್ಯ ಅಲ್ಲ ಎನ್ನುವ ಸಂಗತಿಯನ್ನೂ ಬಹಿರಂಗಪಡಿಸಿದ್ದಾರೆ.

ಪಂದ್ಯದ ಬಳಿಕವೂ ಪುನರುಚ್ಛಾರ

ಪಂದ್ಯದ ಬಳಿಕವೂ ಪುನರುಚ್ಛಾರ

ಈ ಪಂದ್ಯದ ಟಾಸ್ ಸಂದರ್ಭದಲ್ಲೂ ಧೋನಿ ತನ್ನ ನಿವೃತ್ತಿ ವಿಚಾರದ ಬಗ್ಗೆ ಸ್ಪಷ್ಟತೆಯನ್ನು ನೀಡಿದ್ದರು. ಇದು ನಿನ್ನ ಕೊನೆಯ ಐಪಿಎಲ್ ಪಂದ್ಯವೇ ಎಂಬ ಪ್ರಶ್ನೆಗೆ ಧೋನಿ "ಖಂಡಿತಾ ಅಲ್ಲ ಎಂದು ಉತ್ತರಿಸಿದ್ದರು. ಇದೇ ಸಂಗತಿಯನ್ನು ಪಂದ್ಯದ ಅಂತ್ಯದ ಬಳಿಕವೂ ಧೋನಿ ಹೇಳಿದ್ದಾರೆ.

ಹರ್ಷ ಭೋಗ್ಲೆ ಪ್ರಶ್ನೆಗೆ ಧೋನಿ ಉತ್ತರ

ಹರ್ಷ ಭೋಗ್ಲೆ ಪ್ರಶ್ನೆಗೆ ಧೋನಿ ಉತ್ತರ

ಹರ್ಷ ಭೋಗ್ಲೆ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಧೋನಿ "ಅವರೆಲ್ಲಾ ನಾನು ನಿವೃತ್ತಿಯನ್ನು ಹೊಂದುತ್ತಿದ್ದೇನೆ ಎಂದು ಭಾವಿಸಿದ್ದಾರೆ. ನಿಮಗೆ ಗೊತ್ತಿದೆ ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದಿದ್ದೇನೆಂದು. ಅದೇ ರೀತಿ ಐಪಿಎಲ್‌ನಿಂದಲೂ ನಿವೃತ್ತಿ ಪಡೆಯಬಹುದೆಂದು ಭಾವಿಸಿದ್ದಾರೆ"

ಮತ್ತೆ ಕೆಲವೇ ತಿಂಗಳಲ್ಲಿ ಐಪಿಎಲ್

ಮತ್ತೆ ಕೆಲವೇ ತಿಂಗಳಲ್ಲಿ ಐಪಿಎಲ್

ಇದಕ್ಕೆ "ಖಂಡಿತಾ ಇಲ್ಲ ಅಲ್ಲವೇ" ಎಂದು ಹರ್ಷ ಭೋಗ್ಲೆ ಟಾಸ್ ಪ್ರಕ್ರಿಯೆ ಸಂದರ್ಭದಲ್ಲಿ ಹೇಳಿದ ಮಾತನ್ನೇ ಧೋನಿಯ ಮುಂದಿಟ್ಟರು. ಈ ಮಾತನ್ನು ಪುನರುಚ್ಛರಿಸಿದ ಧೋನಿ, ಲಾಕ್‌ಡೌನ್‌ನಂತಾ ಪ್ರಸಂಗ ಮತ್ತೆ ಬಾರದಿದ್ದರೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮತ್ತೆ ಐಪಿಎಲ್ ನಡೆಯಲಿದೆ. ಇದು ಉತ್ತಮವಾದ ಸಂಗತಿ. ನಾವು ಮತ್ತೆ ಬಲಿಷ್ಠರಾಗಿ ಬರಲಿದ್ದೇವೆ" ಎನ್ನುತ್ತಾ ಧೋನಿ ಐಪಿಎಲ್‌ನಲ್ಲಿ ತಮ್ಮ ಪಯಣ ಮುಂದುವರಿಯಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

Story first published: Monday, November 2, 2020, 21:46 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X