ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರಂಭ ಪಂದ್ಯ ಸೋಲಿನಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್

ಅಬುಧಾಬಿ, ಸೆ . 19: ಕೊರೊನಾ ವೈರಸ್‌ನಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಯೋಜನೆಯಾಗಿದೆ. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಸೀಸನ್ ಇಂದಿನಿಂದ ಆರಂಭವಾಗಿದ್ದು, ಮೊದಲ ಪಂದ್ಯದ ಹಲವು ರೋಚಕ ಸನ್ನಿವೇಶ, ದಾಖಲೆಗಳಿಗೆ ಶೈಕ್ ಝಾಯೆದ್ ಸ್ಟೇಡಿಯಂ ಸಾಕ್ಷಿಯಾಯಿತು.

ಸ್ಟೇಡಿಯಂನಲ್ಲಿ ಪ್ರೇಕ್ಷಕರಿಲ್ಲದಿದ್ದರೂ ಪ್ರೇಕ್ಷಕರ ಹರ್ಷೋದ್ಗಾರ, ಚಪ್ಪಾಳೆ, ಡ್ರಮ್ಸ್ ಬೀಟ್ ಕೇಳಿಸಿದೆ. ಇದೇನು ಎಂದು ಕಣ್ಣುಜ್ಜಿಕೊಂಡು ಎರಡೆರಡು ಬಾರಿ ಸ್ಕ್ರೀನ್ ದಿಟ್ಟಿಸಿ ಕಿವಿ ಅಗಲಿಸಿ ಗಮನವಿಟ್ಟು ನೋಡಿದಾಗ ಇದು ನಕಲಿ ಸೌಂಡ್, ನಕಲಿ ಪ್ರೇಕ್ಷಕರನ್ನು ಸೃಷ್ಟಿಸಿ ಲೈವ್ ಫೀಡ್ ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿತ್ತು. ಈ ಬಗ್ಗೆ ಟ್ವಿಟ್ಟರಲ್ಲಿ ಚರ್ಚೆ ಇನ್ನೂ ಮುಂದುವರೆದಿದೆ.

ಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡುಇದೇನ್ ಗುರು! ಐಪಿಎಲ್ 13 ಆಟದ ನಡುವೆ ನಕಲಿ ಸೌಂಡು

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ 20 ಓವರ್‌ಗೆ 9 ವಿಕೆಟ್ ಕಳೆದು 162 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್‌ ಕಿಂಗ್ಸ್‌ನಿಂದ ಫಾಫ್ ಡು ಪ್ಲೆಸಿಸ್ 58 (44 ಎಸೆತ), ಅಂಬಾಟಿ ರಾಯುಡು 71 (48 ಎಸೆತ)ರನ್ ಕೊಡುಗೆಯೊಂದಿಗೆ 19.2 ಓವರ್‌ಗೆ 5 ವಿಕೆಟ್ ಕಳೆದು 166 ರನ್ ಗಳಿಸಿ ಜಯಭೇರಿ ಬಾರಿಸಿತು. ಈ ಮೂಲಕ ಮೊದಲ ಪಂದ್ಯದಲ್ಲೇ ಮುಂಬೈ ತಂಡಕ್ಕೆ ಚೆನ್ನೈ ಸೋಲುಣಿಸಿತು.

ಸೋಲಿನಲ್ಲೂ ದಾಖಲೆ:

ಸೋಲಿನಲ್ಲೂ ದಾಖಲೆ:

2013ರಿಂದ ಇಲ್ಲಿ ತನಕ ಮುಂಬೈ ಮುಂಬೈ ಇಂಡಿಯನ್ಸ್ ತಂಡ ಸತತ 8 ಸೋಲು ಕಂಡಿದೆ. ಈ ಮೂಲಕ 2013ರಿಂದ ಮೊದಲ ಪಂದ್ಯ ಸೋಲುವ ಮೂಲಕ ಅತಿ ಹೆಚ್ಚು ಮೊದಲ ಪಂದ್ಯ ಸೋತಿರುವ ತಂಡ ಎಂಬ ದಾಖಲೆ ಬರೆದಿದೆ. ಆದರೆ ಈ ಅವಧಿಯಲ್ಲೇ ರೋಹಿತ್ ಶರ್ಮ ಪಡೆ ನಾಲ್ಕು ಬಾರಿ ಐಪಿಎಲ್ ಕಪ್ ಎತ್ತಿರುವುದು ವಿಶೇಷ. ಐಪಿಎಲ್ ಮೊದಲ ಪಂದ್ಯದ ಕಗ್ಗಂಟು ಇನ್ನೂ ಬಿಡಿಸಲು ಮುಂಬೈಗೆ ಆಗಿಲ್ಲ, ಆದರೆ ಅದರಿಂದ ತಂಡದ ಆಟದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮೊದಲ ಪಂದ್ಯ ಸೋತರೂ ಕೊನೆಯಲ್ಲಿ ಕಪ್ ಎತ್ತಿದ ದಾಖಲೆಯೂ ಮುಂಬೈ ಹೆಸರಿನಲ್ಲಿದೆ.

