ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021ಕ್ಕೂ ಮುನ್ನ ಧೋನಿ ಹೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕು: ಕುಮಾರ ಸಂಗಕ್ಕಾರ

MS Dhoni Should Play Some More Competitive Cricket Before IPL 2021: Kumar Sangakkara

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್ 2020)ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲನಾದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅತ್ಯಮೂಲ್ಯ ಸಲಹೆ ನೀಡಿದ್ದಾರೆ.

2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋತ ಬಳಿಕ ಧೋನಿ ಮತ್ತೆ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟರಲಿಲ್ಲ. ಆದರೆ ಐಪಿಎಲ್ 13ನೇ ಆವೃತ್ತಿಯಲ್ಲಿ ಧೋನಿ ಒಂದು ವರ್ಷದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಿದರು. ಬ್ಯಾಟಿಂಗ್‌ನಲ್ಲಿ ತುಂಬಾನೆ ಸಾಧಾರಣ ಪ್ರದರ್ಶನ ನೀಡಿದರು. ಜೊತೆಗೆ ಮೂರು ಬಾರಿಯ ಚಾಂಪಿಯನ್‌ ಸಿಎಸ್‌ಕೆ ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ವಿಫಲರಾದರು.

ಔಟ್ ಆದ ಬಳಿಕ ವರುಣ್ ಜೊತೆ ಮಾತನಾಡಿದ ಧೋನಿ: ವಿಡಿಯೋಔಟ್ ಆದ ಬಳಿಕ ವರುಣ್ ಜೊತೆ ಮಾತನಾಡಿದ ಧೋನಿ: ವಿಡಿಯೋ

ಆದರೆ ಧೋನಿಯ ಈ ಅಪರೂಪದ ವೈಫಲ್ಯವನ್ನು ಹೋಗಲಾಡಿಸಲು ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರು ಸಲಹೆ ನೀಡಿದ್ದಾರೆ. ಈ ವರ್ಷದ ಸೀಸನ್‌ನಲ್ಲಿ ಸಿಎಸ್‌ಕೆ ಗೆ ಏನು ಉಳಿದಿಲ್ಲ. ಹೀಗಾಗಿ ಧೋನಿ ಮುಂದಿನ ಸೀಸನ್‌ನಲ್ಲಿ ಹೇಗೆ ಕಂಬ್ಯಾಕ್ ಮಾಡಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದಿದ್ದಾರೆ.

''ಧೋನಿ ಮುಂದಿನ ಆವೃತ್ತಿಯಲ್ಲಿ ಹೇಗೆ ಬಲವಾಗಿ ಪುಟಿದೇಳಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು. ಕೇವಲ ಐಪಿಎಲ್‌ನಲ್ಲಿ ಮಾತ್ರ ಕ್ರಿಕೆಟ್ ಆಡುವುದರಿಂದ ಯಾವುದೇ ರೀತಿಯಲ್ಲಿ ಸಹಾಯವಾಗುವುದಿಲ್ಲ ಎಂಬ ಕಾರಣಕ್ಕೆ ಎಂಎಸ್ ತನ್ನ ಕಳೆದುಹೋದ ಫಾರ್ಮ್ ಅನ್ನು ಮರಳಿ ಪಡೆಯಲು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕು'' ಎಂದು ಶ್ರೀಲಂಕಾ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಮಾತನ್ನು ಮುಂದುವರಿಸಿದ ಸಂಗಕ್ಕಾರ ಧೋನಿ ಇನ್ನಷ್ಟು ಉತ್ತಮ ಕ್ರಿಕೆಟ್ ಆಡಲು ಹಸಿದಿದ್ದಾರೆ. ತಮ್ಮ ಬ್ಯಾಟಿಂಗ್‌ನಲ್ಲಿ ಸುಧಾರಿಸಿಕೊಂಡರೆ ತಂಡವನ್ನು ಗೆಲುವಿಗಿಂತ ಹೆಚ್ಚಾಗಿ ತಮ್ಮ ಬ್ಯಾಟಿಂಗ್‌ನಿಂದ ಸ್ಫೂರ್ತಿ ತುಂಬಬಹುದು ಎಂದು ಹೇಳಿದ್ದಾರೆ.

Story first published: Saturday, October 31, 2020, 9:45 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X