ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

9 ವರ್ಷಗಳ ಬಳಿಕ ತಂದೆ-ತಾಯಿ ಭೇಟಿ ಮಾಡಿದ ಮುಂಬೈ ಇಂಡಿಯನ್ಸ್ ಪ್ಲೇಯರ್‌ ಕುಮಾರ್ ಕಾರ್ತಿಕೇಯ

Kumar karthikeya

ಮುಂಬೈ ಇಂಡಿಯನ್ಸ್ ಪ್ಲೇಯರ್‌ ಕುಮಾರ್ ಕಾರ್ತಿಕೇಯ ಬರೋಬ್ಬರಿ 9 ವರ್ಷ 3 ತಿಂಗಳ ಬಳಿಕ ತನ್ನ ತಂದೆ ಮತ್ತು ತಾಯಿಯನ್ನ ಭೇಟಿ ಮಾಡಿದ್ದಾರೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಫೋಟೋ ಶೇರ್ ಮಾಡಿರುವ ಕಾರ್ತಿಕೇಯ ತನ್ನ ಅಚಲ ನಿರ್ಧಾರದ ಹಿಂದಿನ ಸತ್ಯ ತಿಳಿಸಿದ್ದಾರೆ.

ಜೀವನದಲ್ಲಿ ಏನಾದ್ರೂ ಸಾಧನೆ ಮಾಡಿದ್ರಷ್ಟೇ ಮತ್ತೆ ನಾನು ನಿಮ್ಮನ್ನ ಭೇಟಿ ಮಾಡುತ್ತೇನೆ ಎಂದು ಹೇಳಿ ಹೋಗಿದ್ದ ಕಾರ್ತಿಕೇಯ ಐಪಿಎಲ್ 2022ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಚೊಚ್ಚಲ ಪಂದ್ಯವನ್ನಾಡಲುವ ಮೂಲಕ ಪ್ರಮುಖ ಟೂರ್ನಿಯಲ್ಲಿ ಕಾಣಿಸಿಕೊಂಡರು.

ತಾಯಿಯನ್ನು ಭೇಟಿಯಾದ ಖುಷಿಯಲ್ಲಿ ಟ್ವೀಟ್ ಮಾಡಿದ ಕಾರ್ತಿಕೇಯ

ಬರೋಬ್ಬರಿ 9ಕ್ಕೂ ಹೆಚ್ಚು ವರ್ಷದ ಬಳಿಕ ಮೊದಲ ಬಾರಿಗೆ ಕುಟುಂಬವನ್ನ ನೇರವಾಗಿ ಭೇಟಿ ಮಾಡಿದ ಕುಮಾರ್ ಕಾರ್ತಿಕೇಯ ಹರ್ಷ ವ್ಯಕ್ತಪಡಿಸಿದ್ದಾರೆ.

"9 ವರ್ಷ 3 ತಿಂಗಳ ನಂತರ ನನ್ನ ಕುಟುಂಬ ಮತ್ತು ಅಮ್ಮನನ್ನು ಭೇಟಿಯಾದೆ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ತಿಕೇಯ ಟ್ವಿಟರ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನನಗೆ ಸತತ ಮನೆಗೆ ಕರೆಯುತ್ತಿದ್ದ ಪೋಷಕರು

ನನಗೆ ಸತತ ಮನೆಗೆ ಕರೆಯುತ್ತಿದ್ದ ಪೋಷಕರು

ಕುಮಾರ್ ಕಾರ್ತಿಕೇಯ ಇಷ್ಟು ವರ್ಷಗಳ ಕಾಲ ಅಪ್ಪ ಅಮ್ಮನನ್ನು ಬಿಟ್ಟು ಇರುವುದಕ್ಕೆ ತಪಸ್ಸು ಮಾಡಿದ್ದಾರೆ. ಅಚಲ ನಿರ್ಧಾರ, ಕಠಿಣ ಪರಿಶ್ರಮದ ಜೊತೆಗೆ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಲೇಬೇಕು ಎಂದು ಗುರಿಯನ್ನಿಟ್ಟುಕೊಂಡು ನಡೆದಿದ್ದಾರೆ.

