ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಕ್ಕುಟೋದ್ಯಮದತ್ತ ಎಂಎಸ್ ಧೋನಿ ಚಿತ್ತ: 2000 ಕೋಳಿಮರಿಗಳಿಗೆ ಆರ್ಡರ್!

MS Dhoni set to farm Kadaknath chickens at his poultry unit

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಇತರ ಎಲ್ಲರಿಗಿಂತಲೂ ಭಿನ್ನ ಅಭಿರುಚಿಯನ್ನು ಹೊಂದಿರುವ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಧೋನಿ ಈ ವರ್ಷ ವಿದಾಯವನ್ನು ಹೇಳಿದ್ದು ಈಗ ಐಪಿಎಲ್‌ನಲ್ಲಿ ಮಾತ್ರವೇ ಕಾಣಿಸಿಕೊಳ್ಳತ್ತಿದ್ದಾರೆ. ಐಪಿಎಲ್ 13ನೇ ಆವೃತ್ತಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಧೋನಿ ತವರಿಗೆ ಆಗಮಿಸಿದ್ದು ಕೋಳಿ ಸಾಕಾಣೆಯತ್ತ ಚಿತ್ತ ಹರಿಸಿದ್ದಾರೆ.

ಧೋನಿ ತಮ್ಮ ಕೋಳಿ ಸಾಕಾಣಿಕೆಯ ಕೇಂದ್ರದಲ್ಲಿ "ಕಡಕ್‌ನಾಥ್" ಕೋಳಿಗಳನ್ನು ಸಾಕಲಿದ್ದಾರೆ. ಈಗಾಗಲೇ ಎಂಎಸ್ ಧೋನಿ 2000 ಕಡಕ್‌ನಾಥ್ ಕೋಳಿ ಮರಿಗಳಿಗೆ ಆರ್ಡರ್ ಕೂಡ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಸಾವಯವ ಕೋಳಿ ಸಾಕಾಣಿಕ ಕೇಂದ್ರದಲ್ಲಿ ಈ ವಿಶೇಷ ತಳಿಯ ಕೋಳಿಗಳನ್ನು ಸಾಕಲಿದ್ದಾರೆ ಧೋನಿ.

ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?

ಜಬುವಾದ ಕಡಕ್‌ನಾತ್ ಕೋಳಿ ಸಂಶೋಧನಾ ಕೇಂದ್ರದ ನಿರ್ದೇಶಕ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರಂಭದಲ್ಲಿ ಧೋನಿ ಗೆಳೆಯರ ಮೂಲಕ ತನ್ನನ್ನು ಸಂಪರ್ಕಿಸಿದ್ದರು. ಆದರೆ ಆ ಸಮದರ್ಭದಲ್ಲಿ ಕಳುಹಿಸಿಕೊಡಲು ಸಾಧ್ಯವಾಗದ ಕಾರಣ ತಾಂಡ್ಲಾದ ರೈತರನ್ನು ಸಂಪರ್ಕಿಸಲು ತಿಳಿಸಿದ್ದರು.

ಕಡಕ್‌ನಾಥ್ ಕೋಳಿ ವಿಶೇಷವಾದ ಹಾಗೂ ಅಪರೂಪದ ತಳಿಯಾಗಿದೆ. ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿರುವ ಈ ತಳಿ ರಕ್ತವೂ ಕಪ್ಪಾಗಿದ್ದು ಮಾಂಸವೂ ಕಪ್ಪುಬಣ್ಣವೇ ಆಗಿದೆ. ಈ ಕೋಳಿಗಳ ಮೂಲ ಮಧ್ಯ ಪ್ರದೇಶದ ಜಬುವಾ ಜಿಲ್ಲೆಯಾಗಿದೆ. ವಿನೋದ್ ಮೆಂಡಾ ಎಂಬ ಸ್ಥಳೀಯ ರೈತರೊಬ್ಬರಿಂದ ಖರೀದಿಸುತ್ತಿದ್ದಾರೆ. ಡಿಸೆಂಬರ್ 15ರಂದು ರಾಂಚಿಗೆ ಈ ಮರಿಗಳು ತಲುಪಲಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Story first published: Friday, November 13, 2020, 15:13 [IST]
Other articles published on Nov 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X