ನಾಯಕನಾಗಿ ಧೋನಿಯ ಯಶಸ್ಸಿಗೆ "ಆತನೇ" ಕಾರಣ ಎಂದ ಗೌತಮ್ ಗಂಭೀರ್

ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಅದೃಷ್ಟದ ನಾಯಕ ಎಂದು ಕರೆದಿದ್ದಾರೆ. ನಾಯಕನಾಗಿ ಎಂಎಸ್ ಧೋನಿ ಮೂರೂ ಮಾದರಿಯಲ್ಲೂ ಅದ್ಭುತ ತಂಡವನ್ನು ಹೊಂದಿದ್ದರು. ಅದರಿಂದಾಗಿ ಧೋನಿ ಎರಡು ಐಸಿಸಿ ವಿಶ್ವಕಪ್, ಒಂದು ಐಸಿಸಿ ಚಾಂಫಿಯನ್ಸ್ ಟ್ರೋಫಿ ಗೆಲ್ಲಲು ಕಾರಣವಾಯಿತು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಗೌತಮ್ ಗಂಭೀರ್ ಮಾಜಿ ನಾಯಕ ಧೋನಿಯ ಯಶಸ್ಸಿಗೆ ಒಬ್ಬ ವ್ಯಕ್ತಿಯ ಪರಿಶ್ರಮವೇ ಕಾರಣ ಎಂದು ಹೇಳಿದ್ದಾರೆ. ಟೀಮ್ ಇಂಡಿಯಾವನ್ನು ಕಟ್ಟಲು ಆತ ಹಾಕಿದ ಪರಿಶ್ರಮದಿಂದಾಗಿ ಉತ್ತಮ ಆಟಗಾರರು ತಂಡಕ್ಕೆ ದೊರೆತರು. ಅದರ ಯಶಸ್ಸು ಎಂಎಸ್ ಧೋನಿಗೆ ದೊರೆಯಿತು. ಅವರು ಎರಡು ವಿಶ್ವಕಪ್ ಹಾಗೂ ಒಂದು ಚಾಂಫಿಯನ್ಸ್ ಟ್ರೋಫಿ ಗೆಲ್ಲಲು ಅದೇ ಕಾರಣವಾಯಿತು ಎಂದು ಗಂಭಿರ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ದಾಖಲೆಯ 5 ಬ್ಯಾಟ್ಸ್‌ಮನ್‌ಗಳು

ಹಾಗಾದರೆ ಧೋನಿ ಯಶಸ್ಸಿಗೆ ಗಂಭಿರ್ ಹೇಳಿದ ಆ ಆಟಗಾರ ಯಾರು ಎಂದು ಮುಂದೆ ಓದಿ..

ತಂಡವನ್ನು ಕಟ್ಟಲು ಗಂಗೂಲಿ ಪರಿಶ್ರಮ

ತಂಡವನ್ನು ಕಟ್ಟಲು ಗಂಗೂಲಿ ಪರಿಶ್ರಮ

ಗೌತಮ್ ಗಂಭೀರ್ ಹೇಳಿದ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಅದು ಹಾಕಿ ಬಿಸಿಸಿಐ ಅಧ್ಯಕ್ಷ ಮಾಜಿ ಟೀಮ್ ನಾಯಕ ಸೌರವ್ ಗಂಗೂಲಿ. ಸೌರವ್ ಗಂಗೂಲಿ ತಂಡವನ್ನು ಕಟ್ಟಲು ಹಾಕಿದ ಕಠಿಣ ಪರಿಶ್ರಮದ ಫಲವನ್ನು ಧೋನಿ ಅನುಭವಿಸಿದರು ಎಂದು ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

"ಗಂಗೂಲಿ ಪರಿಶ್ರಮದ ಫಲ"

"2011ರ ವಿಶ್ವಕಪ್ ತಂಡವನ್ನು ಮುನ್ನಡೆಸುವುದು ಧೋನಿಗೆ ತುಂಬಾ ಸುಲಭವಾಗಿತ್ತು. ಯಾಕೆಂದರೆ ಸಚಿನ್, ಸೆಹ್ವಾಗ್, ತಾನು(ಗಂಭೀರ್), ಯುವರಾಜ್ ಸಿಂಗ್, ಯೂಸುಫ್ ಪಠಾಣ್, ವಿರಾಟ್ ಕೊಹ್ಲಿಯಂತಾ ಆಟಗಾರರು ತಂಡದಲ್ಲಿದ್ದರು. ಈ ಮೂಲಕ ಅತ್ಯುತ್ತಮ ತಂಡವನ್ನು ಅವರು ಹೊಂದಿದ್ದರು. ಇದಕ್ಕಾಗಿ ಸೌರವ್ ಗಂಗೂಲಿ ಕಠಿಣ ಪರಿಶ್ರಮವನ್ನು ಪಟ್ಟಿದ್ದರು. ಅದರ ಪರಿಣಾಮವಾಗಿ ಧೋನಿ ಹಲವು ಟ್ರೋಫಿಗಳನ್ನು ಗೆದ್ದುಕೊಂಡರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಟೆಸ್ಟ್ ಮಾದರಿಯಲ್ಲಿ ಯಶಸ್ಸಿಗೆ ಜಹೀರ್ ಕಾರಣ

