ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮೂರ ಪ್ರತಿಭೆ: ಕಿರಿಯ ವಯಸ್ಸಿನಲ್ಲಿಯೇ ಹಲವು ಸಾಧನೆಗೈದ ತುಮಕೂರಿನ ಕುವರಿ ಪ್ರಿಯಾ ಮೋಹನ್

Nammura Pratibhe: Tumkurs athlete Priya Mohans journey from school level to international level

ಪ್ರಿಯಾ ಹಬ್ಬತ್ತನಹಳ್ಳಿ ಮೋಹನ್, 2003 ಮಾರ್ಚ್ 15ರಂದು ಜನಿಸಿದ ಈ ಪ್ರತಿಭೆ ಕರ್ನಾಟಕದ ತುಮಕೂರು ಜಿಲ್ಲೆಯ ಹಬ್ಬತ್ತನಹಳ್ಳಿಯ ಮೂಲದವರು. ಈಗಿನ್ನೂ 19 ವರ್ಷ ಹರೆಯದ ಪ್ರಿಯಾ ಮೋಹನ್ ಕಳೆದ ಮೂರ್ನಾಲ್ಕು ವರ್ಷಗಳಿಂದ 400 ಮೀಟರ್ ಓಟದಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ ತನ್ನ ಹೆಸರಿನಲ್ಲಿ ಹಲವು ಪ್ರಸಿದ್ಧ ಪ್ರಶಸ್ತಿ ಹಾಗೂ ಪದಕಗಳನ್ನು ಹೊಂದಿದ್ದಾರೆ.

'ನನ್ನ ಎಸೆತಗಳನ್ನು ಧೈರ್ಯವಾಗಿ ಎದುರಿಸಲಾರ'; ಹಳೇ ಹೇಳಿಕೆ ಕೆದಕಿ ರೋಹಿತ್‌ಗೆ ಟಾಂಗ್ ಕೊಟ್ಟ ಪಾಕ್ ಕ್ರಿಕೆಟಿಗ'ನನ್ನ ಎಸೆತಗಳನ್ನು ಧೈರ್ಯವಾಗಿ ಎದುರಿಸಲಾರ'; ಹಳೇ ಹೇಳಿಕೆ ಕೆದಕಿ ರೋಹಿತ್‌ಗೆ ಟಾಂಗ್ ಕೊಟ್ಟ ಪಾಕ್ ಕ್ರಿಕೆಟಿಗ

ಭಾರತದ ಅತಿವೇಗದ ಕ್ವಾರ್ಟರ್ ಮೈಲ್ ಓಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಪ್ರಿಯಾ ಹೆಚ್ ಮೋಹನ್ ಕಳೆದ 4 ವರ್ಷಗಳಲ್ಲಿ ಹಲವಾರು ಶ್ರೇಯಾಂಕಗಳನ್ನು ದಾಟಿ ದೇಶದ ವಿವಿಧ ಸಾಧಕರ ದಾಖಲೆಗಳನ್ನು ಸರಿಗಟ್ಟಿರುವ ಕೀರ್ತಿಯನ್ನು ಸಂಪಾದಿಸಿದ್ದಾರೆ.

8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು

ಸದ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಮುರಿದು ಮಿಂಚುತ್ತಿರುವ ಈ ಪ್ರತಿಭೆ 3 ವರ್ಷಗಳ ಹಿಂದೆ ಶಾಲಾ ಮಟ್ಟದ ಓಟಗಳಲ್ಲಿ ಪ್ರತಿನಿಧಿಸುತ್ತಿದ್ದರು ಎಂಬುದನ್ನು ನಂಬಲೇಬೇಕು. ಹೀಗೆ ಶಾಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದ ಪ್ರಿಯಾ ಮೋಹನ್ ಸದ್ಯ ಏಷ್ಯಾ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಸಂಪಾದಿಸಿರುವ ಹಿರಿಮೆ ಹೊಂದಿದ್ದಾರೆ.

ಪ್ರಿಯ ಮೋಹನ್ ಕಿರುಪರಿಚಯ

ಪ್ರಿಯ ಮೋಹನ್ ಕಿರುಪರಿಚಯ

ಮೂಲತಃ ತುಮಕೂರು ಜಿಲ್ಲೆಯ ಪ್ರಿಯಾ ಮೋಹನ್ ಅವರ ತಂದೆ ಎಚ್ ಎ ಮೋಹನ್ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ತಾಯಿ ಚಂದ್ರಕಲಾ ಗೃಹಿಣಿ. ಪ್ರಿಯಾ ಮೋಹನ್ ಜೈನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಶಾಲಾ ಮಟ್ಟದಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ

