ಅಶ್ವಿನ್ ಹಾಗೂ ಲಿಯಾನ್ ಮಧ್ಯೆ 800 ವಿಕೆಟ್ ತೆಗೆಯಬಲ್ಲ ಬೌಲರ್‌ನನ್ನು ಹೆಸರಿಸಿದ ಮುರಳೀಧರನ್

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ರೋಚಕ ಘಟ್ಟವನ್ನು ತಲುಪಿದ್ದು ವಿಶ್ವದ ಎಲ್ಲಾ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಸೆಳೆದಿದೆ. ಈ ಸಂದರ್ಭದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ದಿಗ್ಗಜ ಬೌಲರ್ ಮುತ್ತಯ್ಯ ಮುರಳೀಧರನ್ ಆಸ್ಟ್ರೇಲಿಯಾ ಹಾಗೂ ಭಾರತದ ಇಬ್ಬರು ಅನುಭವಿ ಸ್ಪಿನ್ನರ್‌ಗಳಲ್ಲಿ ತನ್ನ 800 ವಿಕೆಟ್ ದಾಖಳೆ ಮುರಿಯಬಲ್ಲ ಆಟಗಾರನ ಹೆಸರನ್ನು ಆಯ್ಕೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ 800 ವಿಕೆಟ್ ಪಡೆದ ಏಕೈಕ ಬೌಲರ್ ಮುತ್ತಯ್ಯ ಮುರಳೀಧರನ್ ಎನಿಸಿಕೊಂಡಿದ್ದಾರೆ.2010ರಲ್ಲಿ ಗಾಲೆ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ತನ್ನ ಅಂತಿಮ ಪಂದ್ಯದಲ್ಲಿ ಮುರಳೀಧರನ್ ಪ್ರಗ್ಯಾನ್ ಓಝಾ ವಿಕೆಟ್ ಪಡೆಯುವ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಮಾಡಿದ್ದರು. ವಿಕೆಟ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿರುವ ಶೇನ್ ವಾರ್ನ್ ಮುರಳಿಗಿಂತ 92 ವಿಕೆಟ್‌ಗಳಷ್ಟು ಹಿಂದಿದ್ದಾರೆ.

ಮೆಗಾ ಮಿಲಿಯನ್ ಜಾಕ್‌ಪಾಟ್‌ ಮೌಲ್ಯ ಈಗ 640 ಮಿಲಿಯನ್‌ ಡಾಲರ್‌

ದಿಗ್ಗಜ ಬೌಲರ್ ಮುತ್ತಯ್ಯ ಮುರಳೀಧರನ್ ಪ್ರಕಾರ 800 ವಿಕೆಟ್‌ಗಳ ಸಾಧನೆಯನ್ನು ಮಾಡಬಲ್ಲ ಆಟಗಾರ ಯಾರು? ಮುಂದೆ ಓದಿ

ಆರ್ ಅಶ್ವಿನ್‌ಗೆ ಅವಕಾಶವಿದೆ

ಆರ್ ಅಶ್ವಿನ್‌ಗೆ ಅವಕಾಶವಿದೆ

ಟೀಮ್ ಇಂಡಿಯಾದ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಆಸ್ಟ್ರೇಲಿಯಾದ ಸ್ಮಿನ್ನರ್ ನಥನ್ ಲಿಯಾನ್ ಮಧ್ಯೆ ಆರ್ ಅಶ್ವಿನ್ ತನ್ನ 800 ವಿಕೆಟ್ ದಾಖಲೆಯನ್ನು ಮುರಿಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾಕೆಂದರೆ ಆತನೋರ್ವ ಶ್ರೇಷ್ಠ ಬೌಲರ್. ಆದರೆ ನಥನ್ ಲಿಯಾನ್‌ಗೆ ಅಷ್ಟು ವಿಕೆಟ್ ತೆಗೆಯಬಲ್ಲ ಸಾಮರ್ಥ್ಯವಿಲ್ಲ ಎಂದು ಮುರಳೀಧರನ್ ಅಭಿಪ್ರಾಯಪಟ್ಟಿದ್ದಾರೆ.

