ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ತಂಡದಲ್ಲಿ ಎಂ.ಎಸ್ ಧೋನಿ ಇರಲ್ಲ: ಸುನಿಲ್ ಗವಾಸ್ಕರ್

MS Dhoni Will Not Be A Part Of India Squad For Icc T20 World Cup: Sunil Gavaskar

ಧೋನಿ ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಭಾರತ ತಂಡದಲ್ಲಿ ಕಾಣಿಸಿಕೊಳ್ಳುತ್ತಾ ಎನ್ನುವುದು ಇನ್ನೂ ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಕಳೆದ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಆಘಾತಕಾರಿಯಾಗಿ ಟೀಮ್ ಇಂಡಿಯಾ ಟೂರ್ನಿಯಿಂದ ಹೊರ ಬಿದ್ದ ಬಳಿಕ ಧೋನಿ ತಂಡದಿಂದ ದೂರವಾಗಿದ್ದಾರೆ.

ಐಪಿಎಲ್‌ನ ಬಳಿಕ ಟೀಮ್ ಇಂಡಿಯಾ ನಾಯಕ ಭಾರತ ತಂಡಕ್ಕೆ ವಾಪಸ್ಸಾಗಲಿದ್ದಾರೆ ಎಂಬ ಮಾತುಗಳೂ ಹರಿದಾಡುತ್ತಿತ್ತು. ಆದರೆ ಸದ್ಯ ಐಪಿಎಲ್ ಭವಿಷ್ಯವೂ ತೂಗುಯ್ಯಾಲೆಯಲ್ಲಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಗೊಂದಲಗಳು ಉಂಟಾಗಿದೆ.

ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರರು ಧೋನಿ ಪುನರಾಗಮನದ ಬಗ್ಗೆ ಹೇಳಿಕೆಯನ್ನು ನೀಡುತ್ತಿದ್ದಾರೆ. ಅದರಲ್ಲೂ ಸುನಿಲ್ ಗವಾಸ್ಕರ್ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಧೋನಿ ತಂಡಕ್ಕೆ ಮರಳಲ್ಲ

ಧೋನಿ ತಂಡಕ್ಕೆ ಮರಳಲ್ಲ

ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾಗೆ ಧೋನಿ ಮರಳಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಳ್ಳುವುದಿಲ್ಲ ಎಂದು ಸುನಿಲ್ ಗವಾಸ್ಕರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಧೋನಿ ಮರಳುವುದನ್ನು ನೋಡಲು ನನಗಿಷ್ಟ

ಧೋನಿ ಮರಳುವುದನ್ನು ನೋಡಲು ನನಗಿಷ್ಟ

ಇದೇ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ವಿಶ್ವಕಪ್‌ ತಂಡದಲ್ಲಿ ಧೋನಿ ಇರುವುದನ್ನು ನಾನೂ ನೋಡಲು ಬಯಸುತ್ತೇನೆ. ನನಗೂ ಆತ ತಂಡದಲ್ಲಿರುವುದು ಇಷ್ಟ ಆದರೆ ಅದು ಸಾಧ್ಯವಿಲ್ಲವೆಂದೆನಿಸುತ್ತದೆ ಎಂದು ಹೇಳಿಕೆಯನ್ನು ಸುನಿಲ್ ಗವಾಸ್ಕರ್ ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಧೋನಿ ಕಮ್‌ಬ್ಯಾಕ್‌ಬಗ್ಗೆ ಸೆಹ್ವಾಗ್ ಪ್ರತಿಕ್ರಿಯೆ

ಧೋನಿ ಕಮ್‌ಬ್ಯಾಕ್‌ಬಗ್ಗೆ ಸೆಹ್ವಾಗ್ ಪ್ರತಿಕ್ರಿಯೆ

ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಧೋನಿ ಕಮ್‌ಬ್ಯಾಕ್ ಬಗ್ಗೆ ಹೇಳಿಕೆಯನ್ನು ನೀಡಿದ್ದರು. ಧೋನಿ ಕಮ್‌ಬ್ಯಾಕ್ ಮಾಡೋದಾದರೆ ಟೀಮ್ ಇಮಡಿಯಾದಲಲ್ಲಿ ಅವಕಾಶವೇ ಇಲ್ಲ ಎಂಬ ಮಾತನ್ನು ವೀರೇಂದ್ರ ಸೆಹ್ವಾಗ್ ಹೇಳಿದ್ದರು.

ಆಕಾಶ್ ಚೋಪ್ರಾ ಹೇಳಿಕೆ ಕುತೂಹಲ

ಆಕಾಶ್ ಚೋಪ್ರಾ ಹೇಳಿಕೆ ಕುತೂಹಲ

ಇದಕ್ಕೂ ಮುನ್ನ ಧೋನಿ ಕಮ್‌ಬ್ಯಾಕ್ ಬಗ್ಗೆ ಆಕಾಶ ಚೋಪ್ರಾ ಹೇಳಿಕೆಯನ್ನು ನೀಡಿದ್ದರು. ಧೋನಿ ಟೀಮ್ ಇಂಡಿಯಾಗೆ ಮರಳಲು ಬಯಸಿದರೆ ಟೀಮ್ ಇಂಡಿಯಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ. ಐಪಿಎಲ್ ಮುಂದೂಡಿರುವುದು ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದಿದ್ದರು.

Story first published: Friday, March 20, 2020, 18:17 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X