ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

44 ವರ್ಷಗಳ ವಿಶ್ವದಾಖಲೆ ಮುರಿದ ಭಾರತದ ಕ್ರಿಕೆಟರ್ ಯಶಸ್ವಿ ಜೈಸ್ವಾಲ್

Mumbai teen Yashasvi Jaiswal smashes world record with double hundred

ಬೆಂಗಳೂರು, ಅಕ್ಟೋಬರ್ 16: ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಬುಧವಾರ (ಅಕ್ಟೋಬರ್ 16) ನಡೆದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮುಂಬೈ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

ಕಣ್ಸನ್ನೆ ಹುಡುಗೀನೇ ಸರಿಗಟ್ಟೋ ಕ್ರಿಕೆಟ್‌ ಸುಂದರಿ ಪ್ರಿಯಾ ಪೂನಿಯಾ!ಕಣ್ಸನ್ನೆ ಹುಡುಗೀನೇ ಸರಿಗಟ್ಟೋ ಕ್ರಿಕೆಟ್‌ ಸುಂದರಿ ಪ್ರಿಯಾ ಪೂನಿಯಾ!

ಮುಂಬೈ ಪರ ದ್ವಿಶತಕ ಚಚ್ಚಿದ ಯಶಸ್ವಿ ಜೈಸ್ವಾಲ್, ಏಕದಿನ ಕ್ರಿಕೆಟ್‌ನಲ್ಲಿ ಮತ್ತು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 200+ ರನ್ ಗಳಿಸಿದ ವಿಶ್ವದ ಅತೀ ಕಿರಿಯ ಬ್ಯಾಟ್ಸ್‌ಮನ್ ಆಗಿ ದಾಖಲೆ ಪುಸ್ತಕದ ಪುಟ ಸೇರಿದ್ದಾರೆ.

ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟ್ ಬೀಸಲಿರುವ ಸಚಿನ್, ಸೆಹ್ವಾಗ್, ಲಾರಾಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟ್ ಬೀಸಲಿರುವ ಸಚಿನ್, ಸೆಹ್ವಾಗ್, ಲಾರಾ

ಜೈಸ್ವಾಲ್, 44 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ನಿರ್ಮಿಸಿದ್ದ ವಿಶ್ವದಾಖಲೆ ಸರಿಗಟ್ಟಿದ್ದಾರೆ.

ಸ್ಫೋಟಕ ಬ್ಯಾಟಿಂಗ್

ಸ್ಫೋಟಕ ಬ್ಯಾಟಿಂಗ್

ಮುಂಬೈ ಓಪನರ್ ಯಶಸ್ವಿ ಜೈಸ್ವಾಲ್ 154 ಎಸೆತಗಳಿಗೆ 203 ರನ್ ಬಾರಿಸಿದ್ದು ದಾಖಲೆಗೆ ಕಾರಣವಾಗಿದೆ. ಈ ದ್ವಿಶತಕದಲ್ಲಿ 17 ಬೌಂಡರಿಗಳು ಮತ್ತು 12 ಸಿಕ್ಸರ್‌ಗಳು ಸೇರಿವೆ. ಜೈಸ್ವಾಲ್ ಬ್ಯಾಟಿಂಗ್ ನೆರವಿನಿಂದ ಮುಂಬೈ 350+ ರನ್ ಗಳಿಸಿತು.

