ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಮೈಖೇಲ್‌ ಕನಸಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ?

ICC World Cup 2019 : ಮುಗಿಯುತ್ತಾ ಕೊಹ್ಲಿ, ಧೋನಿ ಅಧ್ಯಾಯ..? | virat kohli | Oneindia Kannada
Mykhels Dream Team of ICC Cricket World Cup 2019

ಬೆಂಗಳೂರು, ಜುಲೈ 15: ಕ್ರಿಕೆಟ್ ಜನಕರ ನಾಡಲ್ಲೆ ಮೇ 30ರಿಂದ ಜುಲೈ 14ರವರೆಗೆ ನಡೆದ ಐಸಿಸಿ ಏಕದಿನ ಕ್ರಿಕೆಟ್ದ್ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯು ಹಿಂದೆಂದು ಕೇಳರಿಯದ ರೀತಿಯಲ್ಲಿ ಅದ್ಭುತ ಫೈನಲ್‌ನೊಂದಿಗೆ ಅಂತ್ಯಗೊಂಡಿದೆ.

ಕ್ರಿಕೆಟ್‌ ಪಂಡಿತರ ಲೆಕ್ಕಾಚಾರದಂತೆ ನೆಚ್ಚಿನ ತಂಡಗಳಾದ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಆತಿಥೇಯ ಇಂಗ್ಲೆಂಡ್‌ ತಂಡಗಳು ಸೆಮಿಫೈನಲ್‌ ತಲುಪಿದವು. ಅಂತೆಯೇ ರೋಚಕ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೂಪರ್‌ ಟೈ ಮೂಲಕ ಬೌಂಡರಿಗಳ ಸಂಖ್ಯೆ ಆಧಾರದ ಮೇರೆಗೆ ಗೆದ್ದ ಇಂಗ್ಲೆಂಡ್‌ 44 ವರ್ಷದಗಳ ವಿಶ್ವಕಪ್‌ ಇತಿಹಾಸದಲ್ಲಿ ಮೊದಲ ಬಾರಿ ಚಾಂಪಿಯನ್‌ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿತು.

ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ 2019: ಕೇನ್‌ ವಿಲಿಯಮ್ಸನ್‌ ಎಂಬ ಅದ್ಭುತ!

ಟೂರ್ನಿಯಲ್ಲಿ ಅತ್ಯಂತ ವಿಭಿನ್ನ ರೀತಿಯಲ್ಲಿ ಇಂಗ್ಲೆಂಡ್‌ ಚಾಂಪಿಯನ್ಸ್‌ ಪಟ್ಟಕ್ಕೇರಿದರೆ, ಟೀಮ್‌ ಇಂಡಿಯಾ ಆಡಿದ 10 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನಷ್ಟೇ ಸೋತರೂ ಸ್ಪರ್ಧೆಯಿಂದ ಹೊರಬಿದ್ದಿತು. ಇನ್ನು ನ್ಯೂಜಿಲೆಂಡ್‌ ತಂಡ ಸಮ ಬಲ ಸಾಧಿಸಿದರೂ ಬೌಂಡರಿಗಳ ಸಂಖ್ಯೆಯಲ್ಲಿ ಹಿಂದೆ ಬಿದ್ದು ವಿಶ್ವಕಪ್‌ ಗೆಲ್ಲುವ ಅವಕಾಶದಿಂದ ವಂಚಿತವಾಯಿತು.

ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!

