ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ನಾಯಕನಾಗಿ 100ನೇ ಗೆಲುವಿನ ಇತಿಹಾಸ ಬರೆದ ಧೋನಿ!

IPL 2019: ಐಪಿಎಲ್ ನಲ್ಲಿ ನಾಯಕನಾಗಿ ಗೆಲುವಿನ ಇತಿಹಾಸ ಬರೆದ ಧೋನಿ
MS Dhoni scripts unique record with victory over Rajasthan Royals

ಜೈಪುರ್, ಏಪ್ರಿಲ್ 12: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 11) ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಜಯ ಸಾಧಿಸಿತು. ಈ ಗೆಲುವು ಎಂಎಸ್‌ಡಿ ಪಾಲಿಗೆ ಬಲು ಅಪರೂಪವಾದುದು.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಯಾಕೆಂದರೆ ಇದು ನಾಯಕನಾಗಿ ಧೋನಿಗೆ ಲಭಿಸಿದ 100ನೇ ಗೆಲುವು. ಐಪಿಎಲ್‌ನಲ್ಲಿ ಈ ಅಪರೂಪದ ಸಾಧನೆ ಮೆರೆದ ಮೊದಲ ಆಟಗಾರನಾಗಿ ಧೋನಿ ಗುರುತಿಸಿಕೊಂಡರು. ಈ 100ನೇ ಗೆಲುವಿಗೂ ಧೋನಿಯ ಆಕರ್ಷಕ ಅರ್ಧಶತಕ (58 ರನ್, 43 ಎಸೆತ) ನೆರವಾಗಿದ್ದು ವಿಶೇಷ.

ಒಬ್ಬರನ್ನೊಬ್ಬರು ಗುರಾಯಿಸಿದ ಹಾರ್ದಿಕ್-ಹಾರ್ಡಸ್: ವೈರಲ್ ವಿಡಿಯೋಒಬ್ಬರನ್ನೊಬ್ಬರು ಗುರಾಯಿಸಿದ ಹಾರ್ದಿಕ್-ಹಾರ್ಡಸ್: ವೈರಲ್ ವಿಡಿಯೋ

ಧೋನಿ ನಾಯಕತ್ವದಲ್ಲಿ 100ನೇ ಜಯ ದಾಖಲಿಸಿದ ತಂಡದ ಬಗ್ಗೆ, ಧೋನಿಯ ಬಗೆಗಿನ ಕೆಲ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಬೆಂಗಳೂರು ನೆಚ್ಚಿನ ಎದುರಾಳಿ

ಬೆಂಗಳೂರು ನೆಚ್ಚಿನ ಎದುರಾಳಿ

ಧೋನಿ ನಾಯಕತ್ವದ ತಂಡ ಗಳಿಸಿದ ಈ 100 ಗೆಲುವುಗಳಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ. ಆರ್‌ಸಿಬಿ ವಿರುದ್ಧ ಒಟ್ಟು 15 ಗೆಲುವು ದಾಖಲಿಸಿದ ಹೆಗ್ಗಳಿಕೆ ಕೂಲ್ ಕ್ಯಾಪ್ಟನ್ ಧೋನಿ ನಾಯಕತ್ವದ ತಂಡಕ್ಕಿದೆ. ಹೀಗಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಫೇವರಿಟ್ ಅಪೊಸಿಷನ್ ತಂಡವಾಗಿ ಬೆಂಗಳೂರು ಗುರುತಿಸಿಕೊಂಡಿದೆ.

12 ಪ್ಲೇ ಆಫ್‌ ಗೆಲುವುಗಳು

12 ಪ್ಲೇ ಆಫ್‌ ಗೆಲುವುಗಳು

ಧೋನಿ ಮುಂದಾಳತ್ವದ ಐಪಿಎಲ್ ತಂಡ ಪ್ಲೇ ಆಫ್ ಪ್ರವೇಶಿಸಿದ ನಂತರದ ಪಂದ್ಯಗಳಲ್ಲಿ ಕಂಡ ಸೋಲು-ಗೆಲುವುಗಳ ಲೆಕ್ಕಾಚಾರ ತೆಗೆದರೆ 12 ಪಂದ್ಯಗಳನ್ನು ಗೆದ್ದು 7 ಪಂದ್ಯಗಳನ್ನು ಸೋತಿದೆ. ಅಂದರೆ ಪ್ಲೇ ಆಫ್‌ಗೆ ಪ್ರವೇಶಿಸಿದ ಬಳಿಕ ಸಿಎಸ್‌ಕೆ ಸೋತಿದ್ದು ಕಡಿಮೆ. ಹೀಗಾಗಿಯೇ ಚೆನ್ನೈ ತಂಡ ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವು (3 ಸಾರಿ ಚಾಂಪಿಯನ್) ದಾಖಲಿಸಿದ ತಂಡವಾಗಿ ಮುಂಬೈ ಇಂಡಿಯನ್ಸ್ ಜೊತೆ ಸ್ಥಾನ ಹಂಚಿಕೊಂಡಿದೆ.

95+5 ಗೆಲುವಿನ ಸಂಭ್ರಮ

95+5 ಗೆಲುವಿನ ಸಂಭ್ರಮ

100 ಪಂದ್ಯಗಳನ್ನು ಗೆದ್ದ ತಂಡವನ್ನು ಮುನ್ನಡೆಸಿದ್ದು ಎಂಎಸ್ ಧೋನಿಯೇ. ಆದರೆ ಈ ನೂರೂ ಗೆಲುವುಗಳು ಚೆನ್ನೈ ಸೂಪರ್‌ ಕಿಂಗ್ಸ್‌ ಒಂದೇ ತಂಡಕ್ಕೆ ಸಲ್ಲೋದಿಲ್ಲ. ಬದಲಿಗೆ ಈ 100 ಗೆಲುವುಗಳಲ್ಲಿ 95 ಗೆಲುವು ಸಿಎಸ್‌ಕೆ ಪಾಲಿನದ್ದಾದರೆ ಇನ್ನುಳಿದ 5 ಗೆಲುವುಗಳು ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ತಂಡಕ್ಕೆ ಸಲ್ಲುತ್ತದೆ.

ತವರಿನಲ್ಲಿ ಸೋತಿದ್ದೇ ಕಡಿಮೆ

ತವರಿನಲ್ಲಿ ಸೋತಿದ್ದೇ ಕಡಿಮೆ

ತವರು ನೆಲ ಅಂದರೆ ಚೆನ್ನೈಯಲ್ಲಿ ನಡೆದ ಪಂದ್ಯಗಳನ್ನು ಗಮನಿಸಿದರೆ ಧೋನಿ ನಾಯಕತ್ವ ವಹಿಸಿದ ಶೇ. 75 ಪಂದ್ಯಗಳಲ್ಲಿ ಸಿಎಸ್‌ಕೆ ತಂಡ ಚೆನ್ನೈ ನೆಲದಲ್ಲಿ ಗೆಲುವು ದಾಖಲಿಸಿದೆ. ಅಲ್ಲದೆ 2010, 2011 ಮತ್ತು 2018ರಲ್ಲಿ ಚೆನ್ನೈ ಚಾಂಪಿಯನ್ ಅನ್ನಿಸುವಾಗಲೂ ತಂಡವನ್ನು ಮುನ್ನಡೆಸಿದ್ದು ಧೋನಿಯೇ.

Story first published: Friday, April 12, 2019, 1:00 [IST]
Other articles published on Apr 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X