ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ವೈಫಲ್ಯ, ಕೌಂಟಿಯಲ್ಲಿ ಶತಕ: ಫಾರ್ಮ್ ಕಂಡುಕೊಂಡ ಮುರಳಿ ವಿಜಯ್

Murali vijay back in form hits century for essex

ಟ್ರೆಂಟ್ ಬ್ರಿಡ್ಜ್, ಸೆಪ್ಟೆಂಬರ್‌ 14: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಫಾರ್ಮ್ ಕಾರಣದಿಂದಾಗಿ ತಂಡದಿಂದ ಸ್ಥಾನ ಕಳೆದುಕೊಂಡಿದ್ದ ಆರಂಭಿಕ ಆಟಗಾರ ಮುರಳಿ ವಿಜಯ್, ಅದೇ ಇಂಗ್ಲೆಂಡ್‌ ನೆಲದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.

ಎರಡು ಟೆಸ್ಟ್ ಪಂದ್ಯದಲ್ಲಿ ವಿಫಲತೆ ಅನುಭವಿಸಿದ್ದ ವಿಜಯ್ ಅವರನ್ನು ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿತ್ತು. ಬಳಿಕ ಅವರು ಇಂಗ್ಲೆಂಡ್‌ನ ಕೌಂಟಿ ತಂಡ ಎಸೆಕ್ಸ್‌ಅನ್ನು ಸೇರಿಕೊಂಡಿದ್ದರು.

ಮುರಳಿ ವಿಜಯ್ ಕ್ರಿಕೆಟ್ ಟೆಸ್ಟ್ ಜೀವನ ಮುಗಿಯಿತೇ?: ಅಭಿಮಾನಿಗಳ ಆಕ್ರೋಶಮುರಳಿ ವಿಜಯ್ ಕ್ರಿಕೆಟ್ ಟೆಸ್ಟ್ ಜೀವನ ಮುಗಿಯಿತೇ?: ಅಭಿಮಾನಿಗಳ ಆಕ್ರೋಶ

ಅಲ್ಲಿ ಆಡಿದ ಮೊದಲ ಪಂದ್ಯದಲ್ಲಿಯೇ ವಿಜಯ್ ಅಮೋಘ ಆಟವಾಡಿದ್ದಾರೆ. ಜತೆಗೆ ತಮ್ಮಲ್ಲಿ ಇನ್ನೂ ಆಡುವ ಛಾತಿ ಇದೆ ಎಂಬುದನ್ನು ತೋರಿಸಿದ್ದಾರೆ.

ಸತತ ವೈಫಲ್ಯದ ಬಳಿಕ ಫಾರ್ಮ್ ಕಂಡುಕೊಂಡಿರುವ ವಿಜಯ್, ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದರೆ, ಎರಡನೆಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದಾರೆ.

ಮತ್ತೆ ಮತ್ತೆ ತಪ್ಪನ್ನು ರಿಪೀಟ್ ಮಾಡಿದ್ದೆ ಸೋಲಿಗೆ ಕಾರಣ : ಲಕ್ಷ್ಮಣ್ಮತ್ತೆ ಮತ್ತೆ ತಪ್ಪನ್ನು ರಿಪೀಟ್ ಮಾಡಿದ್ದೆ ಸೋಲಿಗೆ ಕಾರಣ : ಲಕ್ಷ್ಮಣ್

ನಾಟಿಂಗ್‌ಹ್ಯಾಮ್ ಶೈರ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮುರಳಿ ವಿಜಯ್ ಮೊದಲ ಇನ್ನಿಂಗ್ಸ್‌ನಲ್ಲಿ 95 ಎಸೆತಗಳಲ್ಲಿ 56 ರನ್ ಗಳಿಸಿದ್ದರು. ಇದರಲ್ಲಿ 9 ಬೌಂಡರಿಗಳು ಸೇರಿದ್ದವು.

ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!ಕೆಎಲ್ ರಾಹುಲ್ -ರಿಷಬ್ ಪಂತ್ ಜೊತೆಯಾಟ, ದಾಖಲೆಗಳು ಧೂಳಿಪಟ!

ನಾಲ್ಕನೆಯ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 282 ರನ್ ಗಳಿಸಬೇಕಿದ್ದ ತಂಡಕ್ಕೆ ವಿಜಯ್ ಮತ್ತೆ ಆಸರೆಯಾದರು. ಟಾಮ್ ವೆಸ್ಟ್ಲೆ ಜತೆಗೂಡಿ ಎರಡನೆಯ ವಿಕೆಟ್‌ಗೆ 204 ರನ್‌ಗಳ ಜತೆಯಾಟ ನೀಡಿದರು. 181 ಎಸೆತಗಳಲ್ಲಿ 15 ಬೌಂಡರಿಗಳೊಂದಿಗೆ 100 ರನ್ ಬಾರಿಸಿ ಸಮಿತ್ ಪಟೇಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಎಸೆಕ್ಸ್ ತಂಡ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Story first published: Friday, September 14, 2018, 12:17 [IST]
Other articles published on Sep 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X