ಇದೀಗ ಟೂರ್ನಿಯು ಇತಿಹಾಸ ಪುಟ ಸೇರಿಯಾಗಿದೆ. ಈ ಸಂದರ್ಭದಲ್ಲಿ ವಿಶ್ವಕಪ್‌ ವೇದಿಕೆಯಲ್ಲಿ ಈ ಬಾರಿ ಕ್ರಿಕೆಟ್‌ ಪ್ರಿಯರನ್ನು ಭರಪೂರ ರಂಜಿಸಿದ ಆಟಗಾರರನ್ನು ಒಳಗೊಂಡ ಕನಸಿನ ತಂಡವೊಂದನ್ನು ಮೈಖೇಲ್‌ ಕನ್ನಡ ರಚಿಸಿದೆ. ಅಲ್ಲದೆ ಟೂರ್ನಿಯ ನೆಚ್ಚಿನ ನಾಯಕನನ್ನು ಕೂಡ ಆಯ್ಕೆ ಮಾಡಲಾಗಿದೆ. ಓದುಗರು ಕೂಡ ತಮ್ಮ ನೆಚ್ಚಿನ ಹಾಗೂ ಕನಸಿನ 11 ಆಟಗಾರರ ತಂಡವನ್ನು ಕಾಮೆಂಟ್‌ ಮೂಲಕ ತಿಳಿಸಬಹುದಾಗಿದೆ.

ನಮ್ಮ ತಂಡಕ್ಕೆ ಅಲ್ಲಾ ಬೆಂಬಲವಿತ್ತು ಎಂದ ಇಂಗ್ಲೆಂಡ್‌ ನಾಯಕ ಮಾರ್ಗನ್‌ನಮ್ಮ ತಂಡಕ್ಕೆ ಅಲ್ಲಾ ಬೆಂಬಲವಿತ್ತು ಎಂದ ಇಂಗ್ಲೆಂಡ್‌ ನಾಯಕ ಮಾರ್ಗನ್‌

ಇದೇ ವೇಳೆ ಐಸಿಸಿ ಕೂಡ ತನ್ನ ಕನಸಿನ ತಂಡವನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ರೋಹಿತ್‌ ಮತ್ತು ಬುಮ್ರಾ ಸ್ಥಾನ ಪಡೆ ಭಾರತೀಯರಾಗಿದ್ದಾರೆ.

ಮೈಖೇಲ್‌ ಕನ್ನಡದ ಡ್ರೀಮ್‌ ಟೀಮ್‌ ಹೀಗಿದೆ (ಬ್ಯಾಟಿಂಗ್‌ ಕ್ರಮಾಂಕದ ಅನುಗುಣವಾಗಿ)

1. ರೋಹಿತ್‌ ಶರ್ಮಾ (ಭಾರತ, ಓಪನರ್‌)

1. ರೋಹಿತ್‌ ಶರ್ಮಾ (ಭಾರತ, ಓಪನರ್‌)

ಹನ್ನೆರಡನೇ ಆವೃತ್ತಿಯ ವಿಶ್ವಕಪ್‌ನಲ್ಲಿ ರನ್‌ ಹೊಳೆಯನ್ನೇ ಹರಿಸಿದ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಹಲವು ದಾಖಲೆಗಳನ್ನು ನುಚ್ಚು ನೂರು ಮಾಡಿದರು. ಅಂದಹಾಗೆ ಒಂದೇ ಆವೃತ್ತಿಯಲ್ಲಿ 5 ಶತಕಗಳನ್ನು ಸಿಡಿಸಿದ ವಿಶ್ವದ ಏಕಮಾತ್ರ ಆಟಗಾರ ಎಂಬ ವಿಶ್ವ ದಾಖಲೆಯನ್ನು ಮುಡಿಗೇರಿಸಿಕೊಂಡ 'ಹಿಟ್‌ಮ್ಯಾನ್‌' ಖ್ಯಾತಿಯ ರೋಹಿತ್‌, ಟೂರ್ನಿಯಲ್ಲಿ ಅತಿ ಹೆಚ್ಚು (648) ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌. ಹೀಗಾಗಿ ಸಹಜವಾಗಿಯೇ ರೋಹಿತ್‌ ನಮ್ಮ ಹಾಗೂ ಎಲ್ಲರ ಅಚ್ಚು ಮೆಚ್ಚಿನ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಸ್ಥಾನ ಪಡೆದುಕೊಳ್ಳುತ್ತಾರೆ.