ಟೆಸ್ಟ್ ಮಾದರಿಯಲ್ಲಿ ಯಶಸ್ಸಿಗೆ ಜಹೀರ್ ಕಾರಣ

ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಯಶಸ್ಸನ್ನು ಗಳಿಸಲು ಕಾರಣ ಟೀಮ್ ಇಂಡಿಯಾದ ವೇಗಿ ಜಹೀರ್ ಖಾನ್ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ಧೋನಿಗೆ ಸಿಕ್ಕ ಬಹುದೊಡ್ಡ ಅಸ್ತ್ರ ಜಹೀರ್ ಖಾನ್. ಅದರ ಶ್ರೇಯಸ್ಸು ಕೂಡ ಮಾಜಿ ನಾಯಕ ಸೌರವ್ ಗಂಗೂಲಿಗೆ ಸೇರಬೇಕು ಎಂದು ಗಂಭೀರ್ ಹೇಳಿದ್ದಾರೆ.

ಒಂದೇ ರೂಮ್‌ನಲ್ಲಿನ ನೆನಪು ಹಂಚಿಕೊಂಡ ಗಂಭೀರ್

ಒಂದೇ ರೂಮ್‌ನಲ್ಲಿನ ನೆನಪು ಹಂಚಿಕೊಂಡ ಗಂಭೀರ್

ಇನ್ನು ಗೌತಮ್ ಗಂಭೀರ್ ಧೋನಿಯ ಜೊತೆಗೆ ಒಂದೇ ರೂಮ್‌ನಲ್ಲಿ ಕಳೆದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಾವು ಒಂದೇ ರೂಮ್‌ನಲ್ಲಿ ಕಳೆದಿದ್ದೆವು. ಆ ಸಂದರ್ಭದಲ್ಲಿ ನಾವು ಹೆಚ್ಚಾಗಿ ಕೂದಲ ಬಗ್ಗೆ ಮಾತನಾಡುತ್ತಿದ್ದೆವು. ಯಾಕೆಂದರೆ ದೊನಿ ಉದ್ದನೆಯ ಕೂದಲನ್ನು ಹೊಂದಿದ್ದರು ಎಂದು ಗಂಭೀರ್ ಹೇಳಿದ್ದಾರೆ. ಜೊತೆಗೆ ಪುಟ್ಟ ಕೋಣೆಯನ್ನು ಹೊಂದಿದ್ದ ಕಾರಣ ರೂಮ್ನಿಂದ ಬೆಡ್‌ಗಳನ್ನು ಹೊರಗೆ ಹಾಕಿ ನಾವಿಬ್ಬರೂ ನೆಲದಲ್ಲೇ ಮಲಗಿಕೊಂಡಿದ್ದೆವು ಎಂಬೂದನ್ನೂ ಗಂಭೀರ್ ಸ್ಮರಿಸಿದ್ದಾರೆ.

ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಪಾತ್ರ

ವಿಶ್ವಕಪ್ ಗೆಲುವಿನಲ್ಲಿ ಗಂಭೀರ್ ಪಾತ್ರ

ಟೀಮ್ ಇಂಡಿಯಾದ ಸ್ಟೈಲಿಶ್ ಎಡಗೈ ಆಟಗಾರ ಗೌತಮ್ ಗಂಭೀರ್ ಭಾರತ ವಿಶ್ವಕಪ್ ಗಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಂಭೀರ್ 97 ರನ್ ಗಳಿಸಿ ಶತಕ ವಂಚಿತರಾಗಿದ್ದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಧೋನಿ ಅಜೇಯ 91 ರನ್ ಗಳಿಸಿ 6 ವಿಕೆಟ್ ಗಳಿಂದ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, July 12, 2020, 11:43 [IST]
Other articles published on Jul 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X