ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೈ ತುಂಬಾ ಹಣ ಕೊಡುತ್ತಿದ್ದ ಐಪಿಎಲ್ ಮಿಸ್, ಬಾಂಗ್ಲಾ ವೇಗಿ ಅಳಲು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020 ಋತುವಿನಲ್ಲಿ ಆಡಿ ಕೋಟ್ಯಂತರ ರೂಪಾಯಿ ಗಳಿಸುವ ಕನಸು ಹೊತ್ತಿದ್ದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹಮಾನ್ ಅವರಿಗೆ ನಿರಾಶೆಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂಬೈ ಅಥವಾ ಕೋಲ್ಕತಾ ಪರ ಮುಸ್ತಫಿಜುರ್ ಆಡಬಹುದಾಗಿತ್ತು. ಆದರೆ, ಐಪಿಎಲ್ ನಲ್ಲಿ ಆಡಲು ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅನುಮತಿ ನೀಡಿರಲಿಲ್ಲ

ಬಾಂಗ್ಲಾದೇಶ-ಲಂಕಾ ಪ್ರವಾಸದ ಹಿನ್ನೆಲೆಯಲ್ಲಿ ಐಪಿಎಲ್‌ನಲ್ಲಿ ಆಡಲು ಮುಸ್ತಾಫಿಜುರ್‌ಗೆ ಅನುಮತಿ ಪತ್ರ ನೀಡಲು ಬಿಸಿಬಿ ನಿರಾಕರಿಸಿತ್ತು. ಆದರೆ, ಈಗ ಕೊರೊನಾವೈರಸ್ ಹಿನ್ನೆಲೆಯಲ್ಲಿ ಈಗ ಈಗ ಶ್ರೀಲಂಕಾ ಪ್ರವಾಸವನ್ನೂ ಮುಂದೂಡಲಾಗಿದೆ. ಮುಸ್ತಾಫಿಜುರ್ ಖಾಲಿ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯನ್ನು ಸೃಷ್ಟಿಯಾಗಿದೆ.

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಅವರು ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಳಿ ಮೂರು ಟೆಸ್ಟ್ ಪಂದ್ಯಗಳ ಸರಣ್ಯನ್ನು ಮುಂದೂಡುವಂತೆ ಕೋರಿದ್ದಾರೆ. ಶ್ರೀಲಂಕಾದಲ್ಲಿ 14 ದಿನಗಳ ಕ್ವಾರಂಟೈನ್ ಗೆ ಒಳಗಾಗಲು ಬಾಂಗ್ಲಾ ಕ್ರಿಕೆಟರ್ ಗಳು ಒಪ್ಪದ ಕಾರಣ, ಸರಣಿ ಮುಂದೂಡುವುದು ಅನಿವಾರ್ಯವಾಗಿದೆ.

ಮನೆಯಲ್ಲಿ ಕೂರುವುದು ಅನಿವಾರ್ಯವಾಗಿದೆ

ಮನೆಯಲ್ಲಿ ಕೂರುವುದು ಅನಿವಾರ್ಯವಾಗಿದೆ

ನೀವು ಎಷ್ಟೇ ಕಠಿಣ ತರಬೇತಿ ಪಡೆದುಕೊಂಡಿದ್ದರೂ ನೀವು ಮನೆಯಲ್ಲಿ ಸುಮ್ಮನೆ ಕುಳಿತರೆ ಎಲ್ಲವೂ ವ್ಯರ್ಥವಾಗುತ್ತದೆ. 14 ದಿನಗಳ ಕ್ವಾರಂಟೈನ್ ಅವಧಿಗೆ ಒಳಗಾಗಲು ಆಟಗಾರರು ತಯಾರಿಲ್ಲ. ಅದು ಅಲ್ಲಿನ ಕಾನೂನು, ಈ ಬಗ್ಗೆ ಶ್ರೀಲಂಕಾ ಮಂಡಳಿಯು ಏನು ಮಾಡಲು ಸಾಧ್ಯವಿಲ್ಲ ಎಂದು ಮುಸ್ತಫಿಜುರ್ ಹೇಳಿದ್ದಾರೆ.