2. ಜೇಸನ್‌ ರಾಯ್‌ (ಇಂಗ್ಲೆಂಡ್‌, ಓಪನರ್‌)

2. ಜೇಸನ್‌ ರಾಯ್‌ (ಇಂಗ್ಲೆಂಡ್‌, ಓಪನರ್‌)

ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಇಂಗ್ಲೆಂಡ್‌ ಯಶಸ್ಸಿನ ಹಿಂದಿರುವ ಪ್ರಮುಖ ಕೈಗಳಲ್ಲಿ ಒಬ್ಬರಾಗಿದ್ದಾರೆ. ರಾಯ್‌ ತಂಡದ ಮೇಲೆ ಎಷ್ಟು ಪ್ರಭಾವ ಬೀರಬಲ್ಲರು ಎಂದರೆ ಗಾಯದ ಸಮಸ್ಯೆ ಕಾರಣ ಅವರು ಹೊರಗುಳಿದ ಸಂದರ್ಭದಲ್ಲಿ ಇಂಗ್ಲೆಂಡ್‌ ತಂಡ ಸತತ ಸೋಲಿನ ಆಘಾತಕ್ಕೆ ಒಳಗಾಗಿತ್ತು. ಆದರೆ, ಆರಂಭಿಕರಾಗಿ ರಾಯ್‌ ಮಿಂಚಿದಾಗಲೆಲ್ಲಾ ಇಂಗ್ಲೆಂಡ್‌ ಯಸಸ್ಸಿನ ಹೆಜ್ಜೆ ಇಟ್ಟಿದೆ. ಹೀಗಾಗಿ ರೋಹಿತ್ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಲು ಜೇಸನ್ ರಾಯ್‌ ಅತ್ಯುತ್ತಮ ಆಯ್ಕೆಯಾಗಿದ್ದಾರೆ. ರಾಯ್‌ ಟೂರ್ನಿಯಲ್ಲಿ ಆಡಿದ 7 ಇನಿಂಗ್ಸ್‌ಗಳಿಂದ ಒಟ್ಟು 443 ರನ್‌ಗಳನ್ನು ಚೆಚ್ಚಿದ್ದಾರೆ.

3. ಕೇನ್‌ ವಿಲಿಯಮ್ಸನ್‌ (ನಾಯಕ, ನ್ಯೂಜಿಲೆಂಡ್‌)

3. ಕೇನ್‌ ವಿಲಿಯಮ್ಸನ್‌ (ನಾಯಕ, ನ್ಯೂಜಿಲೆಂಡ್‌)

ಮೂರನೇ ಕ್ರಮಾಂಕದ ಬ್ಯಾಟಿಂಗ್‌ ಕುರಿತಾಗಿ ಮಾತನಾಡುವುದಾದರೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವನ್ನು ಕಣ್ಮುಚ್ಚಿಕೊಂಡು ಈ ಜಾಗದಲ್ಲಿ ಕೂರಿಸಬಹುದು. ಆದರೆ, ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿನ ಪ್ರದರ್ಶನ ಗಮನಿಸಿ ಆಯ್ಕೆ ಮಾಡುವುದಾದರೆ ಕಿವೀಸ್‌ ನಾಯಕ ಕೇನ್‌ ವಿಲಿಯಮ್ಸನ್‌ ಈ ಜಾಗ ತಮ್ಮದಾಗಿಸಿಕೊಳ್ಳುತ್ತಾರೆ. ಬ್ಯಾಟಿಂಗ್‌ನಲ್ಲಿ 578 ರನ್‌ಗಳನ್ನು ಚೆಚ್ಚಿ ಟೂರ್ನಿ ಶ್ರೇಷ್ಠ ಆಟಗಾರ ಎನಿಸಿದ್ದ ಕೇನ್‌, ಒಬ್ಬ ನಾಯಕನಾಗಿಯೂ ಎಲ್ಲರ ಮನ ಗೆದ್ದಿದ್ದಾರೆ. ಜಾಗತಿಕ ಕ್ರಿಕೆಟ್‌ನ "ನೂತನ ಕ್ಯಾಪ್ಟನ್‌ ಕೂಲ್‌" ಕೇನ್‌ ವಿಲಿಯಮ್ಸನ್‌ ಎಂದರೆ ತಪ್ಪಾಗಲಾರದು. ಮೈಖೇಲ್‌ ಕನ್ನಡದ ಕನಸಿನ ತಂಡಕ್ಕೂ ಕೇನ್‌ ಅವರೇ ಕಪ್ತಾನ.

