ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೌಲಿಂಗ್‌ ಬದಲು ಬ್ಯಾಟಿಂಗ್‌ಗಾಗಿ ಟಿ20 ದಾಖಲೆ ಮೆರೆದ ಮುಜೀಬ್!

Mujeeb Ur Rahman sets T20 record on Big Bash League debut

ಬ್ರಿಸ್ಬೇನ್, ಡಿಸೆಂಬರ್ 20: ಅಫ್ಘಾನ್‌ಸ್ತಾನ್‌ನ 17ರ ಹರೆಯದ ಸ್ಪಿನ್ನರ್ ಮುಜೀಬ್ ಉರ್ ರಹ್ಮಾನ್‌ ಅವರು ಟಿ20 ಕ್ರಿಕೆಟ್ ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಬಿಗ್‌ ಬಾಷ್ ಟೂರ್ನಿಯಲ್ಲಿ ಮುಜೀಬ್ ಈ ವಿಶೇಷ ಸಾಧನೆ ಮೆರೆದಿದ್ದಾರೆ.

'ಧೋನಿ ರಣಜಿ ಆಡಿದರೆ ಯುವ ಪ್ರತಿಭಾವಂತ ಅವಕಾಶ ವಂಚಿತನಾಗುತ್ತಾನೆ!''ಧೋನಿ ರಣಜಿ ಆಡಿದರೆ ಯುವ ಪ್ರತಿಭಾವಂತ ಅವಕಾಶ ವಂಚಿತನಾಗುತ್ತಾನೆ!'

ಬುಧವಾರ (ಡಿಸೆಂಬರ್ 29) ಗಬ್ಬಾದಲ್ಲಿ ನಡೆದ ಬಿಗ್‌ ಬಾಷ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಬ್ರಿಸ್ಬೇನ್ ಪರ ಬ್ಯಾಟಿಂಗ್‌ಗೆ ಇಳಿದ ರಹ್ಮಾನ್ 22 ಎಸೆತಗಳಲ್ಲಿ 27 ರನ್ ಬಾರಿಸಿ ದಾಖಲೆಯನ್ನೇ ತನ್ನ ಹೆಸರಿಗೆ ಬರೆಸಿಕೊಂಡರು.

ಅಸಲಿಗೆ ಬೌಲರ್ ಆದರೂ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದ ಮುಜೀಬ್, ತಂಡದ ಹೋರಾಟಕ್ಕೆ ನಿಂತ ಪರಿ ಹೊಸ ದಾಖಲೆಗೆ ಕಾರಣವಾಯ್ತು. ಇದಕ್ಕೂ ಹಿಂದೆ ಅಲಂಕಾರ ಸಿಲ್ವಂ ಅವರು ಶ್ರೀಲಂಕಾದಲ್ಲಿ ನಡೆದಿದ್ದ ದೇಸಿ ಟಿ20 ಟೂರ್ನಿಯೊಂದರಲ್ಲಿ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು 22 ಎಸೆತಗಳಿಗೆ 26 ರನ್ ಬಾರಿಸಿ ದಾಖಲೆ ಸೃಷ್ಠಿಸಿದ್ದರು.

ವಂಚನೆ ಪ್ರಕರಣ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ವಾರಂಟ್ವಂಚನೆ ಪ್ರಕರಣ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ವಾರಂಟ್

ಆದರೆ ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ 5 ವಿಕೆಟ್ ಗೆಲುವನ್ನಾಚರಿಸಿತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬ್ರಿಸ್ಬೇನ್ ಹೀಟ್ 19.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 146 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ಅಡಿಲೇಡ್ ಸ್ಟ್ರೈಕರ್ಸ್ 19.1 ಓವರ್‌ನಲ್ಲಿ 5 ವಿಕೆಟ್ ಕಳೆದು 147 ರನ್ ಗಳಿಸಿತು.

Story first published: Thursday, December 20, 2018, 21:16 [IST]
Other articles published on Dec 20, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X