ಈ ವೇಳೆಯಲ್ಲಿ ಕಾರ್ತಿಕೇಯ ತನ್ನ ಹೆತ್ತವರು ತನ್ನನ್ನು ನಿಯಮಿತವಾಗಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನೆಂದು ಬಹಿರಂಗಪಡಿಸಿದ್ದಾರೆ. ಆದ್ರೆ ಆತನು ಹಿಂದಿರುಗಿ ನೋಡದೆ ಅವನು ಆ ಕಾರಣಕ್ಕೆ ಬದ್ಧನಾಗಿರುತ್ತಾನೆ ಮತ್ತು ಅವನ ಜೀವನದಲ್ಲಿ ಏನನ್ನಾದರೂ ಸಾಧಿಸಲು ಹೋಗುತ್ತಿದ್ದೆ ಎಂದಿದ್ದಾರೆ.

9 ವರ್ಷಗಳಿಂದ ಮನೆಗೆ ಬಂದಿರ್ಲಿಲ್ಲ!

9 ವರ್ಷಗಳಿಂದ ಮನೆಗೆ ಬಂದಿರ್ಲಿಲ್ಲ!

"ನಾನು 9 ವರ್ಷಗಳಿಂದ ಮನೆಗೆ ಬಂದಿಲ್ಲ. ನಾನು ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮಾತ್ರ ಮನೆಗೆ ಮರಳಲು ನಿರ್ಧರಿಸಿದೆ. ನನ್ನ ತಾಯಿ ಮತ್ತು ತಂದೆ ನನ್ನನ್ನು ಆಗಾಗ್ಗೆ ಕರೆದರು, ಆದರೆ ನಾನು ಬದ್ಧನಾಗಿದ್ದೆ. ಈಗ, ಅಂತಿಮವಾಗಿ, ನಾನು ಐಪಿಎಲ್ ನಂತರ ಮನೆಗೆ ಮರಳಿದ್ದೇನೆ'' ಎಂದು ಕಾರ್ತಿಕೇಯ ಹೆತ್ತವರೊಂದಿಗೆ ಸೇರಿದ ಬಳಿಕ ಮಾತನಾಡಿದ್ದಾರೆ.

"ನನ್ನ ಕೋಚ್ ಸಂಜಯ್ ಸರ್ ನನ್ನ ಹೆಸರನ್ನು ಮಧ್ಯಪ್ರದೇಶಕ್ಕೆ ಸೂಚಿಸಿದ್ದರು. ಮೊದಲ ವರ್ಷದಲ್ಲಿ, 23 ವರ್ಷದೊಳಗಿನವರ ತಂಡದಲ್ಲಿ ನನ್ನ ಹೆಸರು ಸ್ಟ್ಯಾಂಡ್‌ಬೈ ಆಟಗಾರನಾಗಿ ಕಾಣಿಸಿಕೊಂಡಿತು ಮತ್ತು ಪಟ್ಟಿಯಲ್ಲಿ ನನ್ನ ಹೆಸರನ್ನು ನೋಡಿ ನನಗೆ ದೊಡ್ಡ ಸಮಾಧಾನವಾಯಿತು" ಎಂದು ಕಾರ್ತಿಕೇಯ ದೈನಿಕ್ ಜಾಗರನ್‌ಗೆ ಹೇಳಿದ್ದರು.

ಇದೇ ವರ್ಷ ಏಪ್ರಿಲ್ 30 ರಂದು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಮುಂಬೈ ಇಂಡಿಯನ್ಸ್ ಪರ ಮೊದಲ ಬಾರಿಗೆ ಆಡಿದ ಈತ ಇನ್ನೂ ಮೂರು ಪಂದ್ಯಗಳನ್ನು ಆಡಿದರು ಮತ್ತು 7.85 ರ ಎಕಾನಮಿ ದರದಲ್ಲಿ ಒಟ್ಟು ಐದು ವಿಕೆಟ್‌ಗಳನ್ನು ಪಡೆದರು. ಈ ವರ್ಷ ರಣಜಿ ಟ್ರೋಫಿ ಋತುವಿನ ಫೈನಲ್‌ನಲ್ಲಿ ಮುಂಬೈ ತಂಡವನ್ನು ಸೋಲಿಸಿದ ಬಳಿಕ ಮಧ್ಯಪ್ರದೇಶ ತಂಡದಲ್ಲೂ ಕುಮಾರ್ ಭಾಗವಾಗಿದ್ದರು.

Story first published: Thursday, August 4, 2022, 9:36 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X