4. ಶಾಕಿಬ್‌ ಅಲ್‌ ಹಸನ್‌ (ಪರ್ಫೆಕ್ಟ್‌ ಆಲ್‌ರೌಂಡರ್‌)

4. ಶಾಕಿಬ್‌ ಅಲ್‌ ಹಸನ್‌ (ಪರ್ಫೆಕ್ಟ್‌ ಆಲ್‌ರೌಂಡರ್‌)

ಯಾವುದೇ ತಂಡವೊಂದರಲ್ಲಿ ಬ್ಯಾಟ್‌ ಮತ್ತು ಬಾಲ್‌ ಎರಡರಲ್ಲೂ ಪರಿಣಾಮಕಾರಿ ಕೊಡುಗೆ ಸಲ್ಲಿಸುವ ಆಟಗಾರನೊಬ್ಬನ ಅಗತ್ಯ ಇರುತ್ತದೆ. ಈ ಸ್ಥಾನಕ್ಕೆ ಬಾಂಗ್ಲಾದೇಶದ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌ ಹೊರತಾಗಿ ಬೇರಾವ ಆಟಗಾರನನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಇನ್ನು ಟೂರ್ನಿಯುದ್ದಕ್ಕೂ ಟೀಮ್‌ ಇಂಡಿಯಾಗೆ ಕಾಡಿದ್ದು ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ನ ಕೊರತೆ. ಶಾಕಿಬ್‌ ಅವರಂತಹ ಗುಣಮಟ್ಟದ ಆಟಗಾರ ಇದ್ದರೆ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲಕ್ಕೆ ಆಸ್ಪದವೇ ಇರುವುದಿಲ್ಲ. ಶಾಕಿಬ್‌, ಆಡಿದ 8 ಪಂದ್ಯಗಳಲ್ಲಿ 606 ರನ್‌ಗಳನ್ನು ಗಳಿಸಿದ್ದಾರೆ ಅಲ್ಲದೆ 12 ವಿಕೆಟ್‌ಗಳನ್ನೂ ಉರುಳಿಸಿ ಮ್ಯಾಚ್‌ ವಿನ್ನರ್‌ ಎನಿಸಿದ್ದಾರೆ.

5. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌, ಇಂಗ್ಲೆಂಡ್‌)

5. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌, ಇಂಗ್ಲೆಂಡ್‌)

ಈ ಬಾರಿಯ ವಿಶ್ವಕಪ್‌ ಆಲ್‌ರೌಂಡರ್‌ಗಳದ್ದು ಎಂದೇ ಕ್ರಿಕೆಟ್‌ ಪರಿಣತರು ಟೂರ್ನಿ ಆರಂಭಕ್ಕೂ ಮೊದಲು ಭವಿಷ್ಯ ನುಡಿದಿದ್ದರು. ಅಂತೆಯೇ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಪಂದ್ಯ ಗೆದ್ದುಕೊಟ್ಟಿದ್ದು ಕೂಡ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌. ಬ್ಯಾಟಿಂಗ್‌ನಲ್ಲಿ ಹಲವು ಬಾರಿ ಇಂಗ್ಲೆಂಡ್‌ಗೆ ಆಸರೆಯಾಗಿ ನಿಂತ ಸ್ಟೋಕ್ಸ್‌, ತಮ್ಮ ವೇಗದ ಬೌಲಿಂಗ್‌ ಮೂಲಕವೂ ಅಷ್ಟೇ ಪರಿಣಾಮಕಾರಿ ಕೊಡುಗೆ ನೀಡಬಲ್ಲ ಸ್ಟಾರ್‌ ಆಟಗಾರ. ಸ್ಟೋಕ್ಸ್‌ ಅವರಂತಹ ಫಾಸ್ಟ್‌ ಬೌಲಿಂಗ್‌ ಹಾಗೂ ಲೆಫ್ಟ್‌ ಹ್ಯಾಂಡ್‌ ಬ್ಯಾಟ್ಸ್‌ಮನ್‌ನ ಅಗತ್ಯ ಪ್ರತಿಯೊಂಡು ತಂಡಕ್ಕೆ ಇದ್ದೇ ಇದೆ.

