ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂದೆಯ ಕನಸನ್ನು ಪೂರೈಸಲು ತಂಡದ ಜೊತೆಗೆ ಉಳಿದುಕೋ: ತಾಯಿಯ ಮಾತು ನೆನಪಿಸಿದ ಸಿರಾಜ್

My mother told me to stay in Australia: Siraj on coping up with fathers loss

ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಕಳೆದ ಶುಕ್ರವಾರ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಈ ಆಘಾತದ ಮಧ್ಯೆಯೂ ಸಿರಾಜ್ ತವರಿಗೆ ಮರಳದೆ ತಂಡದ ಜೊತೆಯಲ್ಲಿ ಉಳಿದುಕೊಲ್ಳುವ ನಿರ್ಧಾರವನ್ನು ಮಾಡಿದ್ದರು. ತನ್ನ ಈ ನಿರ್ಧಾರಕ್ಕೆ ತಾಯಿ ಹೆಳಿದ ಮಾತೇ ಕಾರಣ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಮೊಹಮ್ಮದ್ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ನಿಧನರಾದ ಬಳಿಕ ತಾಯಿಯ ಜೊತೆಗೆ ಸಿರಾಜ್ ಮಾತಾನಾಡಿದ್ದರು. ಈ ಸಂದರ್ಭದಲ್ಲಿ ತಂದೆಯ ಕನಸನ್ನು ಈಡೇರಿಸಲು ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳುವಂತೆ ತಾಯಿ ಹೇಳಿದ್ದರು. ಈ ಮಾತಿನಂತೆ ಸಿರಾಜ್ ತಂಡದ ಜೊತೆಗೆ ಉಳಿದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

30 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ WWE ಸ್ಟಾರ್ ‌ಟೇಕರ್30 ವರ್ಷಗಳ ವೃತ್ತಿ ಬದುಕಿಗೆ ವಿದಾಯ ಹೇಳಿದ WWE ಸ್ಟಾರ್ ‌ಟೇಕರ್

ತಂದೆಯೇ ನನಗೆ ಅತಿದೊಡ್ಡ ಬೆಂಬಲ

ತಂದೆಯೇ ನನಗೆ ಅತಿದೊಡ್ಡ ಬೆಂಬಲ

ಬಿಸಿಸಿಐನ ವಿಡಿಯೋ ಸಂದೇಶದಲ್ಲಿ ಮೊಹಮ್ಮದ್ ಸಿರಾಜ್ ಮಾತನಾಡಿದ್ದಾರೆ. "ನನ್ನ ತಂದೆ ನನಗೆ ಅತಿದೊಡ್ಡ ಬೆಂಬಲವಾಗಿದ್ದರು. ಇದು ನನಗಾದ ಅತ್ಯಂತ ದೊಡ್ಡ ನಷ್ಟ. ನಾನು ಭಾರತ ತಂಡದ ಪರವಾಗಿ ಆಡುವುದನ್ನು ನೋಡುವ ಕನಸು ಕಂಡಿದ್ದರು. ಅವರ ಕನಸನ್ನು ಈಡೇರಿಸುವುದು ನನ್ನ ಆದ್ಯತೆ. ನನ್ನ ತಂದೆ ಜಗತ್ತಿನಲ್ಲಿ ಈಗ ಇಲ್ಲ. ಆದರೆ ಅವರ ನನ್ನೊಳಗೆ ಎಂದಿಗೂ ಇದ್ದಾರೆ" ಎಂದು ಸಿರಾಜ್ ಹೇಳಿದ್ದಾರೆ.

ತಂದೆಯ ಕನಸನ್ನು ತಾಯ ನೆನಪಿಸಿದರು

ತಂದೆಯ ಕನಸನ್ನು ತಾಯ ನೆನಪಿಸಿದರು

"ನನ್ನ ತಾಯಿ ನನಗೆ ತಂದೆಯ ಕನಸನ್ನು ನೆನಪಿಸಿದರು. ಅವರು ತಂಡದ ಜೊತೆಯಲ್ಲೇ ಉಳಿದುಕೊಂಡು ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡಲು ತಿಳಿಸಿದರು. ಹಾಗೂ ನನ್ನ ತಂದೆಯ ಕನಸನ್ನು ಈಡೇರಿಸುವಂತೆ ಹೇಳಿದರು ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.

ತಂಡದ ಸದಸ್ಯರ ಬೆಂಬಲ

ತಂಡದ ಸದಸ್ಯರ ಬೆಂಬಲ

ಇನ್ನು ಇದೇ ಸಂದರ್ಭದಲ್ಲಿ ಸಿರಾಜ್ ಈ ಕಠಿಣ ಸಂದರ್ಭದಲ್ಲಿ ತಂಡದ ಸದಸ್ಯರಿಂದ ದೊರೆತ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ."ನನ್ನ ತಂಡದ ಸದಸ್ಯರು ನನಗೆ ತುಂಬಾ ಬೆಂಬಲವನ್ನು ನೀಡಿದ್ದಾರೆ. ಇಲ್ಲಿ ನನಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನನಗೆ ಬೆಂಬಲವನ್ನು ನೀಡಿದ್ದಾರೆ. ಬಲಿಷ್ಠನಾಗಿದ್ದು ತಂದೆಯ ಕನಸನ್ನು ಈಡೇರಿಸಲು ಗುರಿಯನ್ನು ಹೊಂದು ಎಂದು ಕೊಹ್ಲಿ ಆತ್ಮವಿಶ್ವಾಸವನ್ನು ತುಂಬಿದ್ದಾರೆ" ಎಂದು ಸಿರಾಜ್ ಹೇಳಿದ್ದಾರೆ.

ತವರಿಗೆ ಮರಳುವ ಅವಕಾಶ ನೀಡಿತ್ತು ಬಿಸಿಸಿಐ

ತವರಿಗೆ ಮರಳುವ ಅವಕಾಶ ನೀಡಿತ್ತು ಬಿಸಿಸಿಐ

ಇದಕ್ಕೂ ಮುನ್ನ ಬಿಸಿಸಿಐ ಕೂಡ ಸಿರಾಜ್ ಅವರ ನಿರ್ಧಾರದ ಬಗ್ಗೆ ಸ್ಪಷ್ಟನೆಯೊಂದನ್ನು ನೀಡಿತ್ತು. ಸಿರಾಜ್ ತಂದೆಯ ಅಗಲಿಕೆಯ ಬಳಿಕ ಕುಟುಂಬವನ್ನು ಸೇರಿಕೊಳ್ಳಲು ಸಿರಾಜ್‌ಗೆ ಅವಕಾಶವನ್ನು ನೀಡಲಾಗಿತ್ತು. ಆದರೆ ಆತ ತಂಡದ ಜೊತೆಗೆ ಮುಂದುವರಿಯಲು ನಿರ್ಧರಿಸಿದ್ದರು ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

Story first published: Tuesday, November 24, 2020, 9:51 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X