ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆ ಸಂದರ್ಭದಲ್ಲಿ ಒಂದು ಕ್ಷಣವೂ ನನ್ನ ಕುಟುಂಬ ಒಂಟಿಯಾಗಿರಲು ಬಿಟ್ಟಿರಲಿಲ್ಲ: ಮೊಹಮದ್ ಶಮಿ

My Family Ensured I Was Never Alone During The Time I Felt Suicidal: Mohammed Shami

ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮದ್ ಶಮಿ ಕೆಲ ಸಮಯಗಳ ಹಿಂದೆ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದಾಗಿ ಹೇಳಿಕೊಂಡಿದ್ದರು. ಅಂತಾ ಕಠಿಣ ಸಂದರ್ಭದಲ್ಲಿ ಆ ಮನಸ್ಥತಿಯಿಂದ ಹೇಗೆ ಹೊರ ಬಂದರು ಎಂದು ಸ್ವತಃ ಮೊಹಮದ್ ಶಮಿ ಹೇಳಿಕೊಂಡಿದ್ದಾರೆ.

ಮಾನಸಿಕ ಖಿನ್ನತೆಯಂತಾ ಸಮಸ್ಯೆಗೆ ಸಮಸ್ಯೆಗೆ ಒಳಗಾದವರ ಮೇಲೆ ಗಮನಕೊಡುವುದು ಬಹಳ ಮುಖ್ಯ. ಸುಶಾಂತ್ ಸಿಂಗ್ ರಜಪೂತ್ ಅವರಂತಾ ಅದ್ಭುತ ಪ್ರತಿಭೆಯನ್ನು ಇದೇ ಸಮಸ್ಯೆಯಿಂದ ನಾವು ದುರದೃಷ್ಟವಶಾತ್ ಕಳೆದುಕೊಂಡಿದ್ದೇವೆ. ಅವರು ನನ್ನ ಗೆಳೆಯರಾಗಿದ್ದರು. ಅವರ ಸಮಸ್ಯೆಯ ಬಗ್ಗೆ ನನಗೆ ತಿಳಿದಿದ್ದರೆ ನಾನೂ ಅವರ ಜೊತೆಗೆ ಮಾತನಾಡಬಹುದಿತ್ತು ಎಂದಿದ್ದಾರೆ.

'ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ''ಭಾರತ-ಪಾಕ್ ಕ್ರಿಕೆಟಿಗರು ಜೊತೆಯಲ್ಲಿ ಊಟ ಮಾಡಿದ್ದನ್ನು ನೋಡಿದ್ದೇನೆ'

ನನ್ನ ವೈಯಕ್ತಿಕ ಜೀವನದಲ್ಲಿ ನಾನು ಎದುರಿಸಿದ ಅತ್ಯಂತ ಕಠಿಣ ಸಂದರ್ಭದಲ್ಲಿ ನನ್ನ ಕುಟುಂಬ ನನ್ನ ಜೊತಗೆ ನಿಂತಿತ್ತು. ಆ ನಿಕೃಷ್ಟ ಪರಿಸ್ಥಿತಿಯಿಂದ ನನ್ನನ್ನು ಮೇಲಕ್ಕೆತ್ತಿದ್ದು ನನ್ನ ಕುಟುಂಬ. ನನ್ನ ಬಗ್ಗೆ ಕಾಳಜಿಯನ್ನು ವಹಿಸಿ ಆ ಸ್ಥಿತಿಯಿಂದ ಹೋರಾಡಿ ಹೊರಬರಬೇಕೆಂದು ನನಗೆ ಮನವರಿಕೆ ಮಾಡಿಕೊಟ್ಟರು ಎಂದು ಮೊಹಮದ್ ಶಮಿ ಹೇಳಿಕೊಂಡಿದ್ದಾರೆ.

ಕೆಲ ಸಂದರ್ಭಗಳಲ್ಲಿ ನಾನು ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕು ಎಂಬ ಮನಸ್ಥಿತಿಯನ್ನು ಹೊಂದಿದ್ದೆ. ಆದರೆ ನನ್ನ ಕುಟುಂಬ ನನ್ನ ಬಗ್ಗೆ ಸಾಕಷ್ಟು ಗಮನ ನೀಡಿತ್ತು. ನಾನು ಒಬ್ಬಂಟಿಯಾಗಿರದಂತೆ ಎಲ್ಲರೂ ನೀಡಿಕೊಂಡರು. ಪ್ರತೀ ಸಂದರ್ಭದಲ್ಲೂ ಒಬ್ಬರಲ್ಲಾ ಒಬ್ಬರು ನನ್ನ ಜೊತೆಗೇ ಇರುತ್ತಿದ್ದರು, ನನ್ನ ಜೊತೆಗೆ ಮಾತನಾಡುತ್ತಿದ್ದರು ಎಂದು ಮೊಹಮದ್ ಶಮಿ ತಿಳಿಸಿದ್ದಾರೆ.

ಭಾರತ, ದ.ಆಫ್ರಿಕಾ ವಿರುದ್ಧ ಪಂದ್ಯ: ಮೈದಾನಕ್ಕಿಳಿಯಲಿದೆ ಆಂಗ್ಲ ಮಹಿಳಾ ತಂಡಭಾರತ, ದ.ಆಫ್ರಿಕಾ ವಿರುದ್ಧ ಪಂದ್ಯ: ಮೈದಾನಕ್ಕಿಳಿಯಲಿದೆ ಆಂಗ್ಲ ಮಹಿಳಾ ತಂಡ

ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ತಂಡ ತನ್ನ ಕಠಿಣ ಸಂದರ್ಭದಲ್ಲಿ ತನಗೆ ಬೆಂಬಲವಾಗಿತ್ತು ಎಂದು ಶಮಿ ಸ್ಮರಿಸಿಕೊಂಡಿದ್ದಾರೆ. ತಂಡದ ನಾಯಕ ಕೊಹ್ಲಿ ಸೇರಿದಂತೆ ಎಲ್ಲರೂ ನನಗೆ ಬೆಂಬವಾಗಿದ್ದರು. ತಂಡದ ಸಹ ಆಟಗಾರರು ನನ್ನಲ್ಲಿದ್ದ ಕೋಪ ಮತ್ತು ಹತಾಶೆಯನ್ನು ಮೈದಾನದಲ್ಲಿ ಪ್ರದರ್ಶನದ ಮೂಲಕ ಹೊರಹಾಕಲು ಪ್ರೋತ್ಸಾಹಿಸಿದರು. ಆದರೆ ಈಗ ಆ ಹಂತದಿಂದ ಹೊರಬಂದಿದ್ದೇನೆ ಎಂದು ಶಮಿ ಪ್ರತಿಕ್ರಿಯಿಸಿದ್ದಾರೆ.

Story first published: Friday, June 19, 2020, 17:38 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X