6. ಜೇಮ್ಸ್‌ ನೀಶಮ್‌ (ಆಲ್‌ರೌಂಡರ್‌, ನ್ಯೂಜಿಲೆಂಡ್‌)

6. ಜೇಮ್ಸ್‌ ನೀಶಮ್‌ (ಆಲ್‌ರೌಂಡರ್‌, ನ್ಯೂಜಿಲೆಂಡ್‌)

ಮಧ್ಯಮ ಕ್ರಮಾಂಕದಲ್ಲಿ ಪ್ರತಿಯೊಂದು ತಂಡಕ್ಕೂ ಒಬ್ಬ ಉತ್ತಮ ಫಿನಿಷರ್‌ನ ಅಗತ್ಯವಿರುತ್ತದೆ. ಅಂತೆಯೇ ಆ ಆಟಗಾರ ಬೌಲಿಂಗ್‌ನಲ್ಲೂ ಕೊಡುಗೆ ನೀಡಬಲ್ಲವನಾಗಿದ್ದರು ಅದು ತಂಡಕ್ಕೆ ವರದಾನವೇ ಸರಿ. ಈ ನಿಟ್ಟಿನಲ್ಲಿ ನ್ಯೂಜಿಲೆಂಡ್‌ನ ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಬಲಗೈ ಮಧ್ಯಮ ವೇಗಿ ಜಿಮ್ಮಿ ನೀಶಮ್‌ ಅತ್ಯುತ್ತಮ ಆಯ್ಕೆ ಎನಿಸಿಕೊಳ್ಳುತ್ತಾರೆ. ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಹೊಡೆತಗಳನ್ನು ಆಡುವ ಎಡಗೈ ಬ್ಯಾಟ್ಸ್‌ಮನ್‌ ಇದ್ದರೆ ಅದು ತಂಡಕ್ಕೆ ಪ್ಲಸ್‌ ಪಾಯಿಂಟ್‌.

7. ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌, ಆಸ್ಟ್ರೇಲಿಯಾ)

7. ಅಲೆಕ್ಸ್‌ ಕ್ಯಾರಿ (ವಿಕೆಟ್‌ಕೀಪರ್‌, ಆಸ್ಟ್ರೇಲಿಯಾ)

ವಿಕೆಟ್‌ಕೀಪಿಂಗ್‌ ಕುರಿತಾಗಿ ಮಾತನಾಡುವುದಾದರೆ ಟೀಮ್‌ ಇಂಡಿಯಾದ ಎಂ.ಎಸ್‌ ಧೋನಿ ಅವರನ್ನು ಮೀರಿಸುವ ಆಟಗಾರ ಮತ್ತೊಬ್ಬ ಆಟಗಾರ ಈವರೆಗೆ ಬಂದಿಲ್ಲ ಎಂದೇ ಹೇಳಬಹುದು. ಆದರೆ, ಧೋನಿ ಈ ಬಾರಿ ವಿಕೆಟ್‌ ಕೀಪಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಅಷ್ಟು ಗಮನಾರ್ಹ ಪ್ರದರ್ಶನ ನೀಡಿಲ್ಲ. ಇಂಗ್ಲೆಂಡ್‌ ಜೋಸ್‌ ಬಟ್ಲರ್‌ ಎರಡರಲ್ಲೂ ಮಿಂಚಿದ್ದಾರೆ. ಆದರೆ, ಎಲ್ಲರಿಗಿಂತಲೂ ಮಿಗಿಲಾಗಿ ಅಚ್ಚರಿಯ ರೀತಿಯಲ್ಲಿ ಆಸ್ಟ್ರೇಲಿಯಾ ಪರ ಹೊಸ ತಾರೆಯಾಗಿ ಮೂಡಿ ಬಂದ ಅಲೆಕ್ಸ್‌ ಕೇರಿ ಅವರಿಗೆ ಮೈಖೈಲ್‌ ಕನಸಿನ ತಂಡದಲ್ಲಿ ವಿಕೆಟ್‌ಕೀಪರ್‌ ಆಗಿ ಆಯ್ಕೆ ಮಾಡಲಾಗಿದೆ. ಸೆಮಿಫೈನಲ್‌ ಪಂದ್ಯದಲ್ಲಿ ಚೆಂಡು ಗಲ್ಲಕ್ಕೆ ಬಿದ್ದು ರಕ್ತ ಹರಿದರೂ ಲೆಕ್ಕಿಸದೆ ರನ್‌ ಗಳಿಸಿದ ಅಲೆಕ್ಸ್‌ ಕೇರಿ ತಂಡಕ್ಕಾಗಿ ಸರ್ವವನ್ನೂ ಪಣಕ್ಕಿಟ್ಟು ಆಡಬಲ್ಲ ಆಟಗಾರ ಎಂಬುದನ್ನು ಸಾಬೀತು ಪಡಿಸಿದರು.

