IPL: ಮುಂಬೈ ಇಂಡಿಯನ್ಸ್‌ಗೆ 4ರ, ರೋಹಿತ್‌ ಶರ್ಮಾಗೆ 5ರ ಸಂಭ್ರಮ!

IPL 2019: ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾರ 2009-2019ರ ಐಪಿಎಲ್ ಪ್ರಯಾಣ

ಹೈದರಾಬಾದ್‌, ಮೇ 13: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ನಾಲ್ಕು ಬಾರಿ ಫೈನಲ್‌ ತಲುಪಿದ್ದು, ಅಷ್ಟೂ ಬಾರಿಯು ಪ್ರಶಸ್ತಿ ಮುಡಿಗೇರಿಸಿಕೊಂಡು ಅಬ್ಬರಿಸಿದೆ.

ಈ ಮೂಲಕ ಮುಂಬೈ ತಂಡ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡರೆ, ರೋಹಿತ್ ಅಂತ್ಯತ ಯಶಸ್ವಿ ನಾಯಕನಾಗಿ ಹೊರಹೊಮ್ಮಿದ್ದಾರೆ. ಇನ್ನು ರೋಹಿತ್‌ ಐಪಿಎಲ್‌ ಇತಿಹಾಸದಲ್ಲಿ ಇನ್ಯಾರು ಮಾಡಿರದ ವಿಶೇಷ ಸಾಧನೆ ಒಂದನ್ನೂ ಮಾಡಿದ್ದಾರೆ.

IPL ಫೈನಲ್‌ ಬಳಿಕ ಬುಮ್ರಾ ಬಗ್ಗೆ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಿದು!

ಮುಂಬಯಿ ತಂಡದ ಪರ ಐದು ಬಾರಿ ಟ್ರೋಫಿ ಎತ್ತಿ ಹಿಡಿದಿರುವ 31 ವರ್ಷದ ಅನುಭವಿ ಆಟಗಾರ ರೋಹಿತ್‌, ಐಪಿಎಲ್‌ ಇತಿಹಾಸದಲ್ಲಿ ಟ್ರೋಫಿ ಗೆದ್ದಿರುವುದು ಐದನೇ ಬಾರಿ ಆಗಿದೆ. ಇದಕ್ಕೂ ಮೊದಲು ಆಡಮ್‌ ಗಿಲ್‌ಕ್ರಿಸ್ಟ್‌ ಸಾರಥ್ಯದ ಡೆಕನ್‌ ಚಾರ್ಜರ್ಸ್‌ ತಂಡ 2009ರಲ್ಲಿ ಚಾಂಪಿಯನ್ಸ್‌ ಪಟ್ಟಕ್ಕೇರಿದ್ದ ಸಂದರ್ಭದಲ್ಲಿ ರೋಹಿತ್‌ ಶರ್ಮಾ ಡೆಕನ್‌ ತಂಡದ ಸದಸ್ಯನಾಗಿದ್ದರು.

IPL: ಅಂಪೈರ್‌ ಪ್ರಮಾದಕ್ಕೆ ಪ್ರತಿಕ್ರಿಯಿಸಿದ ಪೊಲಾರ್ಡ್‌ಗೆ ದಂಡ!

ರೋಹಿತ್‌ ಶರ್ಮಾ ಅವರ ಐದು ಐಪಿಎಲ್‌ ಟ್ರೋಫಿ ಗೆಲುವಿನ ಸಾಧನೆಯ ವಿವರ ಇಂತಿದೆ.

ಮೊದಲ ಐಪಿಎಲ್‌ ಗೆಲುವು (2009)

2008ರ ಐಪಿಎಲ್‌ನಲ್ಲಿ ಡೆಕನ್‌ ಚಾರ್ಜರ್ಸ್‌ ತಂಡ ಅಂಕ ಪಟ್ಟಿಯ ಪಾತಾಳ ಸೇರಿತ್ತು. ಆದರೂ ಈ ಆವೃತ್ತಿಯಲ್ಲಿ ರೋಹಿತ್‌ ಡೆಕನ್‌ ತಂಡದ ಪರ ಗರಿಷ್ಠ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದರು. 2009ರ ಆವೃತ್ತಿಯಲ್ಲೂ ರೋಹಿತ್‌ ಈ ಸಾಧನೆಯನ್ನು ಮರುಕಳಿಸಿದರು. ಆದರೆ, ಈ ಬಾರಿ ತಂಡದ ಪ್ರದರ್ಶನವು ಉತ್ತುಂಗಕ್ಕೇರಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದ 2009ರ ಐಪಿಎಲ್‌ನಲ್ಲಿ ಆಡಮ್‌ ಗಿಲ್‌ಕ್ರಿಸ್ಟ್‌ ಸಾರಥ್ಯದ ಡೆಕನ್‌ ಚಾರ್ಜರ್ಸ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಫೈನಲ್‌ನಲ್ಲಿ ಡೆಕನ್‌ ತಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ6 ರನ್‌ಗ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ರೋಹಿತ್‌ 24 ಎಸೆತಗಳಲ್ಲಿ ಅಷ್ಟೇ ರನ್‌ಗಳ ಕಾಣಿಕೆ ನೀಡಿದ್ದರು.

