ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ

‘MS Dhoni will be there at World T20’: Dwayne Bravo

ನವದೆಹಲಿ, ಡಿಸೆಂಬರ್ 14: ನಿವೃತ್ತಿ ನಿರ್ಧಾರವನ್ನು ಬದಲಿಸಿದ್ದೇನೆ, ಮುಂಬರಲಿರುವ ವಿಶ್ವ ಟಿ20ಯಲ್ಲಿ ವೆಸ್ಟ್ ಇಂಡೀಸ್ ಪರ ಆಡಲಿದ್ದೇನೆ ಎಂದು ಘೋಷಿಸಿರುವ ಆಲ್ ರೌಂಡರ್ ಡ್ವೇನ್ ಬ್ರಾವೊ, ಟಿ20 ವಿಶ್ವಕಪ್‌ನಲ್ಲಿ ಭಾರತದ ಮಾಜಿ ನಾಯಕ ಎಂಎಸ್ ಧೋನಿಯೂ ಆಡುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.

ಟೀಮ್ ಇಂಡಿಯಾಕ್ಕೆ ಶೀಘ್ರ ಮರಳಲಿದ್ದಾರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!ಟೀಮ್ ಇಂಡಿಯಾಕ್ಕೆ ಶೀಘ್ರ ಮರಳಲಿದ್ದಾರೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲಿ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್‌ (ಸಿಎಸ್‌ಕೆ) ಪರ ಆಡುವ ಬ್ರಾವೊ, ಬಾಹ್ಯ ಅಂಶಗಳು ತನ್ನ ಆಟದ ಮೇಲೆ ಪ್ರಭಾವ ಬೀರಲು ಧೋನಿ ಯಾವತ್ತಿಗೂ ಅನುವು ಮಾಡಿಕೊಡುವುದಿಲ್ಲ. ಅವರು ಸದಾ ವರ್ತಮಾನದಲ್ಲಿರುವ ಆಟಗಾರ ಎಂದಿದ್ದಾರೆ.

ಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ, ದಿನಾಂಕ, ಸಮಯಐಪಿಎಲ್ ಹರಾಜು: ಅಂತಿಮ ಪಟ್ಟಿ, ಆಟಗಾರರ ಬೆಲೆ, ದಿನಾಂಕ, ಸಮಯ

ಧೋನಿ ಬಗ್ಗೆ ಮಾತನಾಡುತ್ತ ಡ್ವೇನ್, 'ಧೋನಿ ಎಂದಿಗೂ ನಿವೃತ್ತಿಯಾಗಲಾರರು. ನನಗನ್ನಿಸುವಂತೆ ಅವರು 2020ರ ವಿಶ್ವ ಟಿ20 ವೇಳೆ ಆಡಲಿದ್ದಾರೆ. ಧೋನಿ ಯಾವತ್ತಿಗೂ ಬಾಹ್ಯ ವಿಚಾರಗಳು ಆಟದಲ್ಲಿ ನುಸುಳಲು ಅನುವು ಮಾಡಿಕೊಡಲಾರರು. ನಮ್ಮ ಸಾಮರ್ಥ್ಯದ ಬಗ್ಗೆ ಅವರಿಗೆ ಸದಾ ನಂಬಿಕೆಯಿರುವುದಾಗಿ ಅವರು ಹೇಳುತ್ತಿದ್ದರು,' ಎಂದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನಕ್ಕೆ ಕಣಕ್ಕಿಳಿಯಲಿರುವ ಭಾರತ ಪ್ಲೇಯಿಂಗ್ XIವೆಸ್ಟ್ ಇಂಡೀಸ್ ವಿರುದ್ಧದ ಏಕದಿನಕ್ಕೆ ಕಣಕ್ಕಿಳಿಯಲಿರುವ ಭಾರತ ಪ್ಲೇಯಿಂಗ್ XI

2019ರ ಐಸಿಸಿ ಏಕದಿನ ವಿಶ್ವಕಪ್ ಮುಕ್ತಾಯದ ಬಳಿಕ ಧೋನಿ ಯಾವುದೇ ಕ್ರಿಕೆಟ್‌ ಪಂದ್ಯಗಳನ್ನಾಡಿಲ್ಲ. ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಸೋತಿದ್ದ ಪಂದ್ಯವೇ ಧೋನಿ ಕಡೆಯಸಾರಿ ಆಡಿದ್ದ ಅಂತಾರಾಷ್ಟ್ರೀಯ ಪಂದ್ಯ. ಹೀಗಾಗಿ ಧೋನಿಯ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಧೋನಿ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಬ್ರಾವೋ ಭರವಸೆ ವ್ಯಕ್ತಪಡಿಸಿದ್ದಾರೆ.

ಕೆಸ್ರಿಕ್‌ ಎಸೆತಕ್ಕೆ ಸಿಕ್ಸ್ ಚಚ್ಚಿ ಅಣಕಿಸಿದ ವಿರಾಟ್ ಕೊಹ್ಲಿ: ವೈರಲ್ ವೀಡಿಯೋಕೆಸ್ರಿಕ್‌ ಎಸೆತಕ್ಕೆ ಸಿಕ್ಸ್ ಚಚ್ಚಿ ಅಣಕಿಸಿದ ವಿರಾಟ್ ಕೊಹ್ಲಿ: ವೈರಲ್ ವೀಡಿಯೋ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿವೆ. ಅಕ್ಟೋಬರ್ 18ರಂದು ಆರಂಭವಾಗುವ ಟೂರ್ನಿಯ ಮೊದಲ ಪಂದ್ಯ ಶ್ರೀಲಂಕಾ ಮತ್ತು ಐರ್ಲೆಂಡ್ ನಡುವೆ ನಡೆಯಲಿದೆ. ಭಾರತ ತಂಡ ಅಕ್ಟೋಬರ್ 24ರಂದು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರುಗೊಳ್ಳಲಿದೆ.

Story first published: Saturday, December 14, 2019, 18:21 [IST]
Other articles published on Dec 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X