ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐನಲ್ಲಿ 50ರನ್ ಗಳಿಸುವ ಕನಸು ಕಂಡಿರಲಿಲ್ಲ : ಭುವಿ

By Mahesh

ಪಲ್ಲೆಕೆಲೆ, ಆಗಸ್ಟ್ 25: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿ, ಭಾರತವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದ ನಂತರ ವೇಗಿ ಭುವನೇಶ್ವರ್ ಕುಮಾರ್ ಅವರು ತಮ್ಮ ಸಾಧನೆ ಬಗ್ಗೆ ಮಾತನಾಡಿದ್ದಾರೆ.

ದ್ವಿತೀಯ ಏಕದಿನ: ಭಾರತಕ್ಕೆ ಜಯ ತಂದುಕೊಟ್ಟ ಭುವಿ, ಧೋನಿ

'ನಾನು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ 50 ರನ್ ಗಳಿಸುವ ಕನಸು ಎಂದೂ ಕಂಡಿರಲಿಲ್ಲ. ಅಲ್ಲದೇ, ಶ್ರೀಲಂಕಾ ವಿರುದ್ಧದ 2ನೇ ಪಂದ್ಯದಲ್ಲಿ ಕ್ರೀಸಿಗೆ ಹೋದಾಗ ಪಂದ್ಯ ಗೆಲ್ಲುವ ಬಗ್ಗೆ ಕೂಡಾ ಯೋಚಿಸಿರಲಿಲ್ಲ' ಎಂದು ವೇಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಆದರೆ, ಇದೆಲ್ಲವೂ ಸಾಧ್ಯವಾಗಿದ್ದು, ಮಾಜಿ ನಾಯಕ ಎಂಎಸ್ ಧೋನಿ ಅವರ ಕಿವಿಮಾತಿನಿಂದ ಎಂಬುದನ್ನು ಹೇಳಲು ಭುವನೇಶ್ವರ್ ಕುಮಾರ್ ಮರೆಯಲಿಲ್ಲ.

ಧೋನಿ, ಧವನ್, ರೋಹಿತ್ ಸಾಧನೆಗೆ ವೇದಿಕೆಯಾದ 2ನೇ ಏಕದಿನಧೋನಿ, ಧವನ್, ರೋಹಿತ್ ಸಾಧನೆಗೆ ವೇದಿಕೆಯಾದ 2ನೇ ಏಕದಿನ

ಭುವನೇಶ್ವರ್ ಕುಮಾರ್ ಅವರು ಅಜೇಯ 53 ರನ್ ಗಳಿಸಿದ್ದಲ್ಲದೆ, ಧೋನಿ ಜತೆ 100ರನ್ ಜೊತೆಯಾಟ ಸಾಧಿಸಿದರು. 8ನೇ ವಿಕೆಟ್ ಗೆ ಮುರಿಯದ ಜೊತೆಯಾಟದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

MS Dhoni told me to bat like I do in Test cricket: Bhuvneshwar Kumar

'ನಾನು ಬ್ಯಾಟ್ ಮಾಡಲು ಹೋದಾಗ, ಎಂಎಸ್ ಅವರು ನನಗೆ ನನ್ನ ನೈಜ ಆಡುವಂತೆ ಸೂಚಿಸಿದರು. ಟೆಸ್ಟ್ ಕ್ರಿಕೆಟ್ ನಲ್ಲಿ ತಾವು ಆಡುವ ರೀತಿ ನೆನಸಿಕೊಂಡು, ಒತ್ತಡವಿಲ್ಲದೆ ಬ್ಯಾಟ್ ಬೀಸುವಂತೆ ಹೇಳಿದರು. ನಮ್ಮ ಬಳಿ ಸಾಕಷ್ಟು ಓವರ್ ಗಳಿತ್ತು. ವಿಕೆಟ್ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು' ಎಂದು ಭುವನೇಶ್ವರ್ ಕುಮಾರ್ ಅವರು ಹೇಳಿದ್ದಾರೆ.

ಕುಮಾರ ಸಂಗಕ್ಕಾರ ದಾಖಲೆ ಸಮಕ್ಕೆ ನಿಂತ ಧೋನಿಕುಮಾರ ಸಂಗಕ್ಕಾರ ದಾಖಲೆ ಸಮಕ್ಕೆ ನಿಂತ ಧೋನಿ

ಭುವನೇಶ್ವಕುಮಾರ್ ಅವರು ಚೊಚ್ಚಲ ಅರ್ಧಶತಕ ಸಿಡಿಸಿದಂತೆ, ಶ್ರೀಲಂಕಾದ ಅಖಿಲ ಧನಂಜಯ ಅವರು ಚೊಚ್ಚಲ ಬಾರಿಗೆ 54/6 ಗಳಿಸಿದರು.

9ನೇ ಕ್ರಮಾಂಕದಲ್ಲಿ ಆಡಲು ಬಂದು ಅರ್ಧಶತಕ ಸಿಡಿಸಿದ್ದು ಅಪರೂಪ. 2009ರಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರವೀಣ್ ಕುಮಾರ್ ಅವರು ಸಾಧನೆ ಮಾಡಿದ್ದರು.

ನನ್ನ ಬ್ಯಾಟಿಂಗ್ ನೆರವಿನಿಂದ ತಂಡಕ್ಕೆ ಗೆಲುವು ಸಿಕ್ಕಿದೆ ಎನ್ನುವುದಕ್ಕಿಂತ ಧೋನಿ ಜತೆ ಆಡಿದ್ದು ವಿಶೇಷವಾಗಿತ್ತು. ಕೋಚ್ ಸಂಜಯ್ ಬಂಗಾರ್ ಅವರ ನೆರವನ್ನು ಇಲ್ಲಿ ಮರೆವಂತಿಲ್ಲ ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.(ಪಿಟಿಐ)

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X