8. ಮಿಚೆಲ್‌ ಸ್ಟಾರ್ಕ್‌ (ಎಡಗೈ ವೇಗಿ, ಆಸ್ಟ್ರೇಲಿಯಾ)

8. ಮಿಚೆಲ್‌ ಸ್ಟಾರ್ಕ್‌ (ಎಡಗೈ ವೇಗಿ, ಆಸ್ಟ್ರೇಲಿಯಾ)

ವಿಶ್ವಕಂಡ ಅತ್ಯನ್ನತ ಎಡಗೈ ವೇಗದ ಬೌಲರ್‌ಗಳಲ್ಲಿ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌ ಕೂಡ ಒಬ್ಬರು. ಅಂತೆಯೇ ತಮ್ಮ ಖದರ್‌ ಪ್ರದರ್ಶಿಸಿದ ಸ್ಟಾರ್ಕ್‌, ಆಡಿದ 10 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಉರುಳಿಸಿ ಒಂದೇ ಆವೃತ್ತಿಯ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಎಂಬ ವಿಶ್ವ ದಾಖಲೆ ಬರೆದರು. 2015ರ ವಿಶ್ವಕಪ್‌ನಲ್ಲೂ ಸ್ಟಾರ್ಕ್‌ 8 ಪಂದ್ಯಗಳಿಂದ 22 ವಿಕೆಟ್‌ ಉರುಳಿಸಿ ಮಿಂಚಿದ್ದರು. ಹೀಗಾಗಿ ತಂಡದ ಬೌಲಿಂಗ್‌ ವಿಭಾಗದಲ್ಲಿ ಸ್ಟಾರ್ಕ್‌ ಪ್ರಮುಖ ಅಸ್ತ್ರವಾಗಿ ಕಾಣಿಸಿಕೊಳ್ಳುತ್ತಾರೆ.

9. ಜೋಫ್ರಾ ಆರ್ಚರ್‌ (ಬಲಗೈ ವೇಗಿ, ಇಂಗ್ಲೆಂಡ್‌)

9. ಜೋಫ್ರಾ ಆರ್ಚರ್‌ (ಬಲಗೈ ವೇಗಿ, ಇಂಗ್ಲೆಂಡ್‌)

ಇಂಗ್ಲೆಂಡ್‌ ವಿಶ್ವಕಪ್‌ ಗೆದ್ದರೆ ಅದರಲ್ಲಿ ಜೋಫ್ರಾ ಆರ್ಚರ್‌ ಅವರ ಬೌಲಿಂಗ್‌ ಮಹತ್ವದ ಪಾತ್ರ ವಹಿಸುತ್ತದೆ ಎಂದು ಟೂರ್ನಿಗೆ ಮೊದಲೇ ಇಂಗ್ಲೆಂಡ್‌ನ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಮತ್ತು ಮಾಜಿ ನಾಯಕ ಮೈಕಲ್‌ ವಾನ್‌ ಭವಿಷ್ಯ ನುಡಿದಿದ್ದರು. ಅಂತೆಯೇ ಫೈನಲ್‌ ಪಂದ್ಯದ ಸೂಪರ್‌ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದು 24 ವರ್ಷದ ವೇಗಿ ಆರ್ಚರ್‌. ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಆಡಿದ 11 ಪಂದ್ಯಗಳಿಂದ ಆರ್ಚರ್‌ 20 ವಿಕೆಟ್‌ ಉರುಳಿಸಿದ್ದು, ಕನಸಿನ ತಂಡದಲ್ಲೂ ಪ್ರಮುಖ ಬೌಲರ್‌ ಆಗಿ ಕಾಣಿಸಿಕೊಂಡಿದ್ದಾರೆ.