2ನೇ ಪ್ರಶಸ್ತಿ (2013)

ರೋಹಿತ್‌ ಶರ್ಮಾ ಅವರಿಗೆ ತಮ್ಮ ತವರೂರಿನ ಫ್ರಾಂಚೈಸಿ ತಂಡ ಆ ಹೊತ್ತಿಗಾಗಲೇ ಕೈ ಬೀಸಿ ಕರೆದಾಗಿತ್ತು. ಸಚಿನ್‌ ತೆಂಡೂಲ್ಕರ್‌ ಇದ್ದರೂ ಕೂಡ ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡದ ನಾಯಕತ್ವ ಪಡೆದಿದ್ದರು. ಬಳಿಕ ರೋಹಿತ್‌ ನಾಯಕತ್ವದಲ್ಲಿ ಮುಂಬೈ ತಂಡ 2ನೇ ಬಾರಿ ಐಪಿಎಲ್‌ ಫೈನಲ್‌ ತಲುಪಿತ್ತು. ಇದಕ್ಕೂ ಮೊದಲು 2010ರಲ್ಲಿ ಮೊದಲ ಬಾರಿ ಫೈನಲ್‌ ತಲುಪಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ನಿರಾಸೆ ಅನುಭವಿಸಿತ್ತು. ಆದರೆ, 2013ರ ಫೈನಲ್‌ನಲ್ಲಿ ಚೆನ್ನೈ ತಂಡವನ್ನು 23 ರನ್‌ಗಳಿಂದ ಬಗ್ಗುಬಡಿದು ಮುಂಬೈ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದಿತ್ತು.

3ನೇ ಪ್ರಶಸ್ತಿ (2015)

2015ರ ಐಪಿಎಲ್‌ನಲ್ಲಿ ಮುಂಬೈ ತಂಡ ಆರಂಭದಲ್ಲೇ ಸತತ 4 ಪಂದ್ಯಗಳನ್ನು ಸೋತು ಕಂಗಾಲಾಗಿತ್ತು. ಆದರೆ, ಉಳಿದ 10 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನಷ್ಟೇ ಸೋತು ನಾಕ್‌ಔಟ್‌ ಪ್ರವೇಶಿಸಿದ ಮುಂಬೈ, ಯಾರೂ ಕೂಡ ಊಹಿಸಲಾಗದ ರೀತಿಯಲ್ಲಿ ಪ್ರಶಸ್ತಿ ಗೆದ್ದು ಬೀಗಿತ್ತು. ಫೈನಲ್‌ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 26 ಎಸೆತಗಳಲ್ಲಿ 50 ರನ್‌ಗಳನ್ನು ಸಿಡಿಸಿದ ನಾಯಕ ರೋಹಿತ್‌ ಶರ್ಮಾ ಪಂದ್ಯ ಶ್ರೇಷ್ಠ ಗೌರವ ಪಡೆದರು. ಪಂದ್ಯದಲ್ಲಿ ಮುಂಬೈ ತಂಡ 41 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.

4ನೇ ಪ್ರಶಸ್ತಿ (2017)

2017ರ ಐಪಿಎಲ್‌ ಫೈನಲ್‌ನಲ್ಲಿ ಎಂ.ಎಸ್‌ ಧೋನಿ ಇದ್ದರಾದರೂ ಚೆನ್ನೈ ಸೂಪರ್‌ ಕಿಂಗ್ಸ್‌ ಬದಲಿಗೆ ರೈಸಿಂಗ್‌ ಪುಣೆ ಸೂಪರ್‌ ಜಯಂಟ್ಸ್‌ ತಂಡ ಮುಂಬೈ ವಿರುದ್ಧ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಯಿತು. ಮತ್ತೊಮ್ಮೆ ರೋಹಿತ್‌ ಸಾರಥ್ಯದ ಮುಂಬೈ ತಂಡ ಧೋನಿಯ ತಂಡದ ಎದುರು ಮೇಲುಗೈ ಸಾಧಿಸಿತ್ತು. ಮುಂಬೈ ತಂಡ ಒತ್ತಡ ಮೆಟ್ಟಿನಿಲ್ಲುವ ಮೂಲಕ ಪುಣೆ ಎದುರು 1 ರನ್‌ಗಳ ರೋಚಕ ಜಯ ದಾಖಲಿಸಿತ್ತು.

5ನೇ ಪ್ರಶಸ್ತಿ (2019)

ಚೆನ್ನೈ ಮತ್ತು ಮುಂಬೈ ನಡುವಣ ಮತ್ತೊಂದು ಫೈನಲ್‌ ಇದು. ಟೂರ್ನಿಯ ಲೀಗ್‌ ಹಂತದ ಎರಡೂ ಪಂದ್ಯಗಳಲ್ಲಿ ಚೆನ್ನೈ ಗೆ ಸೋಲುಣಿಸಿದ್ದ ಮುಂಬೈ ಕ್ವಾಲಿಫೈಯರ್‌ 1 ಪಂದ್ಯದಲ್ಲೂ 6 ವಿಕೆಟ್‌ಗಳ ಅಣಂತರದಲ್ಲಿ ಸೂಪರ್‌ ಕಿಂಗ್ಸ್‌ ಪಡೆಯನ್ನು ಹಿಮ್ಮೆಟ್ಟಿಸಿತ್ತು. ಆದರೆ, ಫೈನಲ್‌ ಪಂದ್ಯದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ಇಂಡಿಯನ್ಸ್‌ ತಂಡ, ಕೊನೆಯ ಓವರ್‌ನಲ್ಲಿ ನಾಟಕೀಯ ತಿರುವು ಪಡೆದು 1 ರನ್‌ ರೋಚಕ ಜಯ ದಾಖಲಿಸಿತು. ಇದರೊಂದಿಗೆ ಮುಂಬೈ ತಂಡಕ್ಕೆ 4 ಐಪಿಎಲ್‌ ಟ್ರೋಫಿ ಲಭ್ಯವಾದರೆ, ರೋಹಿತ್‌ ಶರ್ಮಾಗೆ 5ನೇ ಟ್ರೋಫಿ ಗೆದ್ದ ಸಂಭ್ರಮ ಸಿಕ್ಕಿತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, May 13, 2019, 18:13 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X