ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಿಸ್ಸಾನ್ ಜೊಂಗಾ' ಮೂಲಕ ಆರ್ಮಿ ಮೇಲಿನ ಪ್ರೀತಿ ತೋರಿಕೊಂಡ ಧೋನಿ

MS Dhoni rides his new Nissan SUV Jonga in Ranchi | Oneindia Kannada
MS Dhoni spotted driving Nissan Jonga on Ranchi roads

ರಾಂಚಿ, ಅಕ್ಟೋಬರ್ 22: ಕಾರು ಮತ್ತು ಬೈಕ್‌ಗಳ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಇರುವ ಕ್ರೇಝ್ ಬಗ್ಗೆ ನಿಮಗೆ ಗೊತ್ತಿರಬಹುದು. 38ರ ಹರೆಯದ ಧೋನಿ ಇತ್ತೀಚೆಗೆ ಹೊಸ ಬ್ರ್ಯಾಂಡ್‌ ಕಾರನ್ನು ರಾಂಚಿ ಟೌನ್‌ನಲ್ಲಿ ಚಲಾಯಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!ತಮಾಷೆಯಾಗೇ ಪತ್ರಕರ್ತರ ಕಾಲೆಳೆದ ರೋಹಿತ್ ಶರ್ಮಾ: ವೈರಲ್ ವಿಡಿಯೋ!

ಭಾರತೀಯ ಸೇನೆಯ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಕರ್ನಲ್ ಆಗಿರುವ ಧೋನಿ, 2016ರ ಮಿಲಿಟರಿ ಮಾಡೆಲ್ 'ನಿಸ್ಸಾನ್ ಜೊಂಗ' ಜೀಪ್‌ ಮಾದರಿಯ ಕಾರನ್ನು ರಾಂಚಿ ನಗರದಲ್ಲಿ ಭಾನುವಾರ (ಅಕ್ಟೋಬರ್ 20) ಚಲಾಯಿಸಿದ್ದರು.

'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!'ದ ಹಂಡ್ರೆಡ್‌'ಗೆ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಕೊಳ್ಳೋರೇ ಇಲ್ಲ!

ನಿಸಾನ್ ಕಂಪನಿ ತಯಾರಿಸಿರುವ ಜೊಂಗ ಹೆಚ್ಚಾಗಿ ಆರ್ಮಿಯಲ್ಲಿ ಬಳಸಲ್ಪಡುತ್ತದೆ. 'ಜಬಲ್ಪುರ್ ಆರ್ಡ್‌ನೆನ್ಸ್ ಆ್ಯಂಡ್ ಗನ್‌ಕ್ಯಾರೇಜ್ ಅಸೆಂಬ್ಲಿ' ಜೊಂಗದ (JONGA) ವಿಸ್ತೃತ ರೂಪ. 1960ರಲ್ಲಿ ನಿಸ್ಸಾನ್ P60 ಅನ್ನು ಪರಿಚಯಿಸಿತ್ತು. ಈ ಮಾದರಿಯನ್ನೂ 1963-64ರ ಭಾರತೀಯ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿತ್ತು.

ರಾಂಚಿಯಲ್ಲಿ ಮಿಂಚಿದ ಭಾರತ, ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಷ್ ಮುಖಭಂಗರಾಂಚಿಯಲ್ಲಿ ಮಿಂಚಿದ ಭಾರತ, ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಷ್ ಮುಖಭಂಗ

ಮಿಲಿಟರಿ ಗ್ರೀನ್ ಬಣ್ಣದಲ್ಲಿರುವ ಈ ಜೀಪನ್ನು ಧೋನಿ ನಗರದ ಪೆಟ್ರೋಲ್ ಪಂಪ್‌ ಬಳಿ ನಿಲ್ಲಿಸಿದ್ದಾಗ ಜನರು ತಮ್ಮ ನೆಚ್ಚಿನ ಆಟಗಾರನ ಗುರುತುಹಿಡಿದ್ದಿದ್ದಾರೆ. ಅನಂತರ ಅಭಿಮಾನಿಗಳಿಗೆಲ್ಲ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಧೋನಿ ಜೀಪಿನಿಂದ ಕೆಳಗಿಳಿಯಲಿಲ್ಲವಾದರೂ ಕಾರಿನೊಳಗಿನಿಂದಲೇ ಸೆಲ್ಫಿಗೆ ಪೋಸ್‌ ಕೊಟ್ಟು ಅಭಿಮಾನಿಗಳ ಆಸೆಗೆ ಸ್ಪಂದಿಸಿದರು.

ಭಾರತ vs ದ.ಆಫ್ರಿಕಾ: ಅಪರೂಪದ ವಿಶ್ವದಾಖಲೆಗಳ ಬರೆದ ರೋಹಿತ್ ಶರ್ಮಾ!ಭಾರತ vs ದ.ಆಫ್ರಿಕಾ: ಅಪರೂಪದ ವಿಶ್ವದಾಖಲೆಗಳ ಬರೆದ ರೋಹಿತ್ ಶರ್ಮಾ!

ರಾಂಚಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಮತ್ತು ಕೊನೆಯ ಟೆಸ್ಟ್‌ ಪಂದ್ಯ ವೀಕ್ಷಿಸಲು ಧೋನಿ ರಾಂಚಿಗೆ ತೆರಳಿದ್ದರು. ಈ ವೇಳೆ ಟೀಮ್ ಇಂಡಿಯಾದ ಡ್ರೆಸ್ಸಿಂಗ್‌ ರೂಮ್‌ಗೆ ಭೇಟಿ ನೀಡಿದ್ದ ಧೋನಿ ಆಟಗಾರ ಜೊತೆ ಮಾತುಕತೆ ನಡೆಸಿದ್ದರು. ಭಾರತ ಈ ಪಂದ್ಯದಲ್ಲಿ ಇನ್ನಿಂಗ್ಸ್‌ ಸಹಿತ 202 ರನ್‌ ಜಯದೊಂದಿಗೆ ಸರಣಿಯನ್ನೂ 3-0ಯಿಂದ ಗೆದ್ದಿತ್ತು.

Story first published: Tuesday, October 22, 2019, 17:47 [IST]
Other articles published on Oct 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X