ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶದ ಪರವಾಗಿ ಹೊಸ ಮೈಲಿಗಲ್ಲು ನೆಟ್ಟ ಮುಷ್ಫೀಕರ್ ರಹೀಮ್

Mushfiqur Rahim Becomes Bangladesh’s Leading Test Run Scorer

ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ತಮ್ಮ ದೇಶದ ಪರವಾಗಿ ಹೊಸ ಸಾಧನೆಯೊಂದನ್ನು ಮಾಡಿದ್ದಾರೆ. ಬಾಂಗ್ಲಾದೇಶದ ಪರವಾಗಿ ಅಂತಾರಾಷ್ಟ್ರಿಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಮುಷ್ಫಿಕರ್ ರಹೀಮ್ ಪಾತ್ರರಾಗಿದ್ದಾರೆ.

ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಮುಷ್ಫಿಕರ್ ರಹೀಮ್ ಈ ಸಾಧನೆಯನ್ನು ಮಾಡಿದ್ದಾರೆ. ಈ ಟೆಸ್ಟ್‌ನಲ್ಲಿ ಮುಷ್ಫಿಕರ್ ದ್ವಿಶತಕವನ್ನು ಸಿಡಿಸಿ ಮಿಂಚಿದ್ದರು. ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಮ್ ಈ ಸಾಧನೆಗೆ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಮುಷ್ಫಿಕರ್ ರಹೀಮ್ ಅಜೇಯ 203 ರನ್ ಗಳಿಸಿದ್ದರು.

ಮುಷ್ಫಿಕರ್ ರಹೀಮ್ ಬಾಂಗ್ಲಾದೇಶದ ಪರವಾಗಿ ಮೂರನೇ ದ್ವಿಶತಕವನ್ನು ಸಿಡಿಸಿದ ಸಾಧನೆಯನ್ನು ಮಾಡಿದ್ದಾರೆ. 32 ವರ್ಷದ ಈ ಆಟಗಾರ 70 ಟೆಸ್ಟ್‌ ಪಂದ್ಯಗಳಿಂದ 4413 ರನ್‌ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 21 ಅರ್ಧ ಶತಕಗಳು ಸೇರಿದೆ.

ಬಾಂಗ್ಲಾದೇಶದ ಪರವಾಗಿ 60 ಟೆಸ್ಟ್ ಪಂದ್ಯಗಳಲ್ಲಿ ತಮೀಮ್ 4405 ರನ್‌ಗಳಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ, 56 ಟೆಸ್ಟ್ ಪಂದ್ಯಗಳನ್ನಾಡಿರುವ ಶಕೀಬ್ ಅಲ್ ಹಸನ್ 3862ರನ್‌ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಹಬಿಬುಲ್ ಬಷರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಆಟಗಾರ. ಇವರು 3026 ರನ್‌ಗಳನ್ನು ಗಳಿಸಿದ್ದಾರೆ.

ಮುಷ್ಫಿಕರ್ ರಹೀಮ್ ಬಾಂಗ್ಲಾದೇಶದ ಪರವಾಗಿ 216 ಏಕದಿನ ಪಂದ್ಯಗಳಲ್ಲಿ ಆಡಿದ್ದು 6100 ರನ್ ಗಳಿಸಿದ್ದಾರೆ. 84 ಟಿ20 ಪಂದ್ಯಗಳಲ್ಲಿ 1265 ರನ್‌ಗಳಿಸಿದ್ದಾರೆ.

Story first published: Tuesday, February 25, 2020, 17:55 [IST]
Other articles published on Feb 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X