ಶಾಲಾ ಮಟ್ಟದಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ

ಇನ್ನು 2018ರಲ್ಲಿ ಐಸಿಎಸ್ಇ ಸ್ಕೂಲ್ಸ್ ನ್ಯಾಷನಲ್ಸ್ ಕ್ರೀಡಾಕೂಟದಲ್ಲಿ ಪ್ರಿಯ ಮೋಹನ್ ಭಾಗವಹಿಸಿದ್ದಾಗ ಆಕೆಯನ್ನು ಗುರುತಿಸಿದ ಕೋಚ್ ಅರ್ಜುನ್ ಅಜಯ್ ನಂತರದ ದಿನಗಳಲ್ಲಿ ಆಕೆಗೆ ತರಬೇತಿ ನೀಡುತ್ತಾ ಬಂದಿದ್ದಾರೆ. ಅರ್ಜುನ್ ಅಜಯ್ ಮಾರ್ಗದರ್ಶನದಲ್ಲಿ ಪ್ರಿಯ ಮೋಹನ್ 400 ಮೀಟರ್ ಕ್ರಮಿಸಲು ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಸುಧಾರಣೆಯನ್ನು ಕಂಡರು. ಇದಕ್ಕೂ ಮುನ್ನ 400 ಮೀಟರ್ ಕ್ರಮಿಸಲು 1 ನಿಮಿಷ 5 ಸೆಕೆಂಡ್ ತೆಗೆದುಕೊಳ್ಳುತ್ತಿದ್ದ ಪ್ರಿಯ ಮೋಹನ್ ನಂತರ ಕೇವಲ 57.81 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಪೂರೈಸಿದರು. ನಂತರ 1 ವರ್ಷದಲ್ಲಿ ಮತ್ತೆ ತೆಗೆದುಕೊಳ್ಳುತ್ತಿದ್ದ ಸಮಯದಲ್ಲಿ ಇಳಿಕೆ ಕಂಡ ಪ್ರಿಯ ಮೋಹನ್ 53.62 ಸೆಕೆಂಡುಗಳಲ್ಲಿ 400 ಮೀಟರ್ ಓಟವನ್ನು ಪೂರೈಸಿದರು ಹಾಗೂ ಅದೇ ವರ್ಷದಲ್ಲಿ ನಡೆದ ಏಷಿಯನ್ ಯೂತ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ರಿಲೇ ವಿಭಾಗದಲ್ಲಿ ಪದಕವನ್ನು ಕೂಡ ಗೆದ್ದರು.

ಪ್ರಿಯ ಮೋಹನ್ ಪದಕ ಸಂಪಾದನೆ ಮತ್ತು ಸಾಧನೆಗಳು

ಪ್ರಿಯ ಮೋಹನ್ ಪದಕ ಸಂಪಾದನೆ ಮತ್ತು ಸಾಧನೆಗಳು

• 2019ರಲ್ಲಿ ನಡೆದ ಸೌತ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ - 400 ಮೀ ಓಟ - ಬೆಳ್ಳಿ ಪದಕ

• ಪಟಿಯಾಲಾದಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ 400 ಮೀ ಓಟದಲ್ಲಿ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಎಂ ಆರ್ ಪೂವಮ್ಮ ಜಿಸ್ನಾ ಮ್ಯಾಥ್ಯೂ ಅವರನ್ನು ಹಿಂದಿಕ್ಕಿದ ಪ್ರಿಯ ಮೋಹನ್ ಚಿನ್ನದ ಪದಕವನ್ನು ಗೆದ್ದರು.

• 2022ರ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ಆಲ್ ಇಂಡಿಯಾ ಯೂನಿವರ್ಸಿಟಿ ವುಮೆನ್ಸ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ

• 2022ರ ಮೇ ತಿಂಗಳಿನಲ್ಲಿ ನಡೆದ ಖೇಲೋ ಇಂಡಿಯಾ ಗೇಮ್ಸ್ ಕ್ರೀಡಾಕೂಟದಲ್ಲಿ 200 ಮೀ ಓಟವನ್ನು 23.90 ಸೆಕೆಂಡುಗಳಲ್ಲಿ ಪೂರೈಸಿದ ಪ್ರಿಯ ಮೋಹನ್ ಖ್ಯಾತ ದ್ಯುತಿ ಚಂದ್ ಅವರನ್ನು ಮಣಿಸಿದರು. ಹಾಗೂ ಇದೇ ಕ್ರೀಡಾಕೂಟದಲ್ಲಿನ 400 ಮೀ ಓಟದಲ್ಲಿಯೂ ಪ್ರಿಯ ಮೋಹನ್ ಚಿನ್ನ ಗೆದ್ದರು.

Story first published: Tuesday, June 21, 2022, 20:18 [IST]
Other articles published on Jun 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X