ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: 'ಇದೇ ನನ್ನ ಸಂಗೀತ' ಎಂದು ನೆಟ್‌ನಲ್ಲಿ ಬೆವರಿಳಿಸುತ್ತಿರುವ ಕೆಎಲ್ ರಾಹುಲ್

 ‘Music To My Ears’: Kl Rahul Returns To Nets

ಐಪಿಎಲ್‌ಗೆ ದಿನಗಳು ಸಮೀಪಿಸುತ್ತಿರುವಂತೆಯೇ ಆಟಗಾರರು ಅಭ್ಯಾಸಕ್ಕೆ ಮರಳುತ್ತಿದ್ದಾರೆ. ಲಾಕ್‌ಡೌನ್‌ನ ಕಾರಣದಿಂದಾಗಿ ಕಳೆದ ಮೂರ್ನಾಲ್ಕು ತಿಂಗಳುಗಳ ಕಾಲ ಕ್ರಿಕೆಟಿಗರು ಸಂಪೂರ್ಣವಾಗಿ ಕ್ರಿಕೆಟ್‌ನಿಂದ ದೂರವಿದ್ದರು. ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಕೂಡ ನೆಟ್‌ನಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಅಭ್ಯಾಸದ ವಿಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಕೆಎಲ್ ರಾಹುಲ್ ಅದಕ್ಕೆ ಪೂರಕವಾಗಿ ಸುಂದರ ಅಡಿಬರಹವನ್ನು ನೀಡಿದ್ದಾರೆ. 'ನನ್ನ ಕಿವಿಗಳ ಪಾಲಿನ ಸಂಗೀತ' ಎಂದು ತನ್ನ ಬ್ಯಾಟ್‌ನಿಂದ ಬರುವ ಸದ್ದನ್ನು ವರ್ಣಿಸಿದ್ದಾರೆ. ರಾಹುಲ್ ಅಭಿಮಾನಿಗಳು ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

2021ರ ಐಪಿಎಲ್ ಆಟಗಾರರ ಹರಾಜು ಮುಂದೂಡಲು ಸಿದ್ಧತೆ: ವರದಿ2021ರ ಐಪಿಎಲ್ ಆಟಗಾರರ ಹರಾಜು ಮುಂದೂಡಲು ಸಿದ್ಧತೆ: ವರದಿ

ಕಳೆದ ಕೆಲವೇ ದಿನಗಳ ಹಿಂದೆ ಕೆಎಲ್ ರಾಹುಲ್ ಕ್ರಿಕೆಟ್ ಕಿಟ್‌ಗಳ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು 'ಐ ಮಿಸ್‌ ಯೂ' ಎಂದು ಬರೆದುಕೊಂಡಿದ್ದರು. ಈ ಚಿತ್ರಕ್ಕೂ ರಾಹುಲ್ ಅಭುಮಾನಿಗಳು ಅದ್ಭುತ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಅದಾದ ಬಳಿಕ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆಟಗಾರರ ಫೋಟೋವನ್ನು ಹಂಚಿಕೊಂಡಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ ಕೆಎಲ್ ರಾಹುಲ್ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಹೀಗಾಗಿ ಈ ಜವಾಬ್ಧಾರಿಯೊಂದಿಗೆ ರಾಹುಲ್ ಹೇಗೆ ಐಪಿಎಲ್‌ನಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿ

ರಾಷ್ಟ್ರೀಯ ತಂಡದ ಪರವಾಗಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತವಾಗಿ ಮಿಂಚುತ್ತಿರುವ ಕೆಎಲ್ ರಾಹುಲ್ ಮೇಲೆ ಈ ಬಾರಿಯ ಐಪಿಎಲ್‌ನಲ್ಲಿ ಭಾರೀ ನಿರೀಕ್ಷೆಗಳು ಇವೆ. ಅದಕ್ಕೆ ಪೂರಕವಾಗಿ ಅವರು ಈ ಹಿಂದಿನ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ಕೂಡ ನೀಡಿದ್ದರು. ಅದರಲ್ಲೂ 2018ರ ಆವೃತ್ತಿಯಲ್ಲಿ ರಾಹುಲ್ 14 ಪಂದ್ಯಗಳಲ್ಲಿ 54.91ರ ಸರಾಸರಿಯಲ್ಲಿ 659 ರನ್‌ಗಳಿಸಿದ್ದರು. ಇದರಲ್ಲಿ 6 ಅರ್ಧ ಶತಕ ಹಾಗೂ ಒಂದು ಶತಕ ಸೇರಿತ್ತು. ಕಳೆದ ಬಾರಿಯ ಆವೃತ್ತಿಯಲ್ಲೂ ರಾಹುಲ್ 593 ರನ್‌ಗಳನ್ನು ಬಾರಿಸಿದ್ದರು. ಇದರಲ್ಲೂ ಆರು ಅರ್ಧ ಶತಕಗಳಿದ್ದವು.

Story first published: Tuesday, August 11, 2020, 9:46 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X