ಅಶ್ವಿನ್ ಶ್ರೇಷ್ಠ ಆಟಗಾರ

ಅಶ್ವಿನ್ ಶ್ರೇಷ್ಠ ಆಟಗಾರ

"ಆರ್ ಅಶ್ವಿನ್ 800 ವಿಕೆಟ್ ಕಬಳಿಸುವ ಸಾಧ್ಯತೆಯಿದೆ. ಆತನೋರ್ವ ಶ್ರೇಷ್ಠವಾದ ಬೌಲರ್ ಆಗಿದ್ದಾರೆ. ಆತನನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ 800 ವಿಕೆಟ್ ಪಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಅನಿಸುತ್ತಿಲ್ಲ. ನಥನ್ ಲಿಯಾನ್ ಆ ಗುರಿಯನ್ನು ತಲುಪುವಷ್ಟು ಉತ್ತಮರಾಗಿಲ್ಲ. ಆತ 400 ವಿಕೆಟ್‌ಗೆ(396 ವಿಕೆಟ್) ಸನಿಹದಲ್ಲಿದ್ದಾರೆ. ಆದರೆ ಆ ಗುರಿಯನ್ನು ತಲುಪಲು ಲಿಯಾನ್ ಬಹಳ ಬಹಳ ಪಂದ್ಯಗಳನ್ನು ಆಡಬೇಕಾಗುತ್ತದೆ. ಎಂದು ಮುರಳೀಧರನ್ ಸಿಡ್ನಿ ಮಾರ್ಡನಿಂಗ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ವಿಕೆಟ್ ಪಡೆದ ಸಾಧನೆ

ವಿಕೆಟ್ ಪಡೆದ ಸಾಧನೆ

ಟೀಮ್ ಇಂಡಿಯಾ ಪರವಾಗಿ 32ರ ಹರೆಯದ ಆರ್ ಅಶ್ವಿನ್ 74 ಟೆಸ್ಟ್ ಪಂದ್ಯಗಳನ್ನು ಆಡಿದ್ದು 377 ವಿಕೆಟ್ ಪಡೆದಿದ್ದಾರೆ. ಮತ್ತೊಂದೆಡೆ ನಥನ್ ಲಿಯಾನ್ 99 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಕಣಕ್ಕಿಳಿದಿದ್ದು 396 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ವಿಕೆಟ್ ಪಡೆಯುವುದು ಹಿಂದಿಗಿಂತ ಸುಲಭ

ವಿಕೆಟ್ ಪಡೆಯುವುದು ಹಿಂದಿಗಿಂತ ಸುಲಭ

ಇನ್ನು ಇದೇ ಸಂದರ್ಭದಲ್ಲಿ ಈಗ ಬೌಲರ್‌ಗಳಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವುದು ಸುಲಭವಾಗಿದೆ ಎಂದಿದ್ದಾರೆ. "ಟಿ20 ಕ್ರಿಕೆಟ್‌ನಿಂದಾಗಿ ಈಗ ಆಟದ ರೀತಿ ಬದಲಾಗಿದೆ. ನಾನು ಆಡುತ್ತಿದ್ದಾಗ ಆಟಗಾರರು ತಾಂತ್ರಿಕವಾಗಿ ಅತ್ಯುತ್ತಮರಾಗಿದ್ದರು. ಪಿಚ್‌ಗಳು ಫ್ಲ್ಯಾಟ್ ಆಗಿತ್ತು. ಆದರೆ ಈಗ ಮೂರೇ ದಿನಗಳಲ್ಲಿ ಟೆಸ್ಟ್ ಪಂದ್ಯಗಳು ಮುಕ್ತಾಯ ಕಾಣುತ್ತಿದೆ" ಎಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 14, 2021, 13:17 [IST]
Other articles published on Jan 14, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X