ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿಯ ಹೊಸ ಸ್ಟೈಲ್ ಗೆ ಫ್ಯಾನ್ಸ್ ಫಿದಾ

By ಚಕ್ರವರ್ತಿ
ಧೋನಿ ಈ ಸ್ಟೈಲ್ ಗೆ ಕಾರಣ ಏನು ಅಂತ ಗೊತ್ತಾದ್ರೆ ಹೆಮ್ಮೆ ಆಗುತ್ತೆ..? | | M S Dhoni
Ms Dhoni Spotted Jaipur Airport In New Style

ಜೈಪುರ, ಆಗಸ್ಟ್ 26: ವೆಸ್ಟ್ ಇಂಡೀಸ್ ಸರಣಿಯಿಂದ ಹಿಂದೆ ಸರಿದಿದ್ದ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 15 ದಿನಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ಕಾಶ್ಮೀರದ ಗಡಿಯಲ್ಲಿ ಸೇನೆಯೊಂದಿಗೆ ಕೆಲಸ ಮಾಡಿದ್ದ ಧೋನಿ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದರು.

ಸೇನೆಯಲ್ಲಿ ಕಾರ್ಯನಿರ್ವಹಿಸಿ ಈಗಾಗಲೇ ಧೋನಿ ವಾಪಸ್ ಬಂದಿದ್ದಾರೆ. ಬಳಿಕ ಜಾಹೀರಾತು ಒಂದರಲ್ಲಿ ಧೋನಿ ಕಾಣಿಸಿಕೊಂಡಿದ್ದರು. ಆಮೇಲೆ ಯಾರ ಕಣ್ಣಿಗೆ ಎಂ.ಎಸ್.ಡಿ ಬಿದ್ದಿಲ್ಲ. ನಿನ್ನೆ ಕಾರ್ಯಕ್ರಮವೊಂದರ ನಿಮಿತ್ತ ಜೈಪುರಕ್ಕೆ ಆಗಮನಿಸಿದ ಕೂಲ್ ಕ್ಯಾಪ್ಟನ್ ಏರ್ ಪೋರ್ಟ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.

ಬ್ಯಾಟ್ ಬಿಟ್ಟು ಬಂದೂಕು ಹಿಡಿದ ಮಹೇಂದ್ರ ಸಿಂಗ್ ಧೋನಿ ಬ್ಯಾಟ್ ಬಿಟ್ಟು ಬಂದೂಕು ಹಿಡಿದ ಮಹೇಂದ್ರ ಸಿಂಗ್ ಧೋನಿ

ತಲೆಗೆ ಕಪ್ಪು ಬಣ್ಣದ ಬಟ್ಟೆ ಕಟ್ಟಿಕೊಂಡು ವಿಶೇಷವಾಗಿ ಎಂಟ್ರಿ ಕೊಟ್ಟ ಧೋನಿ ಅವರ ಈ ಸ್ಟೈಲ್ ಈಗ ಬಹಳ ಚರ್ಚೆಯಾಗ್ತಿದೆ. ಸದಾ ವಿಭಿನ್ನವಾದ ಹೇರ್ ಸ್ಟೈಲ್ ಮೂಲಕ ಸುದ್ದಿಯಾಗುವ ಧೋನಿ, ಈ ಸಲ ಹೇರ್ ಸ್ಟೈಲ್ ಗಿಂತ ವಿಶೇಷವಾದ ಸ್ಟೈಲ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ.

Ms Dhoni Spotted Jaipur Airport In New Style

ಭಾರತ ಸೈನಿಕರಿಗೆ ಗೌರವ ನೀಡುವ ಸಲುವಾಗಿ ಧೋನಿ ಈ ಸ್ಟೈಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೈನಿಕರು ಕೂಡ ಈ ರೀತಿ ತಲೆಗೆ ಬಟ್ಟೆ ಕಟ್ಟಿಕೊಂಡಿರುವುದನ್ನ ಹಲವು ಬಾರಿ ನೋಡಿದ್ದೇವೆ. ಇತ್ತೀಚಿಗಷ್ಟೆ ಸೇನೆಯಿಂದ ವಾಪಸ್ ಆಗಿರುವ ಧೋನಿ ಇನ್ನು ಕಮಾಂಡೋರಂತೆ ಓಡಾಡುತ್ತಿರುವುದು ನಿಜಕ್ಕೂ ಅಚ್ಚರಿ.

ಅಂಪೈರ್‌ನಿಂದ ಚೆಂಡು ಪಡೆದು ನಿವೃತ್ತಿಯ ಸುಳಿವು ಕೊಟ್ಟರೇ ಧೋನಿ?ಅಂಪೈರ್‌ನಿಂದ ಚೆಂಡು ಪಡೆದು ನಿವೃತ್ತಿಯ ಸುಳಿವು ಕೊಟ್ಟರೇ ಧೋನಿ?

ವಿಶ್ವಕಪ್ ಮುಗಿದ ಬಳಿಕ ಧೋನಿ ನಿವೃತ್ತಿ ಘೋಷಿಸುತ್ತಾರೆ ಎನ್ನಲಾಯಿತು. ಆ ಬಗ್ಗೆ ಸ್ಪಷ್ಟಪಡಿಸದ ಧೋನಿ ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದರು. ಅಲ್ಲಿಂದ ಸೇನೆಗೆ ಹೋಗುವ ಮೂಲಕ ಅಭಿಮಾನಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ.

ಅಂದ್ಹಾಗೆ, ಲೆಫ್ಟಿನೆಂಟ್ ಕರ್ನಲ್ ಧೋನಿ ಅವರನ್ನ ಜುಲೈ 30 ರಿಂದ ಆಗಸ್ಟ್ 15ರವರೆಗೂ ಕಾಶ್ಮೀರದ ಭಯೋತ್ಪಾದನಾ ನಿಗ್ರಹ ಘಟಕದಲ್ಲಿ ನೇಮಿಸಲಾಗಿತ್ತು. ಪ್ಯಾರಾ ಕಮಾಂಡೋಗಳ ಬೆಟಾಲಿಯನ್ ಗಳಲ್ಲಿ 15 ದಿನಗಳ ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ದಿನದಂದು ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಆರೋಗ್ಯ ವಿಚಾರಿಸಿ, ಅವರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಿಸಿದ್ದರು.

Story first published: Monday, August 26, 2019, 16:42 [IST]
Other articles published on Aug 26, 2019
Read in English: Dhoni sports a new look
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X