ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

5ನೇ ಕ್ರಮಾಂಕಕ್ಕಿಂತ ಕೆಳಗೆ ಧೋನಿ ಬ್ಯಾಟಿಂಗ್‌ಗೆ ಇಳಿಯಲೇ ಬಾರದು: ಗಂಭೀರ್, ಅಗರ್ಕರ್ ಅಭಿಪ್ರಾಯ

Ms Dhoni Shouldnt Bat Anywhere Below No.5: Says Gautam Gambhir And Ajit Agarkar

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಶುಕ್ರವಾರ ಐಪಿಎಲ್ ಅಂಗಳದಲ್ಲಿ ಮುಖಾಮುಖಿಯಾಗುತ್ತಿರುವ ಹಿನ್ನೆಲೆಯಲ್ಲಿ ಗೌತಮ್ ಗಂಭೀರ್ ಹಾಗೂ ಅಜಿತ್ ಅಗರ್ಕರ್ ಧೋನಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತನ್ನಾಡಿದ್ದಾರೆ. ಎಂಎಸ್ ಧೋನಿ ಈ ಪಂದ್ಯದಲ್ಲಿ ಐದನೇ ಕ್ರಮಾಂಕಕ್ಕಿಳಿತ ಕೆಳಗೆ ಬ್ಯಾಟಿಂಗ್‌ಗೆ ಇಳಿಯ ಬಾರದು ಎಂಬ ಅಭಿಪ್ರಾಯವನ್ನು ಈ ಇಬ್ಬರು ಕ್ರಿಕೆಟಿಗರು ವ್ಯಕ್ತಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ನಾಯಕ ಧೋನಿ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ ಎನ್ನುವುದರ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿದೆ.ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ಸ್ವತಃ ಗೌತಮ್ ಗಂಭೀರ್ ಜೊತೆಗೆ ವೀರೇಂದ್ರ ಸೆಹ್ವಾಗ್ ಕೂಡ ದೋನಿ ನಡೆಯನ್ನು ಕಟು ಶಬ್ಧಗಳಲ್ಲಿ ಟೀಕಿಸಿದ್ದರು.

ಕುಂಬ್ಳೆ ಮಾರ್ಗದರ್ಶನದಿಂದಲೇ ಯಶಸ್ಸು ಸಾಧ್ಯವಾಯಿತು: ರವಿಕುಂಬ್ಳೆ ಮಾರ್ಗದರ್ಶನದಿಂದಲೇ ಯಶಸ್ಸು ಸಾಧ್ಯವಾಯಿತು: ರವಿ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಎಂಸ್ ಧೋನಿ ವಿಕೆಟ್‌ಗಳು ಉರುಳುತ್ತಿದ್ದರೂ ತಾನು ಬ್ಯಾಟಿಂಗ್‌ಗೆ ಇಳಿಯುವ ಬದಲು ಸ್ಯಾಮ್ ಕರ್ರನ್, ಕೇದಾರ್ ಜಾಧವ್, ಹಾಗೂ ಋತುರಾಜ್ ಗಾಯಕ್ವಾಡ್ ಅವರನ್ನು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಿದ್ದರು. ಇದು ಬೇಗನೆ ವಿಕೆಟ್ ಉರುಳಲು ಕಾರಣವಾಗಿ ಇನ್ನೊಂದು ತುದಿಯಲ್ಲಿ ಆಡುತ್ತಿದ್ದ ಫಾಪ್ ಡು ಪ್ಲೆಸಿಸ್‌ಗೆ ಹೆಚ್ಚು ಒತ್ತಡವನ್ನುಂಡು ಮಾಡಲು ಕಾರಣವಾಗಿತ್ತು.

ಬಳಿಕ 7ನೇ ಕ್ರಮಾಂಕದಲ್ಲಿ ಧೋನಿ ಇಳಿದರಾದರೂ ಆರ್‌ಆರ್‌ ವೇಗಿ ಜೋಫ್ರಾ ಆರ್ಚರ್ ಎಸೆತಕ್ಕೆ ಸೂಕ್ತ ಉತ್ತರವನ್ನು ನೀಡಲು ವಿಫಲರಾಗಿದ್ದರು. ಅಂತಿಮ ಓವರ್ ಎಸೆಯಲು ಬಂದ ಮಧ್ಯಮ ವೇಗದ ಬೌಲರ್ ಸ್ಯಾಮ್ ಕರ್ರನ್ ಎಸೆತಕ್ಕೆ ಸತತ ಮೂರು ಸಿಕ್ಸರ್ ಸಿಡಿಸುವಲ್ಲಿ ಯಶಸ್ವಿಯಾದರೂ ತಂಡ 16ರನ್‌ಗಳ ಅಂತರದಿಂದ ಶರಣಾಗಿತ್ತು.

ಬೆಂಗಳೂರು ಸೋಲಿನ ಹೊಣೆ ತಾನೇ ಹೊತ್ತುಕೊಂಡ ನಾಯಕ ವಿರಾಟ್ ಕೊಹ್ಲಿಬೆಂಗಳೂರು ಸೋಲಿನ ಹೊಣೆ ತಾನೇ ಹೊತ್ತುಕೊಂಡ ನಾಯಕ ವಿರಾಟ್ ಕೊಹ್ಲಿ

ಕ್ರಿಕ್ ಇನ್ಫೋ ಜೊತೆಗೆ ಮಾತನಾಡಿದ ಗಂಭೀರ್, ಸುರೇಶ್ ರೈನಾ ಅಲಭ್ಯತೆಯಲ್ಲಿ ಧೋನಿ ಖಂಡಿತವಾಗಿಯೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬೇಕು ಎಂದರು. ಗಂಭೀರ್ ಹೇಳಿದ ಈ ಮಾತಿಗೆ ಮಾಜಿ ಆಟಗಾರ ಅಜಿತ್ ಅಗರ್ಕರ್‌ ಧ್ವನಿ ಗೂಡಿಸಿದ್ದು "ನೀವು ಉತ್ತಮ ಫಾರ್ಮ್‌ನಲ್ಲಿವೆಂದಾದರೆ ಹೆಚ್ಚಿನ ಆಟವನ್ನು ಆಡಬೇಕು. ಧೋನಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವುದನ್ನು ನೋಡುವುದು ವಿಪರ್ಯಾಸವೆನಿಸುತ್ತದೆ ಎಂದು ಅಗರ್ಕರ್ ಹೇಳಿದ್ದಾರೆ.

Story first published: Friday, September 25, 2020, 17:42 [IST]
Other articles published on Sep 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X