44 ವರ್ಷಗಳ ವಿಶ್ವದಾಖಲೆ ಪತನ

44 ವರ್ಷಗಳ ವಿಶ್ವದಾಖಲೆ ಪತನ

ದೇಸಿ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ವಿಶ್ವ ದಾಖಲೆ ದಕ್ಷಿಣ ಆಫ್ರಿಕಾದ ಅಲನ್ ಬ್ಯಾರೊ ಹೆಸರಿನಲ್ಲಿತ್ತು. 1975ರ ದಕ್ಷಿಣ ಆಫ್ರಿಕಾ ದೇಸಿ ಕ್ರಿಕೆಟ್‌ನಲ್ಲಿ 20 ವರ್ಷ, 273 ದಿನ ವರ್ಷದವರಾಗಿದ್ದ ಬ್ಯಾರೊ, ಡಬಲ್ ಸೆಂಚುರಿ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಜೈಸ್ವಾಲ್ 3 ವರ್ಷ ಚಿಕ್ಕವ

ಜೈಸ್ವಾಲ್ 3 ವರ್ಷ ಚಿಕ್ಕವ

ದಕ್ಷಿಣ ಆಫ್ರಿಕಾ ಆಟಗಾರ ಅಲನ್ ಬ್ಯಾರೊ ದಾಖಲೆ ಸರಿಗಟ್ಟಿರುವ ಜೈಸ್ವಾಲ್‌ಗೆ ಈಗ 17 ವರ್ಷ, 292 ದಿನ ವಯಸ್ಸು. ಹೀಗಾಗಿ ಏಕದಿನ ಮತ್ತು ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಬ್ಯಾಟ್ಸ್‌ಮನ್ ಆಗಿ ಜೈಸ್ವಾಲ್ ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಹಿಂದಿನ ದಾಖಲೆಗಿಂತ ಸುಮಾರು 3 ವರ್ಷ ಕಿರಿಯವರಾಗಿ ಈ ಸಾಧನೆ ಮೆರೆದಿದ್ದಾರೆ.

ಅತ್ಯಧಿಕ ರನ್ ಸರದಾರ

ಅತ್ಯಧಿಕ ರನ್ ಸರದಾರ

ಈ ವಿಜಯ್ ಹಜಾರೆ ಟ್ರೋಫಿಯಲ್ಲಿ ಯಶಸ್ವಿ ಜೈಸ್ವಾಲ್ ಬಾರಿಸಿದ 3ನೇ ಶತಕವಿದು. ಇದೇ ಟೂರ್ನಿಯಲ್ಲಿ ಲಿಸ್ಟ್ 'ಎ'ಗೆ ಪಾದಾರ್ಪಣೆ ಮಾಡಿರುವ ಜೈಸ್ವಾಲ್, ಕೇವಲ 5 ಪಂದ್ಯಗಳಲ್ಲಿ 585 ರನ್ ಗಳಿಸಿದ್ದಾರೆ. ಸದ್ಯಕ್ಕೆ ಅತ್ಯಧಿಕ ರನ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಜೈಸ್ವಾಲ್, ತಮಿಳುನಾಡಿನ ಬಾಬ ಅಪರಜಿತ್ ಅವರನ್ನು ಹಿಂದಿಕ್ಕಿದ್ದಾರೆ.

ಮುಂಬೈ ಭರ್ಜರಿ ರನ್

ಮುಂಬೈ ಭರ್ಜರಿ ರನ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಮುಂಬೈ, ಜೈಸ್ವಾಲ್ 203, ಆದಿತ್ಯ ತಾರೆ 78, ಸಿದ್ದೇಶ್ ಲಾಡ್ 32, ನಾಯಕ ಶ್ರೇಯಸ್ ಐಯ್ಯರ್ 31 ರನ್‌ನೊಂದಿಗೆ 50 ಓವರ್‌ ಮುಕ್ತಾಯಕ್ಕೆ 3 ವಿಕೆಟ್ ನಷ್ಟದಲ್ಲಿ 358 ರನ್ ಬಾರಿಸಿತ್ತು. ಮುಂಬೈ ಇನ್ನಿಂಗ್ಸ್‌ನಲ್ಲಿ ವಿವೇಕಾನಂದ ತಿವಾರಿ 2 ವಿಕೆಟ್ ಪಡೆದಿದ್ದರು.

Story first published: Wednesday, October 16, 2019, 16:44 [IST]
Other articles published on Oct 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X