ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ಕ್ರಿಕೆಟ್‌ಗೆ ಧೋನಿ ಇನ್ನೂ ಕೊಡುವವರಿದ್ದಾರೆ: ಬಿಸಿಸಿಐ ಖಜಾಂಚಿ

MS Dhoni still has much to offer to Indian cricket: Anirudh Chaudhry

ನವದೆಹಲಿ, ಮೇ 30: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಖಜಾಂಚಿ ಅನಿರುದ್ಧ್ ಚೌಧರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಶ್ರೇಷ್ಠ ಕ್ರಿಕೆಟಿಗ ಧೋನಿ ಭಾರತೀಯ ಕ್ರಿಕೆಟ್‌ಗೆ ಇನ್ನೂ ಸಾಕಷ್ಟು ಕೊಡುಗೆಗಳನ್ನು ನೀಡುವವರಿದ್ದಾರೆ ಎಂದು ಚೌಧರಿ ಹೇಳಿದ್ದಾರೆ.

ಅತೀ ಚಿಕ್ಕ ಮೈದಾನದಲ್ಲಿ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಆಸ್ಟ್ರೇಲಿಯಾಅತೀ ಚಿಕ್ಕ ಮೈದಾನದಲ್ಲಿ ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ: ಆಸ್ಟ್ರೇಲಿಯಾ

"ಧೊನಿ ಫಿಟ್ ಆಗಿದ್ದಾರೆ. ಭಾರತದಲ್ಲಿ ಆತ ಈಗಲೂ ಬೆಸ್ಟ್ ವಿಕೆಟ್ ಕೀಪರ್. ಕ್ರಿಕೆಟ್‌ ವಿಚಾರದಲ್ಲಿ ಧೋನಿ ಉತ್ತಮ ಜ್ಞಾನಿ,' ಎಂದು ನೀರಜ್ ಮೋದಿ ಸ್ಕೂಲ್‌ನಲ್ಲಿ ನಡೆದ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ಅನಿರುದ್ಧ್ ಚೌಧರಿ ಹೇಳಿದ್ದಾರೆ.

ಜೆಪಿ ಡುಮಿನಿಯ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಇಬ್ಬರೇ ಭಾರತೀಯರು!ಜೆಪಿ ಡುಮಿನಿಯ ಆಲ್ ಟೈಮ್ ಐಪಿಎಲ್ ತಂಡದಲ್ಲಿ ಇಬ್ಬರೇ ಭಾರತೀಯರು!

'ಆಟದ ವೇಳೆ ನೀವು ಗಮನಿಸಿರಬಹುದು. ಮೈದಾನದಲ್ಲಿ ನಿಂತಿದ್ದ ಆಟಗಾರನಿಗೆ ಧೋನಿ ನಿನ್ನ ಎಡಕ್ಕೆ ಚಲಿಸು ಎಂಬಂತೆ ಸನ್ನೆ ಮಾಡುತ್ತಾರೆ. ಮತ್ತೆ ಬಲಕ್ಕೆ ಚಲಿಸು ಅನ್ನುತ್ತಾರೆ. ಕೊನೆಗೆ ಆಟಗಾರ ಮೊದಲಿದ್ದ ಅದೇ ಜಾಗಕ್ಕೆ ಬಂದು ನಿಲ್ಲುತ್ತಾನೆ. ಅಂದರೆ ಇಲ್ಲಿ ಆಟಗಾರನನ್ನು ಅಲರ್ಟ್ ಮಾಡುವ ಐಡಿಯಾ ಧೋನಿಯದ್ದಾಗಿರುತ್ತದೆ,' ಎಂದು ಚೌಧರಿ ವಿವರಿಸಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿ ಫೆಡರರ್ ದಾಖಲೆ, ನೂರು ಕ್ರೀಡಾಪಟುಗಳಲ್ಲಿ ಓರ್ವ ಕ್ರಿಕೆಟರ್‌ಗೆ ಮಾತ್ರ ಸ್ಥಾನಫೋರ್ಬ್ಸ್ ಪಟ್ಟಿಯಲ್ಲಿ ಫೆಡರರ್ ದಾಖಲೆ, ನೂರು ಕ್ರೀಡಾಪಟುಗಳಲ್ಲಿ ಓರ್ವ ಕ್ರಿಕೆಟರ್‌ಗೆ ಮಾತ್ರ ಸ್ಥಾನ

'ನಾನೊಂದು ವೇಳೆ ನಿರ್ಧಾರ ತಾಳುವವನಾಗಿದ್ದರೆ ನಾನು ಖಂಡಿತಾ ಧೋನಿಯನ್ನು ತಂಡದಲ್ಲಿ ಹೊಂದಿರುತ್ತಿದ್ದೆ,' ಎಂದು ಅನಿರುದ್ಧ್ ಹೇಳಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಡೆಯಬೇಕು ಏಕೆಂದರೆ ಅದು ಆದಾಯದ ದೃಷ್ಟಿಕೋನ ಮತ್ತು ದೇಸೀ ಕ್ರಿಕೆಟಿಗರಿಗೆ ಅವಕಾಶ ಎರಡೂ ವಿಚಾರದಲ್ಲೂ ತುಂಬಾ ಪ್ರಮುಖವಾದುದು ಎಂದೂ ಚೌಧರಿ ಅಭಿಪ್ರಾಯಿಸಿದ್ದಾರೆ.

Story first published: Saturday, May 30, 2020, 16:22 [IST]
Other articles published on May 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X