ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಅದ್ಭುತ ಪ್ರದರ್ಶನಕ್ಕೆ ಅದೊಂದೇ ಕಾರಣ ಎಂದ ರಾಹುಲ್ ತೆವಾಟಿಯಾ

My Performance A Reflection Of Smith And Teams Faith In Me- Rahul Tewatia

ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಯಾರೂ ಊಹಿಸದ ರೀತಿ ತಿರುಗಿ ಬಿದ್ದು ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದು ರಾಹುಲ್ ತೆವಾಟಿಯಾ. ತಂಡಕ್ಕೆ ವಿಲನ್ ಆಗುತ್ತಿದ್ದ ರಾಹುಲ್ ಬಳಿಕ ತಂಡದ ಪಾಲಿಗೆ ಆಪಾತ್ಬಾಂಧವನಾಗಿ ಗೆಲ್ಲಿಸುವ ಮೂಲಕ ಹೀರೋ ಆಗಿ ಮಿಂಚಿದರು. ತನ್ನ ಈ ಪ್ರದರ್ಶನಕ್ಕೆ ನಾಯಕ ಸ್ಮಿತ್ ಹಾಗೂ ತಂಡದ ಬೆಂಬಲವೇ ಕಾರಣ ಎಂದು ರಾಹುಲ್ ತೆವಾಟಿಯಾ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ಮ್ಯಾನೇಜ್‌ಮೆಂಟ್ ನನ್ನ ಮೇಲೆ ನಂಬಿಕೆಯನ್ನು ಇಟ್ಟಿತ್ತು. ಆ ಪರಿಶುದ್ಧ ನಂಬಿಕೆಯ ಕಾರಣದಿಂದಾಗಿ ನಾನು ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧ ಅಂತಿಮ ಹಂತದಲ್ಲಿ ಉತ್ತಮ ಪ್ರದರ್ಶನ ನಿಡಿ ಗೆಲ್ಲಲಿ ಕಾರಣವಾಯಿತು ಎಂದು ರಾಹುಲ್ ತೆವಾಟಿಯಾ ಹೇಳಿದ್ದಾರೆ.

IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್IPL 2020: ರಾಹುಲ್ ತೆವಾಟಿಯಾಗೆ ಬಡ್ತಿ ನೀಡಿದ್ದು ಏಕೆ? ಕಾರಣ ತಿಳಿಸಿದ ಸಂಜು ಸ್ಯಾಮ್ಸನ್

ನಾಯಕ ಸ್ಟೀವ್ ಸ್ಮಿತ್ ಹಾಗೂ ರಾಜಸ್ಥಾನ್ ರಾಯಲ್ಸ್ ಮ್ಯಾನೇಜ್‌ಮೆಂಟ್ ನನ್ನನ್ನು 'ಗೇಮ್ ಚೇಂಜರ್' ಎಂದು ಕರೆದಿದ್ದರು. ಹೀಗಾಗಿ ನನ್ನ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿತ್ತು ತಂಡ. ಹೀಗಾಗಿ ಇಡೀ ತಂಡ ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ನಾನು ಉಳಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಇಡೀ ತಂಡ ಹಾಗೂ ಸ್ಮಿತ್ ತರಹದ ನಾಯಕ ನಿಮ್ಮ ಬೆಂಬಲಕ್ಕಿದ್ದಾರೆ ಎಂದರೆ ಅಲ್ಲಿಗೆ ಅರ್ಧ ಕರ್ತವ್ಯ ಮುಗಿದಂತೆಯೇ ಅರ್ಥ. ಆರ್‌ಆರ್‌ ಕುಟುಂಬದಲ್ಲಿ ನಾನು ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ತೆವಾಟಿಯಾ ಹೇಳಿದ್ದಾರೆ.

ಆದರೆ ರಾಹುಲ್ ತೆವಾಟಿಯಾ ಆರಂಭದಲ್ಲಿ ರನ್ ಗಳಿಸಲು ಸಾಕಷ್ಟು ತಿಣುಕಾಟವನ್ನು ನಡೆಸಿದ್ದರು. ಅದಾಗಲೇ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ತೆವಾಟಿಯಾ ವಿರುದ್ಧ ಟ್ರೋಲ್‌ಗಳು ಆರಂಭವಾಗಿದ್ದವು. ಬಳಿಕ ರಾಹುಲ್ ತೆವಾಟಿಯಾ ತನ್ನ ಆಟದ ನೈಜ ಪ್ರದರ್ಶನವನ್ನು ತೋರಲು ಆರಂಭಿಸಿದ್ದರು.

ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!ಸುಲಭವಾಗಿ ಸಿಕ್ಸರ್ ಸಿಡಿಸುವ ಸಂಜು ಸ್ಯಾಮ್ಸನ್ ತಾಕತ್ತಿನ ಗುಟ್ಟು..!

"ಅನುಮಾನವೇ ಇಲ್ಲ, ನಾನು ಆರಮಭದಲಲ್ಇ ಸಾಕಷ್ಟು ಪರದಾಟವನ್ನು ನಡೆಸಿದೆ. ಆದರೆ ಒಂದು ಉತ್ತಮ ಹೊಡೆತಕ್ಕಿಂತ ನಾನು ಹಿಂದಿದ್ದೇನೆ ಎಂಬುದು ನನ್ನಲ್ಲಿ ಸ್ಪಷ್ಟವಾಗಿತ್ತು. ಒಂದು ಸಿಕ್ಸರ್ ಬಾರಿಸಿದ ಬಳಿಕ ನನಗೆ ಹಿಡಿತ ದೊರೆತಂತೆ ಭಾಸವಾಯಿತು. ಕೆಲ ಸಿಕ್ಸರ್‌ಗಳು ನಾವು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಲು ಸಾಕಾಗುತ್ತದೆ ಎಂಬುದು ನನ್ನ ಮನದಲ್ಲಿತ್ತು" ಎಂದು ರಾಹುಲ್ ತಿವಾಟಿಯಾ ತನ್ನ ಪ್ರದರ್ಶನದ ಬಗ್ಗೆ ವಿವರಿಸಿದ್ದಾರೆ.

Story first published: Tuesday, September 29, 2020, 10:13 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X