ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್; ಪಾಕ್ ಯುವವೇಗಿಗಿಲ್ಲ ತಂಡದಲ್ಲಿ ಸ್ಥಾನ!

Naseem Shah Withdrawn From Pakistan U19 World Cup Squad

ಐಸಿಸಿ ಅಂಡರ್ 19 ವಿಶ್ವಕಪ್‌ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಎಲ್ಲಾ ತಂಡಗಳು ಕೂಡ ತಮ್ಮ ತಮ್ಮ ಆಡುವ ಬಳಗವನ್ನು ಪ್ರಕಟಿಸಿವೆ. ಪಾಕಿಸ್ತಾನ ತಂಡ ಕೂಡ ನಿನ್ನೆಯಷ್ಟೇ ಅಂಡರ್‌ 19 ತಂಡವನ್ನು ಪ್ರಕಟಿಸಿದೆ. ಪಾಕಿಸ್ತಾನದ ಯುವ ವೇಗಿ ನಸೀಮ್ ಶಾ ಅವರನ್ನು ಹೊರಗಿಟ್ಟು ತಂಡವನ್ನು ಪ್ರಕಟಿಸಲಾಗಿದೆ.

ಪಾಕಿಸ್ತಾನ ಹಿರಿಯರ ತಂಡದಲ್ಲಿ ಅವಕಾಶವನ್ನು ಪಡೆದಿರುವ ನಸೀಮ್ ಶಾ ಈಗಾಗಲೇ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ಕೇವಲ ಮೂರು ಪಂದ್ಯಗಳಲ್ಲಿ ಆಡಿರುವ ನಸೀಮ್ ಶಾ ಒಂದು ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ ಗೊಂಚಲನ್ನು ಪಡೆದಿ ಮಿಂಚಿದ್ದಾರೆ. ಈ ಮೂಲಕ ತಾನೊಬ್ಬ ಭವಿಷ್ಯದ ಬೌಲರ್‌ ಎಂದು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಲೀಮ್ ಜಾಫರ್ ನೇತೃತ್ವದ ಪಾಕಿಸ್ತಾನ ಜ್ಯೂನಿಯರ್ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ನಸೀಮ್ ಶಾ ಬದಲಿಗೆ ಮೊಹಮ್ಮದ್ ವಾಸೀಮ್ ಜ್ಯೂನಿಯರ್ ಅವರಿಗೆ ಅವಕಾಶವನ್ನು ನೀಡಿದೆ.

ಹಿಂದು ಎಂಬ ಕಾರಣಕ್ಕೆ ದಾನಿಶ್ ಕನೇರಿಯಾ ತಾರತಮ್ಯಕ್ಕೆ ಒಳಗಾಗಿದ್ದರು; ಶೋಯೆಬ್ ಅಖ್ತರ್ಹಿಂದು ಎಂಬ ಕಾರಣಕ್ಕೆ ದಾನಿಶ್ ಕನೇರಿಯಾ ತಾರತಮ್ಯಕ್ಕೆ ಒಳಗಾಗಿದ್ದರು; ಶೋಯೆಬ್ ಅಖ್ತರ್

ನಸೀಮ್ ಶಾ ಅವರನ್ನು ಅಂಡರ್ 19 ವಿಶ್ವಕಪ್‌ ತಂಡದಿಂದ ಕೈ ಬಿಟ್ಟಿರುವ ಬಗ್ಗೆ ಪಿಸಿಬಿ ಮುಖ್ಯಸ್ಥ ವಾಸೀಮ್ ಖಾನ್ ಹೇಳಿಕೆ ನೀಡಿದ್ದಾರೆ. 'ಐಸಿಸಿ ಅಂಡರ್19 ವಿಶ್ವಕಪ್ ಭವಿಷ್ಯದ ತಾರೆಗಳಿಗೆ ಸಾಮರ್ಥ್ಯವನ್ನು ತೋರ್ಪಡಿಸಲು ಒಂದು ದೊಡ್ಡ ಅವಕಾಶ. ನಸೀಮ್ ಶಾ ಅವರು ಈಗಾಗಲೇ ಹಿರಿಯರ ತಂಡದಲ್ಲಿ ಅವಕಾಶವನ್ನು ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೀಗಾಗಿ ಇನ್ನೊಬ್ಬ ಆಟಗಾರನಿಗೆ ಅವಕಾಶವನ್ನು ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ನಸೀಮ್ ಶಾ ಅವರು ಪಾಕಿಸ್ತಾನದಲ್ಲೇ ಉಳಿದುಕೊಂಡು ತರಬೇತಿಯನ್ನು ಮುಂದುವರಿಸಲಿದ್ದಾರೆ. ಪಾಕಿಸ್ತಾನದ ಬೌಲಿಂಗ್ ಕೋಚ್ ವಾಖರ್ ಯೂನಿಸ್ ಅವರು ನಸೀಮ್ ಶಾ ಅವರಿಗೆ ತರಬೇತಿಯನ್ನು ಪಡೆದುಕೊಳ್ಳಲಿದ್ದು ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ತಂಡದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಿಸಿಬಿ ಅಧ್ಯಕ್ಷ ವಾಸಿಮ್ ಖಾನ್ ಹೇಳಿದ್ದಾರೆ.

ದಶಕದ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್; ತಟಸ್ಥ ಸ್ಥಳದ ಬದಲು ಪಾಕ್‌ನಲ್ಲೆ ಪಂದ್ಯ ಎಂದ ಪಿಸಿಬಿ ಅಧ್ಯದಶಕದ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್; ತಟಸ್ಥ ಸ್ಥಳದ ಬದಲು ಪಾಕ್‌ನಲ್ಲೆ ಪಂದ್ಯ ಎಂದ ಪಿಸಿಬಿ ಅಧ್ಯ

ಅಂಡರ್19 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ 2004 ಮತ್ತು 2006 ಚಾಂಪಿಯನ್ ಆಗ ಹೊರಹೊಮ್ಮಿತ್ತು. ಈ ವಿಶ್ವಕಪ್‌ನಲ್ಲಿ ಸಿ ಗುಂಪಿನಲ್ಲಿ ಪಾಕಿಸ್ತಾನ ತಂಡ ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ಬಾಂಗ್ಲಾದೇಶದ ವಿರುದ್ಧ ಗ್ರೂಪ್ ಹಂತದಲ್ಲಿ ಕಾದಾಟ ನಡೆಸಲಿದೆ.

Story first published: Wednesday, January 1, 2020, 11:56 [IST]
Other articles published on Jan 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X