ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: "ನಮ್ಮ ತಂಡಕ್ಕೆ ಯಾವ ಹಂತದಿಂದಲೂ ತಿರುಗಿ ಬಿದ್ದು ಗೆಲ್ಲುವ ತಾಕತ್ತಿದೆ"

Mumbai Indians Have Got Firepower To Win From Any Position

ಮುಂಬೈ ಇಂಡಿಯನ್ಸ್ ತಂಡದ ಫಿಲ್ಡಿಂಗ್ ಕೋಚ್ ಜೇಮ್ಸ್ ಪ್ಯಾಮೆಂಟ್ ತಮ್ಮ ತಂಡದ ಸಾಮರ್ಥ್ಯದ ಬಗ್ಗೆ ಭಾರೀ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ತಂಡ ಯಾವ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ಅಲ್ಲಿಂದ ತಿರುಗಿ ಬಿದ್ದು ಗೆಲ್ಲುವಂತಾ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ಯಾಮೆಂಟ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 78 ರನ್‌ಗೆ 4 ವಿಕೆಟ್ ಕಳೆದುಕೊಂಡು ಹಿನ್ನಡೆಯನ್ನು ಕಂಡಿತ್ತು. ಆದರೆ ಬಳಿಕ ಇಶಾನ್ ಕಿಶನ್ ಹಾಗೂ ಕಿರಾನ್ ಪೊಲಾರ್ಡ್ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಲು ಆರಂಭಿಸಿದ್ದರು. ಅಂತಿಮವಾಗಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿಎಸ್‌ಕೆ ಸಿಇಒಅಂಬಾಟಿ ರಾಯುಡು, ಡ್ವೇಯ್ನ್ ಬ್ರಾವೋ ಮರಳುವಿಕೆ ಬಗ್ಗೆ ಅಪ್‌ಡೇಟ್ ಕೊಟ್ಟ ಸಿಎಸ್‌ಕೆ ಸಿಇಒ

ಮುಂಬೈ ಇಂಡಿಯನ್ಸ್ ಮುಂದೆ 202 ರನ್‌ಗಳ ಬೃಹತ್ ಟಾರ್ಗೆಟ್ ಇತ್ತು. ಆದರೆ ಇಶಾನ್ ಕಿಶನ್ ಅಬ್ಬರದ 99 ರನ್ ಹಾಗೂ ಪೋಲಾರ್ಡ್ ದಾಖಲಿಸಿದ ಸ್ಪೋಟಕ 60 ರನ್ ಪಂದ್ಯದ ಗತಿಯನ್ನು ಬದಲಿಸಿ ಬಿಟ್ಟಿತ್ತು. ಆದರೂ ಪಂದ್ಯ ಗೆಲ್ಲಲು ಸಾದ್ಯವಾಗದರೆ ಸೂಪರ್ ಓವರ್‌ನಲ್ಲಿ ಫಲಿತಾಂಶ ಆರ್‌ಸಿಬಿ ಪರವಾಗಿ ಬಂದಿತ್ತು.

ಈ ಪ್ರದರ್ಶನದ ಬಳಿಕ ಮಾತನಾಡಿದ ಪ್ಯಾಮೆಂಟ್ "ನಮ್ಮ ತಂಡದಲ್ಲಿ ದೊಡ್ಡ ಪ್ರಮಾಣದ ಶಕ್ತಿಯಿದೆ. ಗೆಲ್ಲಲು ಯಾವಾಗ ತಂಡ ಆ ಶಕ್ತಿಯನ್ನು ಬಯಸುತ್ತದೋ ಆಗ ಆ ಶಕ್ತಿಯನ್ನು ಪಡೆದು ಯಾವ ಪರಿಸ್ಥಿತಿಯಿಂದಲೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ" ಎಂದು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?ಐಪಿಎಲ್‌ನಲ್ಲಿ ಕಣಕ್ಕಿಳಿದ ಹೊಸ ಪ್ರತಿಭೆ: ಯಾರಿದು ಅಬ್ದುಲ್ ಸಮದ್?

ಸೋಲು ನಮಗೆ ಅಸಮಾಧಾನವನ್ನು ತಂದಿದೆ ಎಂಬುದು ನಿಜ. ಆದರೆ ಅದರ ಜೊತೆಗೆ ನಮ್ಮ ತಂಡದಲ್ಲಿರುವ ಅತ್ಯುತ್ತಮ ಆಟಗಾರರ ಕಾರಣದಿಂದಾಗಿ ನಮಗೆ ವಿಶ್ವಾಸವೂ ಹೆಚ್ಚಾಗಿದೆ ಎಂದು ಜೇಮ್ಸ್ ಪ್ಯಾಮೆಂಟ್ ತಂಡದ ಬಗ್ಗೆ ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ.

Story first published: Thursday, October 1, 2020, 9:57 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X