ಈ ಸಲ ಕಪ್ ಈ ತಂಡಕ್ಕೆ-ಕ್ರಿಕೆಟ್ ಬುಕ್ಕಿಗಳ ಭವಿಷ್ಯ ಬಹಿರಂಗ

ಕೆಕೆಆರ್ ವಿರುದ್ಧ ಸತತ ಸೋಲು

ಕೆಕೆಆರ್ ವಿರುದ್ಧ ಸತತ ಸೋಲು

2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 2 ರನ್ ಗಳಿಂದ ಸೋಲು
2014ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 41ರನ್ ಗಳಿಂದ ಸೋಲು
2015ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 7 ವಿಕೆಟ್ ನಿಂದ ಸೋಲು

ಸತತ ಸೋಲಿನ ಶನಿ ಮುಂಬೈ ಇಂಡಿಯನ್ ತಂಡದ ಹೆಗಲೇರುವಂತೆ ಮಾಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂದರೆ ತಪ್ಪಾಗಲಾರದು. 2013ರಲ್ಲಿ ಮುಂಬೈ ವಿರುದ್ಧ ಆರ್ ಸಿಬಿ ರೋಚಕ ಜಯ ದಾಖಲಿಸಿತ್ತು. ಮುಂಬೈಗೆ ಪ್ರತಿ ಸೀಸನ್ ಮೊದಲ ಪಂದ್ಯ ಕಳೆದುಕೊಳ್ಳುವ ಶಾಪವೂ ಅಂಟಿಕೊಂಡಿತು.

ಐಪಿಎಲ್: ರಾಯುಡು-ಪ್ಲೆಸಿಸ್ ಸಾಹಸ, ಮುಂಬೈ ಮಣಿಸಿದ ಚೆನ್ನೈ

ರೈಸಿಂಗ್ ಪುಣೆ ದಾಖಲೆ

ರೈಸಿಂಗ್ ಪುಣೆ ದಾಖಲೆ

2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ 9 ವಿಕೆಟ್ ನಿಂದ ಸೋಲು
2017ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ ವಿರುದ್ಧ 7 ವಿಕೆಟ್ ನಿಂದ ಸೋಲು

ರೈಸಿಂಗ್ ಪುಣೆ ಸೂಪರ್ ಜೈಂಟ್ ತಂಡ ಸದ್ಯ ಐಪಿಎಲ್ ನಲ್ಲಿ ಆಡುತ್ತಿಲ್ಲ ತಂಡದ ಅಸ್ತಿತ್ವವೇ ಇಲ್ಲ ಆದರೆ, ಸತತವಾಗಿ ಚಾಂಪಿಯನ್ ತಂಡದ ವಿರುದ್ಧ ಮೊದಲ ಪಂದ್ಯ ಗೆದ್ದ ದಾಖಲೆ ಬರೆದಿದೆ.

ಚೆನ್ನೈ ವಿರುದ್ಧ ಎರಡು ಬಾರಿ ಸೋಲು

ಚೆನ್ನೈ ವಿರುದ್ಧ ಎರಡು ಬಾರಿ ಸೋಲು

2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1 ವಿಕೆಟ್ ನಿಂದ ಸೋಲು
2019ರಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ 37ರನ್ ಗಳಿಂದ ಸೋಲು
2020ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ಗಳಿಂದ ಸೋಲು

ಕೆಕೆಆರ್, ಪುಣೆ ಅಲ್ಲದೆ ಚೆನ್ನೈ ವಿರುದ್ಧವೂ ಎರಡು ಬಾರಿ ಮುಂಬೈ ಇಂಡಿಯನ್ ಮೊದಲ ಪಂದ್ಯ ಸೋತಿದೆ.

ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!

Story first published: Monday, September 21, 2020, 11:37 [IST]
Other articles published on Sep 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X