ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲ್ಲ: ಹರ್ಭಜನ್ ಸಿಂಗ್

Ms Dhoni Will Not Play For India Again: Harbhajan Singh

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯ ಇನ್ನೂ ಬಹುದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ. ಈ ಬಗ್ಗೆ ಐಪಿಎಲ್‌ನ್ಲಲಿ ಚೆನ್ನೈ ಸೂಪರ್ ಕಿಂಗ್‌ನಲ್ಲಿ ಧೋನಿ ಸಹ ಆಟಗಾರನಾಗಿರುವ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಧೋನಿ ಟೀಮ್ ಇಂಡಿಯಾವನ್ನು ಭವಿಷ್ಯದಲ್ಲಿ ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಜೊತೆಗೆ ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಸಂವಾದದಲ್ಲಿ ಹರ್ಭಜನ್ ಸಿಂಗ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧೋನಿ ಟೀಮ್ ಇಂಡಿಯಾಗೆ ಮರಳುವ ಬಗ್ಗೆ ಇಬ್ಬರೂ ಆಟಗಾರರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾಎಲ್ಲಾ ಕ್ರಿಕೆಟ್ ಪಂದ್ಯಗಳೂ ಫಿಕ್ಸ್ಡ್: ಆರೋಪಿತ ಬುಕ್ಕಿ ಸಂಜೀವ್ ಚಾವ್ಲಾ

ಚೆನ್ನೈ ತಂಡದ ಅಭ್ಯಾಸ ಶಿಬಿರದಲ್ಲಿ ನಾನಿದ್ದೆ. ಆಗ ಜನರು ನನ್ನ ಬಳಿ ಧೋನಿ ಟೀಮ್ ಇಂಡಿಯಾಗೆ ಮತ್ತೆ ಆಡುತ್ತಾರ? ಮತ್ತೆ ಅವರು ಆಯ್ಕೆಯಾಗುತ್ತಾರ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ನಾನು ಆಗ ಅದಯಾವುದೂ ನನಗೆ ಗೊತ್ತಿಲ್ಲ. ಅದೆಲ್ಲೂ ಆತನಿಗೆ ಬಿಟ್ಟ ನಿರ್ಧಾರ. ಆಡಬೇಕೋ ಬೇಡ್ವೋ ಎಂಬುದನ್ನು ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದ್ದಾಗಿ ಹರ್ಭಜನ್ ರೋಹಿತ್‌ಗೆ ತಿಳಿಸಿದರು.

ಐಪಿಎಲ್‌ನಲ್ಲಿ ಧೋನಿ 100% ಪಾಲ್ಗೊಳ್ಳುತ್ತಾರೆ. ಆದರೆ ಟೀಮ್ ಇಂಡಿಯಾದಲ್ಲಿ ಅವರು ಆಡುವುದನ್ನು ಬಯಸುತ್ತಿದ್ದಾರೋ ಇಲ್ಲವೋ ಎಂಬುದನ್ನು ನಾವು ಕಂಡುಕೊಳ್ಳಬೇಕು. ನನಗೆ ತಿಳಿದಿರುವಂತೆ ಅವರು ಆಡಲು ಬಯಸುತ್ತಿಲ್ಲ. ಭಾರತಕ್ಕೆ ಆಡುವುದನ್ನು ಅವರು ಮುಗಿಸಿದ್ದಾರೆ. ನನಗೆ ತಿಳಿದಿರುವಂತೆ ಧೋನಿ ಮತ್ತೆ ನೀಲಿ ಜರ್ಸಿಯಲ್ಲಿ ಅಂಗಳಕ್ಕೆ ಕಣಕ್ಕಿಳಿವುದಿಲ್ಲ ಎಂದು ಹರ್ಭಜನ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!ಕ್ರಿಕೆಟ್‌ ಪ್ರಿಯರನ್ನೇ ಅಚ್ಚರಿಗೊಳಿಸುವ ಬಲು ಅಪರೂಪದ 5 ದಾಖಲೆಗಳಿವು!

ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಈಗಿನ ಟೀಮ್ ಇಂಡಿಯಾ ಆಟಗಾರರಿಗೂ ಧೋನಿ ಭವಿಷ್ಯದ ನಿರ್ಧಾರದ ಬಗ್ಗೆ ಯಾವುದೇ ಸುಳಿವು ಇಲ್ಲ. ಕಳೆದ ವಿಶ್ವಕಪ್ ಕೊನೆ ಅಲ್ಲಿನ ಬಳಿಕ ಯಾವುದೇ ಸುದ್ದಿಯೂ ನಾವೂ ಕೂಡ ಕೇಳಿಪಟ್ಟಿಲ್ಲ ಎಂದು ಹೇಳಿದ್ದಾರೆ.

Story first published: Monday, June 1, 2020, 17:13 [IST]
Other articles published on Jun 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X