ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊನೆಯ 6 ಎಸೆತಕ್ಕೆ 20 ರನ್: KPLನಲ್ಲಿ ಮೈಸೂರು ವಾರಿಯರ್ಸ್ ದಾಖಲೆ ರನ್ ಚೇಸ್

By ಚಕ್ರವರ್ತಿ
Mysore Warriors Great Win Against Bellary Tuskers

ಮೈಸೂರು, ಆಗಸ್ಟ್ 27: ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜು ಒಡೆಯರ್ ಸ್ಟೇಡಿಯಂನಲ್ಲಿ ನಡೆದ ಕೆಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ದಾಖಲೆ ಬರೆದಿದೆ. 241ರನ್ ಗಳ ಬೃಹತ್ ಮೊತ್ತವನ್ನ ಚೇಸ್ ಮಾಡುವ ಮೂಲಕ ಕೆಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದೆ.

ಮೊದಲು ಟಾಸ್ ಗೆದ್ದು ಬ್ಯಾಟ್ ಮಾಡಿದ ಬಳ್ಳಾರಿ ಟಸ್ಕರ್ಸ್ ನಾಯಕ ಸಿಎಂ ಗೌತಮ್ ಅವರ 92* ರನ್ ಗಳ ಅಮೋಘ ಆಟದ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 241 ರನ್ ಬಾರಿಸಿತ್ತು. ಬೃಹತ್ ಮೊತ್ತ ಗುರಿ ಬೆನ್ನತ್ತಿದ್ದ ಮೈಸೂರು ವಾರಿಯರ್ಸ್ ಅನಿರುದ್ಧ ಜೋಶಿ ಅವರ ಭರ್ಜರಿ 125 ರನ್ ಸಹಾಯದಿಂದ 241 ರನ್ ಚೇಸ್ ಮಾಡಿ ದಾಖಲೆ ಮಾಡಿದೆ.

ಕೆಪಿಎಲ್ 2019: ಹುಬ್ಳಿ ಟೈಗರ್ಸ್ ಕಟ್ಟಿಹಾಕಿದ ಮೈಸೂರು ವಾರಿಯರ್ಸ್ ಕೆಪಿಎಲ್ 2019: ಹುಬ್ಳಿ ಟೈಗರ್ಸ್ ಕಟ್ಟಿಹಾಕಿದ ಮೈಸೂರು ವಾರಿಯರ್ಸ್

ಪಂದ್ಯದ ಕೊನೆಯ ಆರು ಎಸೆತದಲ್ಲಿ 20 ರನ್ ಬೇಕಿತ್ತು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಮೈಸೂರು ವಾರಿಯರ್ಸ್ ಗೆಲುವಿನ ಕೇಕೆ ಹಾಕಿದರು. ಪೂರ್ತಿ ವಿವರ ಮುಂದೆ ಓದಿ...

ಎರಡನೇ ಬೃಹತ್ ಮೊತ್ತ ಇದು

ಎರಡನೇ ಬೃಹತ್ ಮೊತ್ತ ಇದು

ಟಾಸ್ ಗೆದ್ದ ಬ್ಯಾಟಿಂಗ್ ಮಾಡಿದ ಬಳ್ಳಾರಿ ಟಸ್ಕರ್ಸ್ ಪರ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ರೆಡ್ಡಿ 32, ನಾಯಕ ಸಿಎಂ ಗೌತಮ್ 92, ಕೃಷ್ಣಪ್ಪ ಗೌತಮ್ 48 ಹಾಗೂ ದೇವದತ್ ಪಡಿಕ್ಕಲ್ 57 ಬಾರಿಸಿದ್ದರು. ಮೈಸೂರು ವಾರಿಯರ್ಸ್ ಪರ ವೈಶಾಕ್ ಎರಡು ವಿಕೆಟ್ ಪಡೆದಿದ್ದರು. ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 240 ರನ್ ಪೇರಿಸಿತ್ತು. ಕೆಪಿಎಲ್ ಇತಿಹಾಸದಲ್ಲಿ ಇದು ಎರಡನೇ ಅತಿ ದೊಡ್ಡ ಮೊತ್ತ. ಈ ಮೊದಲು ಹುಬ್ಬಳ್ಳಿ ಟೈಗರ್ಸ್ 2014ರಲ್ಲಿ ರಾಕ್ ಸ್ಟಾರ್ ತಂಡದ ವಿರುದ್ಧ 245 ರನ್ ಬಾರಿಸಿದ್ದರು.

