ವಿಶಾಖಪಟ್ನಂ, ಫೆಬ್ರವರಿ 23: ನ್ಯೂಜಿಲ್ಯಾಂಡ್ ಪ್ರವಾಸದ ಬಳಿಕ ಟೀಮ್ ಇಂಡಿಯಾ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ನಂನಲ್ಲಿ ಟಿ20 ಸರಣಿ ಆಡುವುದಲ್ಲಿದೆ. ಫೆಬ್ರವರಿ 24ರಂದು ನಡೆಯುವ ಆರಂಭಿಕ ಟಿ20 ಪಂದ್ಯಕ್ಕೂ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ಧೋನಿಯ ಬ್ಯಾಟಿಂಗ್ ವಿಡಿಯೋ ಭರ್ಜರಿಯಾಗಿ ಓಡಾಡುತ್ತಿದೆ.
ಆಡದೆ ಕೂತು ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಗೆಲ್ಲಿಸುತ್ತೀರಾ?: ಸಚಿನ್ ಪ್ರಶ್ನೆ!
ಇತ್ತಂಡಗಳ ಎರಡು ಪಂದ್ಯಗಳ ಮೊದಲ ಟಿ20 ಪಂದ್ಯ ವಿಶಾಖಪಟ್ನಂನಲ್ಲಿ, ದ್ವಿತೀಯ ಪಂದ್ಯ ಫೆಬ್ರವರಿ 27ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಸರಣಿಗಾಗಿ ನೆಟ್ ಅಭ್ಯಾಸ ನಡೆಸುವಾಗ ಧೋನಿ ಬ್ಯಾಟ್ ಬೀಸಿರುವುದನ್ನು ನೋಡಿದರೆ ಆಸ್ಟ್ರೇಲಿಯಾಕ್ಕೆ ಎಚ್ಚರಿಕೆ ರವಾನಿಸುತ್ತಿರೋ ಹಾಗಿದೆ. ಈ ವಿಡಿಯೋವನ್ನು ಬಿಸಿಸಿಐ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.
Belting it at the nets @msdhoni 💥💥🔥👌🏻 #TeamIndia @Paytm #INDvAUS pic.twitter.com/hRDZUE5MvX
— BCCI (@BCCI) February 23, 2019
ಟಿ20 ಸರಣಿಗಾಗಿ ಸಂಭಾವ್ಯ ಭಾರತ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ರೋಹಿತ್ ಶರ್ಮಾ (ವಿ.ಸಿ), ಕೆ.ಎಲ್. ರಾಹುಲ್, ಶಿಖರ್ ಧವನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಎಮ್ಎಸ್ ಧೋನಿ (ವಿಕೆ), ಕೃನಾಲ್ ಪಾಂಡ್ಯ, ವಿಜಯ್ ಶಂಕರ್, ಯುಜುವೇಂದ್ರ ಚಹಾಲ್, ಜಸ್ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್, ಮಯಾಂಕ್ ಮಾರ್ಕಂಡೆ.
2019ರ ಇಂಡಿಯನ್ ಪ್ರೀಮಿಯರ್ ಲೀಗ್ ಅದ್ದೂರಿ ಆರಂಭೋತ್ಸವ ಇಲ್ಲ!
ಆಸ್ಟ್ರೇಲಿಯಾ ತಂಡ: ಆ್ಯರನ್ ಫಿಂಚ್ (ಸಿ), ಅಲೆಕ್ಸ್ ಕ್ಯಾರಿ, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಡಿ ಅರ್ಚಿ ಶಾರ್ಟ್, ಮಾರ್ಕಸ್ ಸ್ಟೊಯಿನ್ಸ್, ಪ್ಯಾಟ್ ಕಮ್ಮಿನ್ಸ್, ಗ್ಲೆನ್ ಮ್ಯಾಕ್ಸ್ವೆಲ್, ಜೀಯೆ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ನಾಥನ್ ಕೌಲ್ಟರ್-ನೈಲ್, ಪೀಟರ್ ಹ್ಯಾಂಡ್ಸ್ಕಾಂಬ್, ಜಾಸನ್ ಬೆಹ್ರೆಂಡಾರ್ಫ್, ನಾಥನ್ ಲಿಯಾನ್, ಆಷ್ಟನ್ ಟರ್ನರ್ , ಆದಮ್ ಜಂಪಾ.