ಈ ಶತಕ ಯಾವಾಗಲೂ ನೆನಪಿನಲ್ಲಿರುತ್ತದೆ: ಮುಂಬೈ ಟೆಸ್ಟ್ ಶತಕದ ಬಗ್ಗೆ ಮಯಾಂಕ್ ಅಗರ್ವಾಲ್ ಮಾತು

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಈ ಪ್ರದರ್ಶನ ಮುಂದುವರಿಸಿದ ಮಯಾಂಕ್ ಅರ್ಧ ಶತಕದ ಕೊಡುಗೆ ನೀಡಿದ್ದಾರೆ. ಈ ಪ್ರದರ್ಶನದ ಬಳಿಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕಗಳಿಸುವುದು ಯಾವಾಗಲೂ ವಿಶೇಷ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಸಿಡಿಸಿದ ಈ ಶತಕ ತನಗೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಎರಡನೇ ಇನ್ನುಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್‌ಗೆ ಇಳಿದಿರಲಿಲ್ಲ. ಬ್ಯಾಟಿಂಗ್ ಸಂದರ್ಭದಲ್ಲಿ ಗಾಯಗೊಂಡಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಫಿಲ್ಡಿಂಗ್‌ಗೆ ಇಳಿಸದಿರಲು ನಿರ್ಧರಿಸಲಾಗಿತ್ತು.

ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ

ಮೂರನೇ ದಿನದಾಟ ಮುಗಿದ ಬಳಿಕ ಮಯಾಂಕ್ ಅಗರ್ವಾಲ್ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಟ್ವೀಟ್‌ನಲ್ಲಿ ಮಯಾಂಕ್ ಅಗರ್ವಾಲ್ "ಟೆಸ್ಟ್ ಶತಕ ಯಾವಾಗಲೂ ವಿಶೇಷವಾಗಿರುತ್ತದೆ ಮತ್ತೆ ಈ ಶತಕ ಯಾವಾಗಲೂ ನೆನಪಿನಲ್ಲಿ ಉಳಿದಯುತ್ತದೆ ಎಂದು ಮಯಾಂಕ್ ಅಗರ್ವಾಲ್ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾದ ಟೆಸ್ಟ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಸ್ಥಾನ ಇತ್ತೀಚೆಗೆ ಸಾಕಷ್ಟು ಅಸ್ಥಿರವಾಗಿತ್ತು. ಸಿಕ್ಕ ಅವಕಾಶವನ್ನು ಅಗರ್ವಾಲ್ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದ್ದರು. ಆದರೆ ಮುಂಬೈ ಟೆಸ್ಟ್‌ನಲ್ಲಿ ಎರಡೂ ಕೈಗಳಿಂದ ಅವಕಾಶವನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಮಯಾಂಕ್ ಅಗರ್ವಾಲ್ ಶತಕ ಸಿಡಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದ್ದಾರೆ. ಮೊದಲ ದಿನದಾಟದಲ್ಲಿ ಭರ್ಜರಿ ಶತಕ ಸಿಡಿಸಿ ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಮಯಾಂಕ್ ಅಗರ್ವಾಲ್ ಬರೊಬ್ಬರಿ 24 ತಿಂಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ. ಈ ಮೂಲಕ ಸುದೀರ್ಘ ಕಾಲದಿಂದ ಕಾಯುತ್ತಿದ್ದ ಶತಕವನ್ನು ಪೂರ್ಣಗೊಳಿಸಿದ್ದಾರೆ.

ಆ್ಯಷಸ್ ಟೆಸ್ಟ್ ಸರಣಿ: ಬ್ರಿಸ್ಬೇನ್ ಟೆಸ್ಟ್‌ಗೆ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾಆ್ಯಷಸ್ ಟೆಸ್ಟ್ ಸರಣಿ: ಬ್ರಿಸ್ಬೇನ್ ಟೆಸ್ಟ್‌ಗೆ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾ

ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಇತರ ಆಟಗಾರರು ರನ್ ಗಳಿಸಲು ಪರದಾಡುತ್ತಿದ್ದರೆ ಮಯಾಂಕ್ ಅಗರ್ವಾಲ್ ಸರಾಗವಾಗಿ ರನ್‌ಗಳಿಸುತ್ತಾ ಸಾಗಿದರು. ಭರ್ತಿ 150 ರನ್‌ಗಳಿಸದ ಮಯಾಂಕ್ ಬಳಿಕ ಅಜಾಜ್‌ಗೆ ವಿಕೆಟ್ ಒಪ್ಪಿಸಿದರು. ಇದರಕ್ಕಾಗಿ 311 ಎಸೆತಗಳನ್ನು ಎದುರಿಸಿದ್ದರು ಮಯಾಂಕ್. ಈ ಸುಂದರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ತಂಡಕ್ಕೆ ನೆರವಾಗಿದ್ದಾರೆ. 108 ಎಸೆತಗಳನ್ನು ಎದುರಿಸಿದ ಮಯಾಂಕ್ ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್‌ಗಳಿಸಿದರು. ಈ ಮೂಲಕ ತಮ್ಮ ಪ್ರದರ್ಶನದ ವಿರುದ್ಧ ಕೇಳಿ ಬಂದಿದ್ದ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ ಮಯಾಂಕ್ ಅಗರ್ವಾಲ್.

ನ್ಯೂಜಿಲೆಂಡ್ 62ರನ್‌ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರನ್ಯೂಜಿಲೆಂಡ್ 62ರನ್‌ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರ

ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್

ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್
ಬೆಂಚ್: ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Sunday, December 5, 2021, 21:53 [IST]
Other articles published on Dec 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X