ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಾರುಖ್ ಖಾನ್ ಮೇಲಿನ ನಿಷೇಧ ರದ್ದು: ಎಂಸಿಎ

By Mahesh

ಮುಂಬೈ, ಆಗಸ್ಟ್ 02: ಇಲ್ಲಿನ ವಾಂಖೇಡೆ ಸ್ಟೇಡಿಯಂಗೆ ಕಾಲಿಡದಂತೆ ಕೋಲ್ಕತಾ ನೈಟ್ ರೈಡರ್ಸ್(ಕೆಕೆಆರ್) ತಂಡದ ಒಡೆಯ ಶಾರುಖ್‌ಖಾನ್ ಅವರ ವಿರುದ್ಧ ಹೇರಲಾಗಿರುವ ನಿಷೇಧವನ್ನು ರದ್ದುಪಡಿಸಲಾಗಿದೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಭಾನುವಾರ ಪ್ರಕಟಿಸಿದೆ.

2012ರಲ್ಲಿ ಶಾರುಖ್ ಖಾನ್ ವಿರುದ್ಧ ಐದು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು. 2017ಗೆ ನಿಷೇಧದ ಅವಧಿ ಮುಗಿಯುತ್ತಿತ್ತು. ಅದರೆ, ಅವಧಿಗೆ ಮುನ್ನವೇ ಶಾರುಖ್ ಪರ ಒಲವು ತೋರಿದ ಎಂಸಿಎ ಅವರ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ.[ಕಿಂಗ್ ಖಾನ್ ರಿಂದ ಮಕ್ಕಳಿಗೆ ಐಪಿಎಲ್ ಎಬಿಸಿಡಿ]

ಕಳೆದ ಮೂರು ವರ್ಷಗಳಲ್ಲಿ ಶಾರುಖ್ ಅವರು ನಡೆದುಕೊಂಡ ರೀತಿ ನಮಗೆ ತೃಪ್ತಿ ನೀಡಿದೆ. ಸ್ಟೇಡಿಯಂ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದರ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದಾರೆ ಎಂದು ಎಂಸಿಎ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ ನಂತರ ಇತ್ತೀಚೆಗೆ ದೆಹಲಿ ಕೋರ್ಟಿನಿಂದ ಖುಲಾಸೆಗೊಂಡಿರುವ ಅಂಕಿತ್ ಚೌಹಾಣ್ ಅವರ ಮೇಲಿನ ನಿಷೇಧವನ್ನು ತೆರವುಗೊಳಿಸಿಲ್ಲ ಎಂದು ಮಹಾರಾಷ್ಟ್ರ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಐಪಿಎಲ್ ಪಂದ್ಯದ ವೇಳೆ ಭದ್ರತಾ ಸಿಬ್ಬಂದಿ ಜತೆ ಜಗಳ ಹಾಗೂ ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೇಡೆ ಸ್ಟೇಡಿಯಂ ಪ್ರವೇಶಿಸದಂತೆ ಶಾರುಖ್‌ಖಾನ್‌ಗೆ ನಿಷೇಧ ಹೇರಲಾಗಿತ್ತು.

ಅಚ್ಚರಿ ಮೂಡಿಸಿದ ಎಂಸಿಎ ನಡೆ

ಅಚ್ಚರಿ ಮೂಡಿಸಿದ ಎಂಸಿಎ ನಡೆ

ಶಾರುಖ್ ಮೇಲಿನ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಎಂಸಿಎಗೆ ಮನವಿ ಮಾಡಿತ್ತು. ಅದರೆ, ಶಾರುಖ್ ಮೇಲಿನ ನಿರ್ಬಂಧ ತೆರವುಗೊಳಿಸಿರಲಿಲ್ಲ. ಮಕ್ಕಳ ಮುಂದೆ ಅವಾಚ್ಯ ಶಬ್ದ ಬಳಸಿದ ಕಾರಣಕ್ಕೆ ಶಾರುಖ್ ಅವರ ಮೇಲೆ ಮತ್ತೊಂದು ಎಫ್ ಐಆರ್ ದಾಖಲಾಗಿತ್ತು. ಐಪಿಎಲ್ ಆಯೋಜಿಸಿರುವ ಬಿಸಿಸಿಐ ಮನವಿಗೂ ಎಂಸಿಎ ಸೊಪ್ಪು ಹಾಕಿರಲಿಲ್ಲ. ಆದರೆ, ಈಗ ಶಾರುಖ್ ಅವರ ಸನ್ನಡತೆ ಇದ್ದಕ್ಕಿದ್ದಂತೆ ಎಂಸಿಎಗೆ ಕಾಣಿಸಿಕೊಂಡಿದ್ದು ಅಚ್ಚರಿ ಮೂಡಿಸಿದೆ.

ಟ್ವಿಟ್ಟರ್ ನಲ್ಲಿ ವಾಂಖೆಡೆ, ಶಾರುಖ್ ಟ್ರೆಂಡಿಂಗ್

ಟ್ವಿಟ್ಟರ್ ನಲ್ಲಿ ವಾಂಖೆಡೆ, ಶಾರುಖ್ ಟ್ರೆಂಡಿಂಗ್ ನಲ್ಲಿದೆ.

ಸಿನಿಮಾ ಪ್ರಚಾರಕ್ಕೆ ಒಳ್ಳೆ ಮೈದಾನ ಸಿಕ್ಕಿತು

ಸಿನಿಮಾ ಪ್ರಚಾರಕ್ಕೆ ಒಳ್ಳೆ ಮೈದಾನ ಸಿಕ್ಕಿತು, ಇನ್ಮುಂದೆ ಟಿವಿ ಶೋ, ಸೀರಿಯಲ್, ಭಜನೆ ಕೀರ್ತನೆ ಬಿಟ್ಟು ವಾಂಖೆಡೆಗೆ ಬರಬಹುದು.

ತಂಡದ ಆಡಳಿತ ಮಂಡಳಿಯಿಂದ ಟ್ವೀಟ್

ತಂಡದ ಆಡಳಿತ ಮಂಡಳಿಯಿಂದ ಶಾರುಖ್ ಮೇಲಿನ ನಿಷೇಧ ತೆರವುಗೊಂಡಿದ್ದರ ಬಗ್ಗೆ ಟ್ವೀಟ್ ಗೆ ಅಭಿಮಾನಿಗಳಿಂದ ಖಡಕ್ ಪ್ರತಿಕ್ರಿಯೆ.

ಪಾಕಿಸ್ತಾನವನ್ನು ಕರೆಸಿಕೊಂಡು ಆಟವಾಡಿ

ಪಾಕಿಸ್ತಾನವನ್ನು ಕರೆಸಿಕೊಂಡು ಆಡವಾಡಿ ನೋ ಪ್ರಾಬ್ಲಂ, ಗುರುದಾಸ್ ಪುರ ಘಟನೆ ಮರೆತುಬಿಡಿ ಎಂದು ವ್ಯಂಗ್ಯದ ಟ್ವೀಟ್.

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X