ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ವೇಗಿ ರಸಿಖ್ ಸಲಾಂಗೆ 2 ವರ್ಷಗಳ ನಿಷೇಧ ಶಿಕ್ಷೆ!

Mumbai Indians’ pacer Rasikh Salam banned for age fudging

ಮುಂಬೈ, ಜೂನ್ 20: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2019ರ ಚಾಂಪಿಯನ್ಸ್ ಮುಂಬೈ ಇಂಡಿಯನ್ ತಂಡದ ವೇಗಿ ರಸಿಖ್ ಸಲಾಂ ಅವರಿಗೆ 2 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಜನ್ಮ ದಿನಾಂಕದಲ್ಲಿನ ವ್ಯತ್ಯಾಸಕ್ಕಾಗಿ ಸಲಾಂ ನಿಷೇಧಕ್ಕೀಡಾಗಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಜುಲೈ 21ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ತ್ರಿಕೋನ ಸರಣಿಗಾಗಿ ಭಾರತ ಅಂಡರ್ 19 ತಂಡದಲ್ಲಿ ರಸಿಖ್ ಸಲಾಂ ಅವರನ್ನು ಹೆಸರಿಸಲಾಗಿತ್ತು. ಆದರೆ ಜನ್ಮ ದಿನಾಂಕದ ಮೂಲಕ ವಂಚಿಸಲು ಯತ್ನಿಸಿದ್ದರಿಂದ ಈ ಸರಣಿಗಾಗಿ ಸಲಾಂ ಬದಲಿಗೆ ಪ್ರಭಾತ್ ಮೌರ್ಯ ಅವರಿಗೆ ಅವಕಾಶ ನೀಡಲಾಗಿದೆ.

ವಿಶ್ವಕಪ್‌ನಿಂದ ಹೊರಬಿದ್ದ ಶಿಖರ್‌ ಧವನ್‌ ಭಾವನಾತ್ಮಕ ಸಂದೇಶ!ವಿಶ್ವಕಪ್‌ನಿಂದ ಹೊರಬಿದ್ದ ಶಿಖರ್‌ ಧವನ್‌ ಭಾವನಾತ್ಮಕ ಸಂದೇಶ!

'ಜನ್ಮದಿನಾಂಕದ ಬಗ್ಗೆ ತಪ್ಪು ಧೃಡೀಕರಣ ಪತ್ರ ನೀಡಿದ್ದಕ್ಕಾಗಿ ರಸಿಖ್ ಅವರನ್ನು ಬಿಸಿಸಿಐ 2 ವರ್ಷಗಳ ಕಾಲ ನಿಷೇಧಿಸಿದೆ' ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. 17ರ ಹರೆಯದ ಸಲಾಂ ಅಂಡರ್ 19, ರಣಜಿ ಮತ್ತು ನಿಯಮಿತ ಓವರ್‌ಗಳ ಪಂದ್ಯಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸಿದ್ದರು.

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ನೀಡಿದ ದುಬಾರಿ 5 ಬೌಲರ್‌ಗಳುವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ನೀಡಿದ ದುಬಾರಿ 5 ಬೌಲರ್‌ಗಳು

ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಸಲಾಂ ಅವರನ್ನು 20 ಲಕ್ಷ ರೂ.ಗೆ ಖರೀದಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ, ಟೂರ್ನಿಯ ಮೊದಲ ಪಂದ್ಯ ಆಡಿದ್ದಾಗ ಜಸ್‌ಪ್ರೀತ್‌ ಬೂಮ್ರಾ ಬದಲಿಗೆ ರಸಿಖ್ ಅವರಿಗೆ ಮೊದಲ ಓವರ್ ಎಸೆಯಲು ಅವಕಾಶ ನೀಡಲಾಗಿತ್ತು. ಇದೊಂದೇ ಪಂದ್ಯ ಆಡಿದ್ದ ಸಲಾ, 4 ಓವರ್‌ಗೆ ವಿಕೆಟ್ ಪಡೆಯದೆ 42 ರನ್‌ ನೀಡಿದ್ದರು.

Story first published: Thursday, June 20, 2019, 11:02 [IST]
Other articles published on Jun 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X