ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2 ನಿರ್ಧಾರ ಮಾಡಿದ್ದರೆ ಧೋನಿ ರೋಮಾಂಚನಕಾರಿ ಕ್ರಿಕೆಟಿಗನಾಗಿರುತ್ತಿದ್ದರು: ಗಂಭೀರ್

Ms Dhoni Would Have Been The Most Exciting Cricketer: Gautam Gambhir

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಅದ್ಭುತ ಫಿನಿಷಿಂಗ್ ಮತ್ತು ಚಾಣಾಕ್ಷ ನಾಯಕತ್ವದ ಕಾರಣದಿಂದಾಗಿ ವಿಶ್ವ ಕ್ರಿಕೆಟ್‌ನಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಆದರೆ ಟೀಮ್ ಇಂಡಿಯಾ ದ ಮಾಜಿ ಆಟಗಾರ ಗೌತಮ್ ಗಂಭೀರ್ ಧೋನಿ ಬಗ್ಗೆ ವಿಭಿನ್ನವಾಗಿ ವಿಮರ್ಶಿಸಿದ್ದಾರೆ.

ಧೋನಿ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಗೌತಮ್ ಗಂಭೀರ್ ಈ ಹೇಳಿಕೆಯನ್ನು ನೀಡಿದ್ದಾರೆ. ಧೋನಿಯ ಆಟದ ಕ್ರಮಾಂಕದಲ್ಲಿ ಬೇರೆ ನಿಲುವನ್ನು ತೆಗೆದುಕೊಂಡಿದ್ದರೆ ಧೋನಿ ಇನ್ನಷ್ಟು ದೊಡ್ಡ ಸಾಧನೆಯನ್ನು ಮಾಡಬಹುದಾಗಿತ್ತು. ನಾಯಕನಾದ ಬಳಿಕ ಧೋನಿ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ಗಂಭೀರ್ ಹೇಳಿದ್ದಾರೆ.

ಆ ಕೆಟ್ಟ ಘಟನೆ ನನ್ನನ್ನು ಸಂಪೂರ್ಣ ಬದಲಾಯಿಸಿಬಿಟ್ಟಿತ್ತು: ಕೆಎಲ್ ರಾಹುಲ್ಆ ಕೆಟ್ಟ ಘಟನೆ ನನ್ನನ್ನು ಸಂಪೂರ್ಣ ಬದಲಾಯಿಸಿಬಿಟ್ಟಿತ್ತು: ಕೆಎಲ್ ರಾಹುಲ್

ಹಾಗಾದರೆ ಎಂಎಸ್ ಧೋನಿಯ ಬಗ್ಗೆ ಗೌತಮ್ ಗಂಭೀರ್ ಹೇಳಿದ ವಿಚಾರಗಳು ಯಾವುದು? ಮುಂದೆ ಓದಿ..

ಮೂರನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್

ಮೂರನೇ ಕ್ರಮಾಂಕದಲ್ಲಿ ಧೋನಿ ಬ್ಯಾಟಿಂಗ್

ಎಂಎಸ್ ಧೋನಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದನ್ನು ಮುಂದುವರಿಸಬೇಕಿತ್ತು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ. ತಂಡದ ನಾಯಕನಾಗದೆಯೇ ಎಂಎಸ್ ಧೋನಿ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದರೆ ವಿಶ್ವ ಕ್ರಿಕೆಟ್‌ನ ರೋಮಾಂಚನಕಾರಿ ಆಟಗಾರನಾಗಿ ಉಳಿದುಕೊಳ್ಳುತ್ತಿದ್ದರು ಎಂದು ಗಂಭೀರ್ ಹೇಳಿದ್ದಾರೆ.

'ವಿಶ್ವ ಕ್ರಿಕೆಟ್‌ ಕಳೆದುಕೊಂಡಿದೆ'

'ವಿಶ್ವ ಕ್ರಿಕೆಟ್‌ ಕಳೆದುಕೊಂಡಿದೆ'

"ಬಹುಶಃ ವಿಶ್ವ ಕ್ರಿಕೆಟ್ ಒಂದನ್ನು ಕಳೆದುಕೊಂಡಿದೆ. ಅದು ಎಮ್‌ಎಸ್ ಧೋನಿ ಟೀಮ್ ಇಂಡಿಯಾದ ನಾಯಕನಾದರು ಮತ್ತು ಅವರು ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮುಂದುವರಿಸಿದ್ದರೆ ಸಂಪೂರ್ಣ ವಿಶೇಷ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದರು" ಎಂದು ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

ಸಾಕಷ್ಟು ದಾಖಲೆ ಮಾಡುತ್ತಿದ್ದರು

ಸಾಕಷ್ಟು ದಾಖಲೆ ಮಾಡುತ್ತಿದ್ದರು

3ನೇ ಕ್ರಮಾಂಕದಲ್ಲಿ ಧೋನಿ ಇನ್ನು ಸಾಕಷ್ಟು ರನ್‌ಗಳನ್ನು ಗಳಿಸುತ್ತಿದ್ದರು. ಅನೇಕ ದಾಖಲೆಗಳನ್ನು ಮುರಿಯುತ್ತಿದ್ದರು. ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ ಅದನ್ನು ಬದಿಗಿಟ್ಟರೂ ನಾಯಕತ್ವ ವಹಿಸಿಕೊಳ್ಳದೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರೆ ವಿಶ್ವ ಕ್ರಿಕೆಟ್‌ನ ರೋಮಾಂಚನಕಾರಿ ಬ್ಯಾಟ್ಸ್‌ಮನ್ ಎನಿಸಿಕೊಳ್ಳುತ್ತಿದ್ದರು ಎಂದು ಗೌತಮ್ ಗಂಭೀರ್ ವಿಮರ್ಶಿಸಿದ್ದಾರೆ.

3ನೇ ಕ್ರಮಾಂಕದಲ್ಲಿ ಧೋನಿ ಉತ್ತಮ ದಾಖಲೆ

3ನೇ ಕ್ರಮಾಂಕದಲ್ಲಿ ಧೋನಿ ಉತ್ತಮ ದಾಖಲೆ

ಧೋನಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು 3ನೇ ಕ್ರಮಾಂಕದ ಆಟಗಾರನಾಗಿಯೇ ಆರಂಭಿಸಿದರು. ತಮ್ಮ ಸರ್ವಶ್ರೇಷ್ಠ ಆಟವನ್ನು ಈ ಕ್ರಮಾಂಕದಲ್ಲಿಯೇ ನಿಡಿದ್ದಾರೆ. 2005ರಲ್ಲಿ ಎರಡು ಅವಿಸ್ಮರಣೀಯ ಶತಕ ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧ ಸಿಡಿಸಿದ್ದರು. ವೃತ್ತಿಜೀವನದಲ್ಲಿ ಧೋನಿ 16 ಬಾರಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದಾರೆ. ಬರೊಬ್ಬರಿ 82ರ ಸರಾಸರಿಯಲ್ಲಿ ಧೋನಿ 993 ರನ್‌ಗಳನ್ನು ಈ ಕ್ರಮಾಂಕದಲ್ಲಿ ಗಳಿಸಿದ್ದಾರೆ.

Story first published: Sunday, June 14, 2020, 15:51 [IST]
Other articles published on Jun 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X