1 ಕೋಟಿ ಬಾಂಗ್ಲಾದೇಶ ಟಾಕಾ ಗಳಿಸುತ್ತಿದ್ದೆ

1 ಕೋಟಿ ಬಾಂಗ್ಲಾದೇಶ ಟಾಕಾ ಗಳಿಸುತ್ತಿದ್ದೆ

ಶ್ರೀಲಂಕಾ ಸರಣಿ ಮುಂದೂಡಿಕೆ ಬಗ್ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿಗೆ ಮೊದಲೇ ತಿಳಿದಿದ್ದರೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡಬೇಕಾಗಿತ್ತು. ಕ್ರಿಕೆಟ್ ಮಂಡಳಿ NoC ಇಲ್ಲದೆ ನಾನೇನು ಮಾಡಲಿ, ಐಪಿಎಲ್ ನಲ್ಲಿ ಆಡಿದ್ದರೆ 1 ಕೋಟಿ ಬಾಂಗ್ಲಾದೇಶ ಟಾಕಾ ಗಳಿಸುತ್ತಿದ್ದೆ ಎಂದು ರಹಮಾನ್ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್ ಕೂಡಾ ಮಿಸ್ ಆಗಿತ್ತು

ಪಾಕಿಸ್ತಾನ ಸೂಪರ್ ಲೀಗ್ ಕೂಡಾ ಮಿಸ್ ಆಗಿತ್ತು

2015-16ರಲ್ಲಿ ಗಾಯಗೊಳ್ಳದಿರಲೆಂದು ಮುಸ್ತಫಿಜುರ್ ಅವರಿಗೆ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಆಡಲು ಅನುಮತಿ ನೀಡಿರಲಿಲ್ಲ. ಆದರೆ, ಇದಕ್ಕೆ ಬದಲಾಗಿ ಅವರಿಗೆ 30 ಲಕ್ಷ ಬಾಂಗ್ಲಾದೇಶಿ ಟಾಕಾ ಮೊತ್ತ ಪರಿಹಾರ ನೀಡಲಾಗಿತ್ತು. ಆದರೆ, ಈ ಬಾರಿ ಕ್ರಿಕೆಟ್ ಮಂಡಳಿಯ ನಿರ್ವಹಣಾ ಚೇರ್ಮನ್ ಅಕ್ರಮ್ ಖಾನ್ ಅವರು ಯಾವುದೇ ಪರಿಹಾರ ನೀಡುವ ಬಗ್ಗೆ ಮಾತನಾಡಿಲ್ಲ.

2018 ರಲ್ಲಿ ಐಪಿಎಲ್‌ನಲ್ಲಿ ಆಡಿದ್ದ ಮುಸ್ತಫಿಜುರ್

2018 ರಲ್ಲಿ ಐಪಿಎಲ್‌ನಲ್ಲಿ ಆಡಿದ್ದ ಮುಸ್ತಫಿಜುರ್

ಕೊನೆಯ ಬಾರಿಗೆ 2018 ರಲ್ಲಿ ಐಪಿಎಲ್‌ನಲ್ಲಿ ಆಡಿದ ಮುಸ್ತಫಿಜುರ್ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. ಒಟ್ಟಾರೆ 24 ಪಂದ್ಯಗಳಲ್ಲಿ 24ವಿಕೆಟ್ ಗಳಿಸಿದ್ದಾರೆ. ಆದರೆ, ಗಾಯದಿಂದಾಗಿ ಅವರು ಮಧ್ಯದಲ್ಲೇ ಪಂದ್ಯಾವಳಿಯನ್ನು ತಪ್ಪಿಸಿಕೊಂಡರು. ಈ ಹಿನ್ನೆಲೆಯಲ್ಲಿಯೇ ಕಳೆದ ವರ್ಷವೂ ಐಪಿಎಲ್‌ನಲ್ಲಿ ಆಡಲು ಬಾಂಗ್ಲಾ ಮಂಡಳಿ ನಿರಾಕರಿಸಿತು. ಬಾಂಗ್ಲಾದೇಶಿ ಆಟಗಾರರು ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಿದರೆ ಅನಗತ್ಯವಾಗಿ ಗಾಯಗೊಳ್ಳುತ್ತಾರೆ ಎಂದು ಕ್ರಿಕೆಟ್ ಮಂಡಳಿ ಅನುಮತಿ ನೀಡಲು ನಿರಾಕರಿಸುತ್ತಿದೆ ಎಂಬ ಮಾತಿದೆ.

Story first published: Thursday, October 1, 2020, 10:01 [IST]
Other articles published on Oct 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X