ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: 8 ತಿಂಗಳ ಬಳಿಕ ಮತ್ತೆ ಅಭ್ಯಾಸಕ್ಕಿಳಿಯಲಿದ್ದಾರೆ ಎಂಎಸ್ ಧೋನಿ

IPL 2020 : MS Dhoni will be seen in nets after 8 months
 MS Dhoni To Start Training In Chennai From March 1

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವಕಪ್ ಬಳಿಕ ಸಂಪೂರ್ಣವಾಗಿ ತಂಡದಿಂದ ದೂರವಾಗಿದ್ದರು. ಕ್ರಿಕೆಟ್‌ನ ಎಲ್ಲಾ ಚಟುವಟಿಕೆಯಿಂದ ಸಂಪೂರ್ಣವಾಗಿ ದೂರವಾದಂತಿದ್ದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

ಆದರೆ ಐಪಿಎಲ್ ಹಿನ್ನೆಲೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಕಣಕ್ಕಿಳಿಯಲಿದ್ದಾರೆ. ಐಪಿಎಲ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಚೆನ್ನೈಯನ್ನು ಮುನ್ನಡೆಸುವುದು ಪಕ್ಕಾ. ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಮತ್ತೆ ಕಣಕ್ಕಿಳಿಯಲು ಅಭ್ಯಾಸವನ್ನು ನಡೆಸಲಿದ್ದಾರೆ.

ಈ ಬಾರಿಯ ಐಪಿಎಲ್ ಆವೃತ್ತಿ ಮಾರ್ಚ್ 29ರಂದು ಆರಂಭವಾಗಲಿದೆ. ಆದರೆ ಮಹೇಂದ್ರ ಸಿಂಗ್ ಧೋನಿ ಅದಕ್ಕೂ ಮುನ್ನವೇ ಚೆನ್ನೈಗೆ ತೆರಳಲಿದ್ದಾರೆ. ಮಾರ್ಚ್ 1ರಂದೇ ಮಹೇಂದ್ರ ಸಿಂಗ್ ಧೋನಿ ಚೆನ್ನೈಗೆ ತೆರಳಲಿದ್ದು ಅಭ್ಯಾಸವನ್ನು ಆರಂಭಿಸಲಿದ್ದಾರೆ ಎನ್ನವ ಮಾಹಿತಿ ದೊರೆತಿದೆ.

 ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ? ಚುಟುಕು ಕದನದ ವೇಳಾಪಟ್ಟಿ ಬಿಡುಗಡೆ : ಆರ್‌ಸಿಬಿ ಪಂದ್ಯ ಯಾವಾಗ?

ಕಳೆದ ಆರು ತಿಂಗಳಿನಲ್ಲಿ ಮಹೇಂದ್ರ ಸಿಂಗ್ ಧೋನಿ ನೆಟ್ಸ್‌ನಲ್ಲೂ ತುಂಬಾ ಕಡಿಮೆ ಸಮಯವನ್ನು ಕಳೆದಿದ್ದಾರೆ. ಕಳೆದ ತಿಂಗಳು ಜಾರ್ಖಾಂಡ್ ರಣಜಿ ತಂಡದ ಜೊತೆಗೆ ಟ್ರೈನಿಂಗ್ ಸೆಶನ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿದ್ದರು. ಆದರೆ ಇದೀಗ ಧೋನಿ ತಮ್ಮ ಐಪಿಎಲ್ ತಂಡದ ಇತರ ಸದಸ್ಯರಾದ ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಜೊತೆಗೆ ಅಭ್ಯಾಸವನ್ನು ನಡೆಸಲಿದ್ದಾರೆ.

ಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿಐಪಿಎಲ್ 2020: ಹರಾಜಾದ, ಹರಾಜಾಗದ ಕ್ರಿಕೆಟರ್ಸ್ ಸಂಪೂರ್ಣ ಪಟ್ಟಿ

ಮಹೇಂದ್ರ ಸಿಂಗ್ ಧೋನಿ ಜೊತೆಗೆ ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸದೆ ಹಲವು ಸಮಯಗಳೇ ಕಳೆದಿದೆ. ಧೋನಿ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಆದರೆ ರೈನಾ ಮತ್ತು ರಾಯುಡು ಅದಕ್ಕೂ ಮುನ್ನವೇ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳು ವಿಫಲರಾಗಿದ್ದರು. ಹೀಗಾಗಿ ಈ ಇಬ್ಬರೂ ಆಟಗಾರರಿಗೂ ಐಪಿಎಲ್ ಉತ್ತಮ ಅವಕಾಶವೊಂದನ್ನು ನೀಡುತ್ತಿದೆ. ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಆಯ್ಕೆಗಾರರ ಗಮನ ಸೆಳೆಯಲು ಈ ಇಬ್ಬರೂ ಆಟಗಾರರು ಪ್ರಯತ್ನವನ್ನು ನಡೆಸಲಿದ್ದಾರೆ.

Story first published: Sunday, February 16, 2020, 16:58 [IST]
Other articles published on Feb 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X