10. ಲಾಕಿ ಫರ್ಗ್ಯೂಸನ್‌ (ಬಲಗೈ ವೇಗಿ, ನ್ಯೂಜಿಲೆಂಡ್‌)

10. ಲಾಕಿ ಫರ್ಗ್ಯೂಸನ್‌ (ಬಲಗೈ ವೇಗಿ, ನ್ಯೂಜಿಲೆಂಡ್‌)

ಇಂಗ್ಲೆಂಡ್‌ ಪಿಚ್‌ಗಳಲ್ಲಿ ಈ ಬಾರಿ ವೇಗದ ಬೌಲರ್‌ಗಳದ್ದೇ ಅಬ್ಬರ. ಅಂತೆಯೇ ನ್ಯೂಜಿಲೆಂಡ್‌ ತಂಡದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಲಾಕಿ ಫರ್ಗ್ಯೂಸನ್‌ (21) ಯಾವುದೇ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳುತ್ತಾರೆ. ಚೆಂಡಿಗೆ ಹೆಚ್ಚುವರಿ ವೇಗದ ತರಬಲ್ಲ ಸಾಮರ್ಥ್ಯದಿಂದಲೇ ಬ್ಯಾಟ್ಸ್‌ಮನ್‌ಗಳಿಗೆ ದುಃಸ್ವಪ್ನವಾಗಿರುವ ಫರ್ಗ್ಯೂಸನ್‌ ಕನಸಿನ ತಂಡದ ಪ್ರಮುಖ ವೇಗಿಗಳಲ್ಲಿ ಒಬ್ಬರು.

11. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ, ಭಾರತ)

11. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ, ಭಾರತ)

ಏಕದಿನ ಕ್ರಿಕೆಟ್‌ನ ನಂ.1 ಬೌಲರ್‌ ಜಸ್‌ಪ್ರೀತ್‌ ಬುಮ್ರಾ. ಟೀಮ್‌ ಇಂಡಿಯಾ ಲೀಗ್‌ ಹಂತದಲ್ಲಿ ಅಂಕಪಟ್ಟಿಯ ಅಗ್ರಸ್ಥಾನಕ್ಕೇರಲು ಬುಮ್ರಾ ಅವರ ಬೌಲಿಂಗ್‌ ಪ್ರದರ್ಶನ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಆಡಿದ 9 ಪಂದ್ಯಗಳಿಂದ 18 ವಿಕೆಟ್‌ಗಳನ್ನು ಉರುಳಿಸಿದ ಜಸ್‌ಪ್ರೀತ್‌, ಟೂರ್ನಿಯಲ್ಲಿ ಅತಿ ಹೆಚ್ಚು ಮೇಡಿನ್‌ ಓವರ್‌ಗಳನ್ನು ಎಸೆದ ದಾಖಲೆ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಡೆತ್‌ ಓವರ್‌ಗಳಲ್ಲಿ ಅತ್ಯಂತ ಕಡಿಮೆ ರನ್‌ಗಳನ್ನು ಬಿಟ್ಟುಕೊಟ್ಟ ಬೌಲರ್‌ ಕೂಡ. ಹೀಗಾಗಿ ಕನಸಿನ ತಂಡ ನಂ.11 ಸ್ಥಾನಕ್ಕೆ ಬುಮ್ರಾ ಪರಿಪೂರ್ಣ ಆಯ್ಕೆಯಾಗಿದ್ದಾರೆ.

Story first published: Monday, July 15, 2019, 19:37 [IST]
Other articles published on Jul 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X