ಜೋಶಿ ಸಿಡಿಲಬ್ಬರದ ಶತಕ

ಜೋಶಿ ಸಿಡಿಲಬ್ಬರದ ಶತಕ

ದೊಡ್ಡ ಮೊತ್ತವನ್ನ ಚೇಸ್ ಮಾಡಿದ ಮೈಸೂರು ವಾರಿಯರ್ಸ್ ಮೊದಲ ಮೂರು ವಿಕೆಟ್ ಬೇಗನೆ ಕಳೆದುಕೊಂಡಿತು. ಈ ವೇಳೆ ಕ್ರೀಸ್ ಗೆ ಬಂದ ಅನಿರುದ್ಧ ಜೋಶಿ 58 ಎಸೆತದಲ್ಲಿ 125 ರನ್ ಹೊಡೆದರು. ಇದರಲ್ಲಿ 9 ಸಿಕ್ಸರ್ ಹಾಗೂ 7 ಬೌಂಡರಿ ಸೇರಿದ್ದವು.

ಕೆಪಿಎಲ್‌ 2019: ಭರತ್‌ ಚಿಪ್ಲಿ ಭರ್ಜರಿ ಬ್ಯಾಟಿಂಗ್‌, ಬುಲ್ಸ್ ಗೆ ಸುಲಭ ಜಯ

ಗೆಲುವಿನ ದಡ ಸೇರಿಸಿದ ಮಂಜಿಶ್ ರೆಡ್ಡಿ

ಗೆಲುವಿನ ದಡ ಸೇರಿಸಿದ ಮಂಜಿಶ್ ರೆಡ್ಡಿ

ಭಾರಿ ರೋಚಕವಾಗಿದ್ದ ಪಂದ್ಯದ ಕೊನೆಯ ಓವರ್ ನಲ್ಲಿ 6 ಎಸೆತಗಳಲ್ಲಿ 20 ರನ್ ಬೇಕಿತ್ತು. ಮೊದಲ ಎಸೆತ 4, ಎರಡನೇ ಎಸೆತ ವಿಕೆಟ್, ಮೂರನೇ ಎಸೆತ 2, ನಾಲ್ಕನೇ ಎಸೆತ 6, ಐದನೇ ಎಸೆತ 2 ಹಾಗೂ ಆರನೇ ಎಸೆತದಲ್ಲಿ 6 ಸಿಕ್ಸರ್ ಬಾರಿಸಿ ಗೆಲುವಿನ ಕೇಕೆ ಹಾಕಿದರು. ಅಂತಿಮ ಒವರ್ ಗಳಲ್ಲಿ ಕ್ರೀಸ್ ಗೆ ಬಂದ ಮಂಜೀಶ್ ರೆಡ್ಡಿ 9 ಎಸೆತಗಳಲ್ಲಿ 30 ಬಾರಿಸಿ ವಿಜಯದ ಪತಾಕೆ ಹಾರಿಸಿದರು.

ಬಳ್ಳಾರಿ ಸೇಫ್, ಮೈಸೂರು ಮೂರನೇ ಸ್ಥಾನ

ಬಳ್ಳಾರಿ ಸೇಫ್, ಮೈಸೂರು ಮೂರನೇ ಸ್ಥಾನ

ಒಟ್ಟು ಆಡಿರುವ ಆರು ಪಂದ್ಯಗಳಲ್ಲಿ ಎರಡು ಪಂದ್ಯವನ್ನ ಗೆದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಎರಡು ಪಂದ್ಯ ಮಳೆ ಅಡ್ಡಿಯಾಗಿ ರದ್ದಾಗಿತ್ತು. ಎರಡು ಪಂದ್ಯ ಸೋತಿತ್ತು. 8 ಅಂಕ ಪಡೆದಿರುವ ಬಳ್ಳಾರಿ ಟಸ್ಕರ್ಸ್ ಮೊದಲ ಸ್ಥಾನದಲ್ಲಿದ್ದರೆ, 7 ಅಂಕಗಳೊಂದಿಗೆ ಬೆಳಗಾವಿ ಪ್ಯಾಂಥರ್ಸ್ ಮೂರನೇ ಸ್ಥಾನದಲ್ಲಿದ್ದಾರೆ.

Story first published: Tuesday, August 27, 2019, 16:01 [IST]
Other articles published on Aug 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X